ಬೆಂಗಳೂರು, ನವೆಂಬರ್ 9: ಬೆಂಗಳೂರು ಮೂಲದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Ujjivan Small Finance Bank) ತನ್ನ ಗ್ರಾಹಕ ಸ್ನೇಹಿ ಧೋರಣೆಯ ಮುಂದುವರಿದ ಭಾಗವಾಗಿ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ (doorstep banking services) ಒದಗಿಸಲಿದೆ. ಬ್ಯಾಂಕ್ ಕಚೇರಿಗೆ ಹೋಗಲು ಕಷ್ಟಸಾಧ್ಯವಾಗುವ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನದ ವ್ಯಕ್ತಿಗಳಿಗೆ ಈ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಉಜ್ಜೀವನ್ ಘೋಷಿಸಿದೆ. ಕೋರಮಂಗಲದಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಬ್ಯಾಂಕ್ನ ನಿರ್ಧಾರದಿಂದ 1 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬದಂದು ಆರು ದಿನ ಬ್ಯಾಂಕುಗಳ ರಜೆ; ನಿಮ್ಮ ಪ್ರದೇಶದಲ್ಲಿ ಯಾವ್ಯಾವತ್ತು ಇದೆ ರಜೆ, ಇಲ್ಲಿದೆ ಪಟ್ಟಿ
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಶಾಖಾ ಕಚೇರಿಯಿಂದ ಬಹಳ ದೂರ ಇಲ್ಲದ ಸ್ಥಳಗಳಿಗೆ ಈ ರೀತಿ ಡೋರ್ಸ್ಟೆಪ್ ಬ್ಯಾಂಕಿಂಗ್ ಸರ್ವಿಸ್ ಒದಗಿಸಲಾಗುತ್ತದೆ. ಬ್ಯಾಂಕ್ ರಜಾ ದಿನಗಳಲ್ಲಿ ಇದು ಲಭ್ಯ ಇರುವುದಿಲ್ಲ. ಬ್ಯಾಂಕ್ ಕೆಲಸದ ಅವಧಿಯಲ್ಲಿ ಈ ಸೇವೆ ನೀಡಲಾಗುತ್ತದೆ.
ಒಬ್ಬ ಗ್ರಾಹಕ ಒಂದು ತಿಂಗಳಲ್ಲಿ ನಾಲ್ಕು ಬಾರಿ ಈ ಸೇವೆ ಪಡೆಯುವ ಅವಕಾಶ ಇರುತ್ತದೆ. ಈ ಸರ್ವಿಸ್ನಲ್ಲಿ ದಿನಕ್ಕೆ ಪಡೆಯಬಹುದಾದ ನಗದು ಹಣದ ಮಿತಿಯನ್ನು 25,000 ರೂಗೆ ಏರಿಸಲಾಗಿದೆ.
ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಗೆ ಹೋಗಿ ಈ ಸೇವೆಗಳನ್ನು ಬುಕ್ ಮಾಡಬಹುದು. ಫೋನ್ ಬ್ಯಾಂಕಿಂಗ್ ಮೂಲಕ 1800 208 2121 ನಂಬರ್ಗೆ ಡಯಲ್ ಮಾಡಿ ಡೋರ್ಸ್ಟೆಪ್ ಸರ್ವಿಸ್ ಯಾಚಿಸಬಹುದು.
ಇದನ್ನೂ ಓದಿ: ಮಕ್ಕಳಿಗೆಂದೇ ಪ್ರತ್ಯೇಕ ಬ್ಯಾಂಕ್; ಗುಜರಾತ್ನ ಬಾಲ ಗೋಪಾಲ್ ಬ್ಯಾಂಕ್; 17,000 ಮಕ್ಕಳ ಖಾತೆ, 16 ಕೋಟಿ ಠೇವಣಿ
‘ಗ್ರಾಹಕರ ಅಗತ್ಯಗಳನ್ನು ಪೂರೈಸುವುದರತ್ತ ನಮ್ಮ ಗಮನ ಇರುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ಅನುಭವ ಗಾಢಗೊಳಿಸಲು ಈ ಸೇವೆ ಒದಗಿಸಲಾಗುತ್ತದೆ. ಇದರಿಂದ ಎಲ್ಲರಿಗೂ ಕೂಡ ಬ್ಯಾಂಕಿಂಗ್ ಸೇವೆ ಸುಲಭವಾಗಿ ಸಿಗುವಂತಾಗುತ್ತದೆ,’ ಎಂದು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಎಂಡಿ ಮತ್ತು ಸಿಇಒ ಇತ್ತಿರಾ ಡೇವಿಸ್ ಹೇಳುತ್ತಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ಮುಖ್ಯ ಕಚೇರಿ ಹೊಂದಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ದೇಶಾದ್ಯಂತ 25 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 686 ಶಾಖಾ ಕಚೇರಿಗಳನ್ನು ಹೊಂದಿದೆ. 76 ಲಕ್ಷಕ್ಕೂ ಹೆಚ್ಚು ಗ್ರಾಹಕರ ಬಳಗ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ