Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯ ಯಾವ ದಿನದಂದು ಷೇರು ಮಾರುಕಟ್ಟೆ ರಜೆ; ಮೂಹೂರ್ತ ವ್ಯಾಪಾರ ಯಾವ ನಡೆಯುತ್ತದೆ? ಇಲ್ಲಿದೆ ಡೀಟೇಲ್ಸ್

Deepavali Stock Market Holiday Details: ನವೆಂಬರ್ 14ರಂದು ದೇಶದ ಬಹುತೇಕ ಕಡೆ ದೀಪಾವಳಿ ರಜೆ ಇದೆ. ಷೇರುಪೇಟೆಯೂ ಬಂದ್ ಆಗಿರುತ್ತದೆ. ಆದರೆ, ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್ (ಎಂಸಿಎಕ್ಸ್) ಅರ್ಧದಿನ ಮಾತ್ರವೇ ತೆರೆದಿರುತ್ತದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ದಿನವೂ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮೊದಲ ಸೆಷನ್ ಹಾಗೂ ಸಂಜೆ 5ಗಂಟೆಯಿಂದ ರಾತ್ರಿ 11:55ರವರೆಗೂ ಎರಡನೆ ಸೆಷನ್ ವಹಿವಾಟುಗಳು ನಡೆಯುತ್ತವೆ.

ದೀಪಾವಳಿಯ ಯಾವ ದಿನದಂದು ಷೇರು ಮಾರುಕಟ್ಟೆ ರಜೆ; ಮೂಹೂರ್ತ ವ್ಯಾಪಾರ ಯಾವ ನಡೆಯುತ್ತದೆ? ಇಲ್ಲಿದೆ ಡೀಟೇಲ್ಸ್
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 09, 2023 | 2:05 PM

ನವೆಂಬರ್ 10ರಿಂದ 15ರವರೆಗೆ ದೇಶಾದ್ಯಂತ ದೀಪಾವಳಿ ಹಬ್ಬದ (deepavali festival) ಸಡಗರ ಇದೆ. ಈ ಆರೂ ದಿನಗಳು ವಿವಿಧೆಡೆ ರಜೆಗಳಿವೆ. ಷೇರು ಮಾರುಕಟ್ಟೆ ಶನಿವಾರ ಮತ್ತು ಭಾನುವಾರ ಮುಚ್ಚಿರುತ್ತದೆ. ಆದರೆ, ಈ ಬಾರಿ ಭಾನುವಾರದಂದು ದೀಪಾವಳಿ ಪ್ರಯುಕ್ತ ವಿಶೇಷ ಮೂಹೂರತ್ ಟ್ರೇಡಿಂಗ್ (Muhurat Trading) ಅಥವಾ ಮುಹೂರ್ತ ವ್ಯಾಪಾರ ನಡೆಯಲಿದೆ. ಇನ್ನು, ದೀಪಾವಳಿ ಬಲಿಪಾಡ್ಯಮಿ ದಿನವಾದ ನವೆಂಬರ್ 14ಕ್ಕೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಮುಚ್ಚಿರುತ್ತವೆ.

ನವೆಂಬರ್ 14ರಂದು ದೇಶದ ಬಹುತೇಕ ಕಡೆ ದೀಪಾವಳಿ ರಜೆ ಇದೆ. ಷೇರುಪೇಟೆಯೂ ಬಂದ್ ಆಗಿರುತ್ತದೆ. ಆದರೆ, ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್ (ಎಂಸಿಎಕ್ಸ್) ಅರ್ಧದಿನ ಮಾತ್ರವೇ ತೆರೆದಿರುತ್ತದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ದಿನವೂ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮೊದಲ ಸೆಷನ್ ಹಾಗೂ ಸಂಜೆ 5ಗಂಟೆಯಿಂದ ರಾತ್ರಿ 11:55ರವರೆಗೂ ಎರಡನೆ ಸೆಷನ್ ವಹಿವಾಟುಗಳು ನಡೆಯುತ್ತವೆ. ಆದರೆ, ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನವಾದ ನವೆಂಬರ್ 14ರಂದು ಎಂಸಿಎಕ್ಸ್​ನ ಬೆಳಗಿನ ಅವಧಿ ರಜೆ ಇರುತ್ತದೆ. ಸಂಜೆ 5 ಗಂಟೆಯವರೆಗೂ ಯಾವುದೇ ವಹಿವಾಟು ನಡೆಯುವುದಿಲ್ಲ. ಸಂಜೆ 5ರ ನಂತರ ಅಲ್ಲಿ ಚಟುವಟಿಕೆ ಶುರುವಾಗುತ್ತದೆ.

ಇದನ್ನೂ ಓದಿ: ದೀಪಾವಳಿ ಸೀಸನ್​ನಲ್ಲಿ ಹೆಚ್ಚಿದ ವೋಕಲ್ ಫಾರ್ ಲೋಕಲ್ ಕೂಗು; ಚೀನಾಗೆ ಲಕ್ಷಕೋಟಿ ರೂ ನಷ್ಟ ಸಾಧ್ಯತೆ

ಮುಹೂರ್ತ ಟ್ರೇಡಿಂಗ್…

ಈ ಬಾರಿಯ ದೀಪಾವಳಿ ಮುಹೂರ್ತ ವ್ಯಾಪಾರ ನವೆಂಬರ್ 12ರಂದು, ಸಂಜೆ 6ರಿಂದ 7:15ಕ್ಕೆ ನಡೆಯಲಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ತಿಳಿಸಿದೆ. ಅಂದು ಭಾನುವಾದ್ದರಿಂದ ಷೇರುಪೇಟೆ ಬಂದ್ ಆಗಿರುತ್ತದಾದರೂ ಮುಹೂರತ್ ಟ್ರೇಡಿಂಗ್ ಮಾತ್ರವೇ ನಡೆಯುವುದು. ಅದಕ್ಕಾಗಿ ಒಂದು ಗಂಟೆ ಮಾತ್ರವೇ ಈ ಟ್ರೇಡಿಂಗ್ ಇರುತ್ತದೆ. ದೀಪಾವಳಿ ಹಬ್ಬದಂದು ವಿಕ್ರಮ್ ಸಂವತ್ಸರ 2080ರ ಹೊಸ ವರ್ಷ ಆರಂಭವಾಗುತ್ತದೆ. ಅದರ ಹಿನ್ನೆಲೆಯಲ್ಲಿ ಮುಹೂರ್ತ ವ್ಯಾಪಾರ ನಡೆಯುತ್ತದೆ.

ಇದನ್ನೂ ಓದಿ: ದೀಪಾವಳಿ ಹಬ್ಬದಂದು ಆರು ದಿನ ಬ್ಯಾಂಕುಗಳ ರಜೆ; ನಿಮ್ಮ ಪ್ರದೇಶದಲ್ಲಿ ಯಾವ್ಯಾವತ್ತು ಇದೆ ರಜೆ, ಇಲ್ಲಿದೆ ಪಟ್ಟಿ

ಹೊಸ ವರ್ಷಾರಂಭದ ಶುಭ ಮುಹೂರ್ತದಲ್ಲಿ ಖರೀದಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಷೇರು ಮಾರುಕಟ್ಟೆಯಲ್ಲೂ ಜನರು ಇದನ್ನು ನಂಬಿ ಷೇರು ಖರೀದಿಗೆ ಮುಂದಾಗುತ್ತಾರೆ. ಅದಕ್ಕಾಗಿ ಈ ಕಾಲಘಟ್ಟದಲ್ಲಿ ಒಂದು ಗಂಟೆಯನ್ನು ಟ್ರೇಡಿಂಗ್​ಗಾಗಿ ಮೀಸಲಿಡಲಾಗುತ್ತದೆ. ಅಂದು ಷೇರುಗಳನ್ನು ಖರೀದಿಸಿದರೆ ಸಂಪತ್ತು ಹೆಚ್ಚುತ್ತದೆಂಬ ನಂಬಿಕೆ ಇದೆ. ಹೀಗಾಗಿ, ಮುಹೂರತ್ ಟ್ರೇಡಿಂಗ್​ನ ಒಂದು ಗಂಟೆಯಲ್ಲಿ ಷೇರುವಹಿವಾಟು ಬಹಳ ಹೆಚ್ಚಿರುತ್ತದೆ. ಹಿಂದಿನ ಎರಡು ವರ್ಷಗಳಲ್ಲಿ ಷೇರುಪೇಟೆ ತುಸು ಹೆಚ್ಚಳ ಕಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್