ಒಂದೇ ತಿಂಗಳಲ್ಲಿ ಜಿಯೋಗೆ 31 ಲಕ್ಷ ಹೊಸ ಗ್ರಾಹಕರ ಸೇರ್ಪಡೆ; 20 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್

|

Updated on: Jan 04, 2024 | 5:03 PM

Reliance Jio Tops: 2023ರ ಅಕ್ಟೋಬರ್ ತಿಂಗಳಲ್ಲಿ ರಿಲಾಯನ್ಸ್ ಜಿಯೋಗೆ 31.59 ಲಕ್ಷ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಏರ್ಟೆಲ್​ಗೆ 3.52 ಲಕ್ಷ ಹೊಸ ಗ್ರಾಹಕರು ಸಿಕ್ಕಿದ್ದಾರೆ. ವೊಡಾಫೋನ್ ಐಡಿಯಾ ಸಂಸ್ಥೆ ಇದೇ ಅವಧಿಯಲ್ಲಿ 20.44 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಜಿಯೋದಲ್ಲಿ 45.23 ಕೋಟಿ, ಏರ್ಟೆಲ್​ನಲ್ಲಿ 37.81 ಕೋಟಿ, ವೊಡಾಫೋನ್​ನಲ್ಲಿ 22.54 ಕೋಟಿ ವೈರ್ಲೆಸ್ ಸೇವೆ ಪಡೆಯುವ ಗ್ರಾಹಕರಿದ್ದಾರೆ.

ಒಂದೇ ತಿಂಗಳಲ್ಲಿ ಜಿಯೋಗೆ 31 ಲಕ್ಷ ಹೊಸ ಗ್ರಾಹಕರ ಸೇರ್ಪಡೆ; 20 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್
ಮೊಬೈಲ್ ಗ್ರಾಹಕರು
Follow us on

ನವದೆಹಲಿ, ಜನವರಿ 4: ಭಾರತದ ಟೆಲಿಕಾಂ ಕಂಪನಿಗಳು (telecom companies) ಹೊಸ ಗ್ರಾಹಕರನ್ನು ಸೆಳೆಯಲು ಕಸರತ್ತು ನಡೆಸುವುದು ಮುಂದುವರಿದಿದೆ. ಈ ಕಾರ್ಯದಲ್ಲಿ ಜಿಯೋ ಅತಿಹೆಚ್ಚು ಗ್ರಾಹಕರನ್ನು ಸೆಳೆದಿದೆ. ವೊಡಾಫೋನ್ ಐಡಿಯಾ ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡದೆ. ಟ್ರಾಯ್ ಬಿಡುಗಡೆ ಮಾಡಿದ ಅಕ್ಟೋಬರ್ ತಿಂಗಳ ಸಬ್​ಸ್ಕ್ರೈಬರ್ ಮಾಹಿತಿ ಪ್ರಕಾರ ರಿಲಾಯನ್ಸ್ ಜಿಯೋ ಆ ಒಂದು ತಿಂಗಳಲ್ಲಿ 31.59 ಲಕ್ಷ ಮೊಬೈಲ್ ಬಳಕೆದಾರರನ್ನು ಹೊಸದಾಗಿ ಗಳಿಸಿದೆ. ಭಾರ್ತಿ ಏರ್ಟೆಲ್ ಸಂಸ್ಥೆ ಗಳಿಸಿದ ಗ್ರಾಹಕ ಸಂಖ್ಯೆ ಕೇವಲ 3.52 ಲಕ್ಷ ಮಾತ್ರ. ಇದೇ ವೇಳೆ, ಅಕ್ಟೋಬರ್ ತಿಂಗಳಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆ 20.44 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.

ಈ ಬೆಳವಣಿಗೆ ಬಳಿಕ ರಿಲಾಯನ್ಸ್ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಎಂಬ ಸ್ಥಾನವನ್ನು ಭದ್ರ ಮಾಡಿಕೊಂಡಿದೆ. ಸೆಪ್ಟೆಂಬರ್​ನಲ್ಲಿ 44.92 ಕೋಟಿ ಇದ್ದ ಜಿಯೋ ವೈರ್ಲೆಸ್ ಬಳಕೆದಾರರ ಸಂಖ್ಯೆ ಅಕ್ಟೋಬರ್ ಅಂತ್ಯದಲ್ಲಿ 45.23 ಕೋಟಿಗೆ ಏರಿದೆ.

ಇನ್ನು, ಭಾರ್ತಿ ಏರ್ಟೆಲ್​ನ ಮೊಬೈಲ್ ಸಬ್​ಸ್ಕ್ರೈಬರ್​ಗಳ ಸಂಖ್ಯೆ ಅಕ್ಟೋಬರ್​ನಲ್ಲಿ 37.81 ಕೋಟಿಗೆ ಹೆಚ್ಚಾಗಿದೆ.

ಬಂಡವಾಳದ ಕೊರತೆ ಎದುರಿಸುತ್ತಿರುವ ವೊಡಾಫೋನ್ ಐಡಿಯಾ ಸಂಸ್ಥೆಯ ವೈರ್ಲೆಸ್ ಸಬ್​ಸ್ಕ್ರೈಬರ್​ಗಳ ಸಂಖ್ಯೆ 22.54 ಕೋಟಿಗೆ ಇಳಿಮುಖವಾಗಿದೆ.

ಇದನ್ನೂ ಓದಿ: Flight Tickets: ಫುಯಲ್ ಚಾರ್ಜ್ ಹಿಂಪಡೆದ ಇಂಡಿಗೋ ಏರ್ಲೈನ್; ಇಳಿಕೆಯಾಗಲಿದೆ ವಿಮಾನ ಟಿಕೆಟ್ ಬೆಲೆ

ಅಕ್ಟೋಬರ್ 2023ರಲ್ಲಿ ಟೆಲಿಕಾಂ ಸಬ್​ಸ್ಕ್ರೈಬರ್​ಗಳ ಸಂಖ್ಯೆ…

  • ರಿಲಾಯನ್ಸ್ ಜಿಯೋ: 45.23 ಕೋಟಿ
  • ಭಾರ್ತಿ ಏರ್ಟೆಲ್: 37.81 ಕೋಟಿ
  • ವೊಡಾಫೋನ್ ಐಡಿಯಾ: 22.54 ಕೋಟಿ

ವೊಡಾಫೋನ್ ಐಡಿಯಾ ಸೆಟಿಲೈಟ್ ಸೇವೆಗೆ ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿ ಇತ್ತು. ಇದಾದ ಬಳಿಕ ವೊಡಾಫೋನ್​ನ ಷೇರುಬೆಲೆ ಏರತೊಡಗಿತು. ಆದರೆ, ವಿಐಎಲ್ ಈ ಸುದ್ದಿಯನ್ನು ನಿರಾಕರಿಸುತ್ತಿರುವಂತೆಯೇ ಅದರ ಷೇರುಬೆಲೆ ಕುಸಿಯತೊಡಗಿದೆ.

ಇನ್ನು, ವೊಡಾಫೋನ್ ಐಡಿಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಇಬ್ಬರು ಹಿರಿಯ ಎಕ್ಸಿಕ್ಯೂಟಿವ್​ಗಳು ರಾಜೀನಾಮೆ ನೀಡಿರುವುದೂ ಕೂಡ ಸಂಸ್ಥೆಗೆ ಹಿನ್ನಡೆ ತಂದಿದೆ. ಸಿಇಒ ಮತ್ತು ಸಿಆರ್​​ಒಗಳು ಕಂಪನಿ ತೊರೆದಿದ್ದಾರೆ.

ಇದನ್ನೂ ಓದಿ: Cyber Criminals: ಎರಡೂವರೆ ವರ್ಷದಲ್ಲಿ ಭಾರತದಿಂದ 10,300 ಕೋಟಿ ರೂ ಲಪಟಾಯಿಸಿದ್ದಾರೆ ಸೈಬರ್ ಕ್ರಿಮಿನಲ್​ಗಳು

ಅತ್ತ, ಭಾರತದ ನಂಬರ್ ಒನ್ ಟೆಲಿಕಾಂ ಆಪರೇಟರ್ ಆಗಿರುವ ರಿಲಾಯನ್ಸ್ ಜಿಯೋದಲ್ಲಿ ನಾಯಕತ್ವದಲ್ಲಿ ಸರಾಗ ಬದಲಾವಣೆ ಆಗಿದೆ. ಜಿಯೋ ಛರ್ಮನ್ ಆಗಿದ್ದ ಮುಕೇಶ್ ಅಂಬಾನಿ ಕೆಳಗಿಳಿದಿದ್ದಾರೆ. ಆ ಸ್ಥಾನಕ್ಕೆ ಮಗ ಆಕಾಶ್ ಅಂಬಾನಿ ಏರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ