Credit Suisse: ದಿವಾಳಿಯಾದ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಯುಬಿಎಸ್ ತೆಕ್ಕೆಗೆ; ಶ್ರೀಲಂಕಾ, ರಷ್ಯಾ ಸೇರಿದಂತೆ ಹಲವು ದೇಶಗಳಿಂದ ಹೊಸ ಗ್ರಾಹಕರು ಬೇಡ ಎಂದ ಯುಬಿಎಸ್

|

Updated on: Jun 12, 2023 | 10:54 AM

UBS AG Takeover of Credit Suisse Bank: ದಿವಾಳಿಯಂಚಿನಲ್ಲಿರುವ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಅನ್ನು ಖರೀದಿಸಿರುವ ಯುಬಿಎಸ್ ಎಜಿ ಇದೀಗ ಮುಂದಿನ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡಲು ನಿರ್ಧರಿಸಿದೆ. ಅಪಾಯ ಎನಿಸುವ ದೇಶಗಳಿಂದ ಯಾವ ಹೊಸ ಗ್ರಾಹಕರೂ ಬೇಡ ಎನ್ನುವ ಸೂಚನೆಯನ್ನು ಕ್ರೆಡಿಟ್ ಸ್ವೀಸ್ ಸಿಬ್ಬಂದಿಗೆ ನೀಡಿದೆ.

Credit Suisse: ದಿವಾಳಿಯಾದ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಯುಬಿಎಸ್ ತೆಕ್ಕೆಗೆ; ಶ್ರೀಲಂಕಾ, ರಷ್ಯಾ ಸೇರಿದಂತೆ ಹಲವು ದೇಶಗಳಿಂದ ಹೊಸ ಗ್ರಾಹಕರು ಬೇಡ ಎಂದ ಯುಬಿಎಸ್
ಕ್ರೆಡಿಟ್ ಸ್ವೀಸ್ ಬ್ಯಾಂಕ್
Follow us on

ಜುರಿಚ್, ಸ್ವಿಟ್ಜರ್​ಲೆಂಡ್: ವಿಶ್ವದ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿರುವ ಯುಬಿಎಸ್ ಎಜಿ (UBS AG) ದಿವಾಳಿಯಂಚಿನಲ್ಲಿದ್ದ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು (Credit Suisse Bank) ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದೆ. ಶನಿವಾರ ತುರ್ತಾಗಿ ಕ್ರೆಡಿಟ್ ಸ್ವೀಸ್ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭವಾಗಿತ್ತು. ಸೋಮವಾರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ವೇಳೆ ಕ್ರೆಡಿಟ್ ಸ್ವೀಸ್ ಬ್ಯಾಂಕ್​ನ ಕಾರ್ಯಚಟುವಟಿಕೆ ಮತ್ತು ವ್ಯವಹಾರದಲ್ಲಿ ಗಣನೀಯವಾದ ಬದಲಾವಣೆ ತರಲು ಹೊರಟಿದೆ ಯುಬಿಎಸ್. ಕ್ರೆಡಿಟ್ ಸ್ವೀಸ್ ಬ್ಯಾಂಕರ್​ಗಳ (ಸಿಬ್ಬಂದಿ) ಮೇಲೆ ಬಿಗಿ ನಿರ್ಬಂಧಗಳನ್ನು ಹಾಕಲು ನಿರ್ಧರಿಸಲಾಗಿದೆ. ರಷ್ಯಾ ಇತ್ಯಾದಿ ಹೈ ರಿಸ್ಕ್ ಎಂದು ಪರಿಗಣಿಸಲಾದ ದೇಶಗಳಿಂದ ಹೊಸ ಗ್ರಾಹಕರನ್ನು ತರದಂತೆ ನಿಷೇಧ ಕೂಡ ಹೇರಲು ಯುಬಿಎಸ್ ಯೋಜಿಸಿದೆ. ಇದೂ ಸೇರಿದಂತೆ 20ಕ್ಕೂ ನಿರ್ಬಂಧಗಳ ಪಟ್ಟಿಯನ್ನು ಇಟ್ಟುಕೊಂಡು ಯುಬಿಎಸ್ ಕಾಯುತ್ತಿದೆ. ಈ ಬಗ್ಗೆ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯಲ್ಲಿ ವಿವರವಾದ ವರದಿ ಪ್ರಕಟವಾಗಿದೆ.

ನಷ್ಟದಲ್ಲಿರುವ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು ಖರೀದಿಸಿದರೆ ಭಾರೀ ಹೊರೆಯಾದೀತೆಂದು ಯಾರೂ ಕೂಡ ಖರೀದಿಸಲು ಯಾರೂ ಮುಂದೆ ಬಂದಿರಲಿಲ್ಲ. ಯುಬಿಎಸ್ ಸಂಸ್ಥೆ ಕೂಡ ಹಿಂದೆ ಮುಂದೆ ನೋಡಿತ್ತು. ಭಾರೀ ದೊಡ್ಡ ಇತಿಹಾಸ ಇರುವ ಕ್ರೆಡಿಟ್ ಸ್ವೀಸ್ ದಿವಾಳಿಗೊಂಡ ಇತಿಹಾಸಪುಟ ಸೇರುವುದನ್ನು ತಪ್ಪಿಸಲು ಸ್ವಿಟ್ಚರ್​ಲೆಂಡ್ ಸರ್ಕಾರ ಪ್ರಯತ್ನಿಸಿ, ಯುಬಿಎಸ್ ಎಜಿ ಜೊತೆ ಸಂಧಾನ ನಡೆಸಿತು. ಈ ರಾಜಿ ಪ್ರಕಾರ ಕ್ರೆಡಿಟ್ ಸ್ವೀಸ್ ಸಂಸ್ಥೆಯನ್ನು ಖರೀದಿಸುವುದರಿಂದ ಯುಬಿಎಸ್​ಗೆ ಎದುರಾಗುವ ನಷ್ಟದಲ್ಲಿ ಸುಮಾರು 9 ಬಿಲಿಯನ್ ಸ್ವಿಸ್ ಫ್ರಾಂಕ್ (ಸುಮಾರು 82,000 ಕೋಟಿ ರೂ) ನಷ್ಟಭರಿಸಿಕೊಡುವುದಾಗಿ ಸ್ವಿಸ್ ಸರ್ಕಾರ ಭರವಸೆ ನೀಡಿದೆ. ಇದರೊಂದಿಗೆ ಯುಬಿಎಸ್ ಹೆಚ್ಚು ಆತಂಕ ಇಲ್ಲದೇ ಕ್ರೆಡಿಟ್ ಸ್ವೀಸ್ ಅನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿSpiceJet: ಸ್ಪೈಸ್​ಜೆಟ್ ಬಿಕ್ಕಟ್ಟು; ನ್ಯಾಯಮಂಡಳಿ ಬಳಿ ಇನ್ಸಾಲ್ವೆನ್ಸಿ ಕ್ರಮಕ್ಕೆ ಮನವಿ ಮಾಡಿದ ವಿಮಾನ ಗುತ್ತಿಗೆ ಸಂಸ್ಥೆ; ನನಗೇನೂ ಸಮಸ್ಯೆ ಇಲ್ಲ ಎನ್ನುವ ಸ್ಪೈಸ್​ಜೆಟ್

ಯುಬಿಎಸ್ ಮ್ಯಾನೇಜರ್​ಗಳ ಅನುಮತಿ ಇಲ್ಲದೇ ಏನೂ ಮಾಡುವಂತಿಲ್ಲ

ಕ್ರೆಡಿಟ್ ಸ್ವೀಸ್ ಬ್ಯಾಂಕ್ ಕೊಟ್ಟಿರುವ ಬಹುತೇಕ ಸಾಲಗಳು ಬಹಳ ರಿಸ್ಕಿ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾನು ಸ್ವಾಧೀನಕ್ಕೆ ತೆಗೆದುಕೊಂಡ ದಿನದಿಂದಲೇ ಕ್ರೆಡಿಟ್ ಸ್ವೀಸ್​ನ ಸಿಬ್ಬಂದಿ ಯಾವುದೇ ದೊಡ್ಡ ಸಾಲ ಕೊಡುವ ವಿಚಾರದಲ್ಲಿ ಯುಬಿಎಸ್ ಮ್ಯಾನೇಜರುಗಳ ಅನುಮತಿ ಪಡೆಯಲೇಬೇಕು ಎಂಬ ಸಂದೇಶವನ್ನು ಕೊಡಲಾಗಿದೆ.

ಹೆಚ್ಚು ಅಪಾಯ ಇರುವ ದೇಶಗಳಿಂದ ಹೊಸ ಗ್ರಾಹಕರನ್ನು ಪಡೆಯುವುದರಿಂದ ಹಿಡಿದು ಎರಡು ಡಜನ್ ನಿರ್ಬಂಧಗಳ ಪಟ್ಟಿಯನ್ನು ಯುಬಿಎಸ್ ಮಾಡಿದೆ. ಹಣ ಕಳ್ಳಸಾಗಾಣಿಕೆ, ತೆರಿಗೆ ವಂಚನೆ, ಭ್ರಷ್ಟಾಚಾರ ಇತ್ಯಾದಿ ಅಪಾಯಗಳುಳ್ಳ ಗ್ರಾಹಕರು ಬೇಡವೇ ಬೇಡ ಎಂಬುದು ಯುಬಿಎಸ್ ಉದ್ದೇಶ. ಈ ಹಿನ್ನೆಲೆಯಲ್ಲಿ ಉಕ್ರೇನ್ ದೇಶದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಅಲ್ಲಿನ ರಾಜಕಾರಣಿಗಳಿಗೂ ನಿರ್ಬಂಧ ಹೇರಹೊರಟಿದೆ.

ಸಿರಿವಂತರ ಐಷಾರಾಮಿ ಸೇವೆ ಮತ್ತು ವಸ್ತುಗಳೆನಿಸಿದ ಯಾಚ್ (ಒಂದು ರೀತಿಯ ದೋಣಿ), ಪ್ರೈವೇಟ್ ಜೆಟ್ ಇತ್ಯಾದಿ ಖರೀದಿಗೆ ಕ್ರೆಡಿಟ್ ಸ್ವೀಸ್ ಈ ಹಿಂದೆ ಬಹಳಷ್ಟು ದೊಡ್ಡ ಸಾಲಗಳನ್ನು ಗ್ರಾಹಕರಿಗೆ ಕೊಟ್ಟಿದ್ದಿದೆ. ಈಗ ಇವೆಲ್ಲದಕ್ಕೂ ನಿರ್ಬಂಧಗಳನ್ನು ಹಾಕಲಾಗುತ್ತಿದೆ. 60 ಮಿಲಿಯನ್ ಡಾಲರ್​ಗಿಂತ ಹೆಚ್ಚಿನ ಮೊತ್ತದ ಸಾಲ ಕೊಡುವುದಾದರೆ ಕ್ರೆಡಿಟ್ ಸ್ವೀಸ್ ಉದ್ಯೋಗಿಗಳು ಯುಬಿಎಸ್ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.

ಇದನ್ನೂ ಓದಿMoody’s: ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಶೇ 6ರಷ್ಟು ಮಾತ್ರ ಜಿಡಿಪಿ ವೃದ್ಧಿ: ಆರ್​ಬಿಐಗಿಂತ ಮೂಡೀಸ್ ಅಂದಾಜು ಭಿನ್ನ

ಈ ಕೆಲ ದೇಶಗಳಿಂದ ಗ್ರಾಹಕರು ಬೇಡ ಎನ್ನುತ್ತಿದೆ ಯುಬಿಎಸ್

  • ಅಫ್ಘಾನಿಸ್ತಾನ್
  • ಆಲ್ಬೇನಿಯಾ
  • ಬೆಲಾರಸ್
  • ಬರ್ಕಿನಾ ಫಾಸೋ
  • ಕಾಂಗೋ
  • ಎಲ್ ಸಾಲ್ವಡಾರ್
  • ಎರಿಟ್ರಿಯಾ
  • ಎಥಿಯೋಪಿಯಾ
  • ಗಿನಿಯಾ
  • ಹೈಟಿ
  • ಇರಾಕ್
  • ಕೊಸೋವೋ
  • ಕಿರ್ಗಿಸ್ತಾನ್
  • ಲಿಬಿಯಾ
  • ಮಾಲ್ಡೋವಾ
  • ಮಯನ್ಮಾರ್
  • ನಿಕಾರಾಗುವಾ
  • ಪ್ಯಾಲೆಸ್ಟೀನ್
  • ರಷ್ಯಾ
  • ಸೌತ್ ಸುಡಾನ್
  • ಶ್ರೀಲಂಕಾ
  • ಸೂಡಾನ್
  • ತಜಿಕಿಸ್ತಾನ್
  • ತುರ್ಕ್​ಮೆನಿಸ್ತಾನ್
  • ಉಜ್ಬೆಕಿಸ್ತಾನ್
  • ವೆನಿಜುವೆಲಾ
  • ಯೆಮೆನ್
  • ಜಿಂಬಾಬ್ವೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ