ಕೇವಲ 10,000 ರೂ ಲಂಪ್ಸಮ್ ಹೂಡಿಕೆ ತರುತ್ತದೆ 30 ಲಕ್ಷ ರಿಟರ್ನ್; ಈ ಮಲ್ಟಿ ಅಸೆಟ್ ಫಂಡ್ ಅಚ್ಚರಿ

ICICI Prudential Multi Assets Fund: ಐಸಿಐಸಿಐ ಪ್ರುಡೆನ್ಷಿಯಲ್ ಮಲ್ಟಿ ಅಸೆಟ್ ಫಂಡ್ ಅಂತೂ ಪ್ರಚಂಡವಾಗಿ ಹಿಟ್ ಆಗಿದೆ. ಕಳೆದ ಎರಡು ದಶಕಗಳಿಂದ ಈ ಮ್ಯುಚುವಲ್ ಫಂಡ್ ವಾರ್ಷಿಕವಾಗಿ ಶೇ. 20ಕ್ಕಿಂತ ಹೆಚ್ಚು ದರದಲ್ಲಿ ರಿಟರ್ನ್ಸ್ ತಂದುಕೊಟ್ಟಿದೆ ಎಂದರೆ ನಂಬಲು ಬಹಳ ಕಷ್ಟ. ಆದರೂ ಅದು ವಾಸ್ತವ ಸತ್ಯ. ಈ ಫಂಡ್​ನಲ್ಲಿ ಲಂಪ್ಸಮ್ ಆಗಿ 10,000 ರೂ ಕಟ್ಟಿದರೆ 30 ವರ್ಷದಲ್ಲಿ 30 ಲಕ್ಷ ರೂ ರಿಟರ್ನ್ ಸಿಗಬಹುದು.

ಕೇವಲ 10,000 ರೂ ಲಂಪ್ಸಮ್ ಹೂಡಿಕೆ ತರುತ್ತದೆ 30 ಲಕ್ಷ ರಿಟರ್ನ್; ಈ ಮಲ್ಟಿ ಅಸೆಟ್ ಫಂಡ್ ಅಚ್ಚರಿ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 09, 2023 | 5:12 PM

ಮ್ಯುಚುವಲ್ ಫಂಡ್​ಗಳು ಟ್ರೆಂಡಿಂಗ್​ನಲ್ಲಿರುವುದು ಸುಮ್ಮನೆ ಅಲ್ಲ. ಹಲವು ಮ್ಯುಚುವಲ್ ಫಂಡ್​ಗಳು (mutual funds) ನಿರೀಕ್ಷಿತ ರೀತಿಯಲ್ಲಿ ರಿಟರ್ನ್ ಕೊಡಲು ವಿಫಲವಾಗಿರುವುದು ಹೌದು. ಆದರೆ, ಸಾಕಷ್ಟು ಸಂದರ್ಭದಲ್ಲಿ ಮ್ಯುಚುವಲ್ ಫಂಡ್​ಗಳು ಹೂಡಿಕೆದಾರರ ನಿರೀಕ್ಷೆ ಉಳಿಸಿಕೊಂಡಿರುವುದು ಹೌದು. ಕೆಲವಂತೂ ನಿರೀಕ್ಷೆಮೀರಿದ ರಿಟರ್ನ್ ತಂದಿವೆ. ಅದರಲ್ಲೂ ಐಸಿಐಸಿಐ ಪ್ರುಡೆನ್ಷಿಯಲ್ ಮಲ್ಟಿ ಅಸೆಟ್ ಫಂಡ್ (ICICI Prudential Multi Asset Fund) ಅಂತೂ ಪ್ರಚಂಡವಾಗಿ ಹಿಟ್ ಆಗಿದೆ. ಕಳೆದ ಎರಡು ದಶಕಗಳಿಂದ ಈ ಮ್ಯುಚುವಲ್ ಫಂಡ್ ವಾರ್ಷಿಕವಾಗಿ ಶೇ. 20ಕ್ಕಿಂತ ಹೆಚ್ಚು ದರದಲ್ಲಿ ರಿಟರ್ನ್ಸ್ ತಂದುಕೊಟ್ಟಿದೆ ಎಂದರೆ ನಂಬಲು ಬಹಳ ಕಷ್ಟ. ಆದರೂ ಅದು ವಾಸ್ತವ ಸತ್ಯ.

ಏನಿದು ಮಲ್ಟಿ ಅಸೆಟ್ ಫಂಡ್?

ಮ್ಯೂಚುವಲ್ ಫಂಡ್​ಗಳು ಕೇವಲ ಷೇರುಗಳ ಮೇಲೆ ಹೂಡಿಕೆ ಮಾಡಬೇಕೆಂದಿಲ್ಲ. ಯಾವ ರೀತಿಯ ಹೂಡಿಕೆಯನ್ನಾದರೂ ಮಾಡಬಹುದು. ಹೂಡಿಕೆಗೆ ಈಗ ಷೇರು, ಡೆಟ್, ಎಫ್​ಡಿ, ಚಿನ್ನ, ರಿಯಲ್ ಎಸ್ಟೇಟ್ ಇತ್ಯಾದಿ ಹಲವು ಆಯ್ಕೆಗಳಿವೆ. ಮಲ್ಟಿ ಅಸೆಟ್ ಫಂಡ್​ಗಳು ಕನಿಷ್ಠ ಮೂರು ವಿಧದ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಐಸಿಐಸಿಐ ಪ್ರುಡೆನ್ಷಿಯಲ್ ಮಲ್ಟಿ ಅಸೆಟ್ ಫಂಡ್ 2002ರ ಅಕ್ಟೋಬರ್​ನಲ್ಲಿ ಮೊದಲು ಶುರುವಾಯಿತು. ಈ 21 ವರ್ಷದಲ್ಲಿ ಅದು ಸರಾಸರಿ ಶೇ. 21.02ರ ವಾರ್ಷಿಕ ದರದಲ್ಲಿ ಬೆಳೆದಿದೆ. ಮಲ್ಟಿ ಅಸೆಟ್ ಫಂಡ್​ಗಳ ಪೈಕಿ ಅತಿ ಹೆಚ್ಚು ರಿಟರ್ನ್ಸ್ ತಂದಿರುವುದು ಪ್ರುಡೆನ್ಷಿಯಲ್ ಫಂಡ್. ಇದು ಈಕ್ವಿಟಿ, ಎಕ್ಸ್​ಚೇಂಜ್ ಟ್ರೇಡೆಡ್ ಕಮಾಡಿಟಿ, ಡಿರೈವೇಟಿವ್ಸ್, ಗೋಲ್ಡ್ ಯೂನಿಟ್ಸ್, ಇಟಿಎಫ್, InvIT ಇಲ್ಲೆಲ್ಲಾ ಹೂಡಿಕೆ ಮಾಡಿದೆ. ಒಟ್ಟು 24,060 ಕೋಟಿ ರೂ ಮೊತ್ತದ ಹೂಡಿಕೆಗಳನ್ನು ಈ ಫಂಡ್ ನಿರ್ವಹಿಸುತ್ತದೆ.

ಇದನ್ನೂ ಓದಿ: ಮ್ಯುಚುವಲ್ ಫಂಡ್​ನಲ್ಲಿ ಯಾವಾಗ ಹೂಡಿಕೆ ಆರಂಭಿಸಬೇಕು? ಷೇರು ಮಾರುಕಟ್ಟೆಯ ಸ್ಥಿತಿ ಪ್ರಕಾರ ನಿಮ್ಮ ಹೂಡಿಕೆ ಶುರು ಆಗಬೇಕಾ? ಇಲ್ಲಿದೆ ಡೀಟೇಲ್ಸ್

10,000 ರೂ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಸಿಗಬಹುದು?

ಐಸಿಐಸಿಐ ಪ್ರುಡೆನ್ಷಿಯಲ್ ಮಲ್ಟಿ ಅಸೆಟ್ ಫಂಡ್​ನಲ್ಲಿ ನೀವು ಎಸ್​ಐಪಿ ಬದಲು ಲಂಪ್ಸಮ್ ಆಗಿಯೂ ಕಟ್ಟಬಹುದು. ಲಂಪ್ಸಮ್ ಆದರೆ ಕನಿಷ್ಠ ಹೂಡಿಕೆ 5,000 ರೂ ಇರುತ್ತದೆ. ಎಸ್​ಐಪಿ ಆದರೆ ತಿಂಗಳಿಗೆ ಕನಿಷ್ಠ ಹೂಡಿಕೆ 100 ರೂ ಇರುತ್ತದೆ.

ಒಂದು ವೇಳೆ ನೀವು ಲಂಪ್ಸಮ್ ಆಯ್ಕೆ ಮಾಡಿಕೊಂಡು 10,000 ರೂ ಕಟ್ಟಿದರೆ 30 ವರ್ಷದಲ್ಲಿ 30 ಲಕ್ಷ ರೂ ರಿಟರ್ನ್ ಸಿಗುತ್ತದೆ. ಇದು ಹಿಂದಿನ 21 ವರ್ಷದಲ್ಲಿ ಕಂಡ ಶೇ. 21ರ ಸಿಎಜಿಆರ್ ವೇಗವೇ ಮುಂದಿನ 30 ವರ್ಷವೂ ಮುಂದುವರಿದಿದ್ದೇ ಆದಲ್ಲಿ ಸಾಧ್ಯ.

ಇನ್ನು, 50,000 ರೂ ಹೂಡಿಕೆ ಮಾಡಿದರೆ 30 ವರ್ಷದಲ್ಲಿ ಆ ಮೊತ್ತವು 1.52 ಕೋಟಿ ರೂ ಆಗುತ್ತದೆ.

ಹಾಗೆಯೇ, 1 ಲಕ್ಷ ರೂ ಹೂಡಿಕೆ ಮಾಡಿದರೆ ಆ ಮೊತ್ತವು 30 ವರ್ಷದಲ್ಲಿ 3 ಕೋಟಿ ರೂ ಆಗುತ್ತದೆ.

ಇದನ್ನೂ ಓದಿ: Money Tricks: ಹಣ ಉಳಿತಾಯಕ್ಕೆ ಈ ಉಪಾಯಗಳು ಬೆಸ್ಟ್; ಭವಿಷ್ಯ ಭದ್ರ ಮಾಡಿಕೊಳ್ಳುವ ಟ್ರಿಕ್ಸ್ ಇವು

10,000 ರೂ ಎಸ್​ಐಪಿ ಆಯ್ಕೆ ಮಾಡಿದರೆ?

ಒಂದು ವೇಳೆ ನೀವು ಈ ಮ್ಯೂಚುವಲ್ ಫಂಡ್​ನ ಎಸ್​ಐಪಿ ಆಯ್ಕೆ ಮಾಡಿಕೊಂಡು ತಿಂಗಳಿಗೆ 10,000 ರೂ ಹಣವನ್ನು 30 ವರ್ಷ ಕಾಲ ಹೂಡಿಕೆ ಮಾಡುತ್ತಾ ಹೋದರೆ ನಿಮಗೆ ಸಿಗುವ ರಿಟರ್ನ್ ಬರೋಬ್ಬರಿ 30 ಕೋಟಿ ರೂ. ಅದೇ ಪವರ್ ಆಫ್ ಕಾಂಪೌಂಡಿಂಗ್.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್