ಮಕ್ಕಳಿಗೆಂದೇ ಪ್ರತ್ಯೇಕ ಬ್ಯಾಂಕ್; ಗುಜರಾತ್​ನ ಬಾಲ ಗೋಪಾಲ್ ಬ್ಯಾಂಕ್; 17,000 ಮಕ್ಕಳ ಖಾತೆ, 16 ಕೋಟಿ ಠೇವಣಿ

Bank for Children in Gujarat: ಗುಜರಾತ್​ನ ಸಬರಕಾಂತ ಜಿಲ್ಲೆಯ ಇಡರ್ ಎಂಬಲ್ಲಿ 2009ರಿಂದ ಬಾಲ ಗೋಪಾಲ್ ಬ್ಯಾಂಕ್ ನಿರ್ವಹಿಸುತ್ತಿದ್ದು, ಇದು ಮಕ್ಕಳಿಗಾಗಿ ಇರುವ ಬಾಲ ಬ್ಯಾಂಕ್ ಅಗಿದೆ. ಇದರಲ್ಲಿ ಇಲ್ಲಿಯವರೆಗೆ 17,000 ಮಕ್ಕಳು ಖಾತೆ ತೆರೆದಿದ್ದಾರೆ. ಬ್ಯಾಂಕ್ ಏಜೆಂಟ್​ಗಳು ಪ್ರತೀ ತಿಂಗಳು ಮಕ್ಕಳ ಮನೆಗೆ ಹೋಗಿ ಉಳಿತಾಯ ಹಣ ಪಡೆದುಬರುತ್ತಾರೆ.

ಮಕ್ಕಳಿಗೆಂದೇ ಪ್ರತ್ಯೇಕ ಬ್ಯಾಂಕ್; ಗುಜರಾತ್​ನ ಬಾಲ ಗೋಪಾಲ್ ಬ್ಯಾಂಕ್; 17,000 ಮಕ್ಕಳ ಖಾತೆ, 16 ಕೋಟಿ ಠೇವಣಿ
ಮಕ್ಕಳ ಬ್ಯಾಂಕ್
Follow us
|

Updated on:Aug 17, 2023 | 3:38 PM

ಮಕ್ಕಳಿಗೆ ಓದಿನ ಜೊತೆಗೆ ಹಣಕಾಸಿನ ಸಾಕ್ಷರತೆ ಚಿಕ್ಕ ವಯಸ್ಸಿನಿಂದಲೇ ಮೂಡಬೇಕು ಎಂದು ಇವತ್ತಿನ ಹಣಕಾಸು ಪರಿಣತರು ಸಲಹೆ ನೀಡುವುದಿದೆ. ಮಕ್ಕಳು ಓದಿ ಕೆಲಸಕ್ಕೆ ಸೇರುವವರೆಗೂ ತಮ್ಮ ಖರ್ಚು ವೆಚ್ಚಗಳಿಗೆ ಅಪ್ಪ ಅಮ್ಮ ಕೊಡುವ ಹಣದ ಮೇಲೆ ಅವಲಂಬಿತವಾಗಿರುತ್ತಾರೆ. ಅದು ಸಹಜ ಹೌದು. ಆದರೆ ಅಪ್ಪ ಅಮ್ಮನಿಂದ ಪಡೆದ ಹಣವನ್ನು ಹೇಗೆ ಸದ್ವಿನಿಯೋಗ ಮಾಡಬೇಕು ಎಂಬುದು ಮಕ್ಕಳಲ್ಲಿ ತಿಳಿವಳಿಕೆ ಇರುವುದಿಲ್ಲ. ಈ ಬಗ್ಗೆ ಅವರಿಗೆ ಅರಿವು (Financial Awareness) ಮೂಡಿಸಬೇಕು. ಈ ನಿಟ್ಟಿನಲ್ಲಿ ಗುಜರಾತ್​ನ ಬ್ಯಾಂಕೊಂದು 14 ವರ್ಷಗಳಿಂದ ಮಕ್ಕಳಲ್ಲಿ ಪರೋಕ್ಷವಾಗಿ ಹಣಕಾಸು ಅರಿವು ಬಿತ್ತುವ ಕೆಲಸ ಮಾಡುತ್ತಾ ಬಂದಿದೆ. ಗುಜರಾತ್​ನ ಸಬರಕಾಂತ ಜಿಲ್ಲೆಯ ಇಡರ್ ಎಂಬ ಪುಟ್ಟ ಪಟ್ಟಣದಲ್ಲಿ ಈ ಬ್ಯಾಂಕ್ ಇದೆ.

ಬಾಲ್ ಗೋಪಾಲ್ ಬ್ಯಾಂಕ್ 2009ರಲ್ಲಿ ಆರಂಭವಾಗಿದ್ದು ಇಲ್ಲಿಯವರೆಗೆ 17,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. 18 ವರ್ಷದವರೆಗಿನ ವಯಸ್ಸಿನ ಮಕ್ಕಳು ಈ ಬ್ಯಾಂಕ್​ನಲ್ಲಿ ಖಾತೆ ತೆರೆಯಬಹುದು. ಮಕ್ಕಳು ತಮಗೆ ಸಿಗುವ ಪಾಕೆಟ್ ಮನಿಯಲ್ಲಿ ಒಂದಷ್ಟು ಹಣವನ್ನು ಉಳಿಸಿ ನಿಯಮಿತವಾಗಿ ತಮ್ಮ ಖಾತೆಗಳಿಗೆ ಜಮೆ ಮಾಡುತ್ತಾ ಹೋಗಬಹುದು. 18 ವರ್ಷ ಪೂರ್ಣಗೊಂಡ ಬಳಿಕ ಈ ಮಕ್ಕಳು ತಮ್ಮ ಠೇವಣಿಯನ್ನು ಹಿಂಪಡೆಯಬಹುದು.

ಗುಜರಾತ್​ನ ಸಬರಕಾಂತ ಮತ್ತು ಅರವಲ್ಲಿ ಜಿಲ್ಲೆಗಳಲ್ಲಿ ಈ ಬ್ಯಾಂಕ್ ಬಹಳ ಜನಪ್ರಿಯವಾಗುತ್ತಿದೆ. ಪ್ರತೀ ತಿಂಗಳು 200ರಿಂದ 300 ಹೊಸ ಖಾತೆಗಳು ಆರಂಭವಾಗುತ್ತಿರುತ್ತವಂತೆ. ಇಲ್ಲಿಯವರೆಗೆ 17,000ಕ್ಕೂ ಹೆಚ್ಚು ಮಕ್ಕಳು ಖಾತೆ ತೆರೆದಿದ್ದಾರೆ. ಒಟ್ಟು 16 ಕೋಟಿ ರುನಷ್ಟು ಹಣ ಈ ಬ್ಯಾಂಕ್​ನಲ್ಲಿ ಸಂಗ್ರಹವಾಗಿದೆ.

ಇದನ್ನೂ ಓದಿ: ಸಾಲವೆಂಬ ಶೂಲಕ್ಕೆ ಏರಿಬಿಟ್ಟೀರಿ ಜೋಕೆ..! ಇಲ್ಲಿದೆ ಸಾಲಮುಕ್ತರನ್ನಾಗಿಸುವ ಟಿಪ್ಸ್

ಈ ಬ್ಯಾಂಕು ಮಕ್ಕಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೂಡ ಕೊಡುತ್ತದೆ. ಈ ಬ್ಯಾಂಕ್​ನಲ್ಲಿ ಖಾತೆ ತೆರೆಯಲು ಸದಸ್ಯ ಶುಲ್ಕವಾಗಿ 110 ರೂ ಪಾವತಿಸಬೇಕು. ಬ್ಯಾಂಕ್​ನ ಏಜೆಂಟ್​ಗಳು ಮಕ್ಕಳ ಮನೆಗೆ ಪ್ರತೀ ತಿಂಗಳು ಹೋಗಿ ಪೋಷಕರ ಸಮ್ಮುಖದಲ್ಲಿ ಪಿಗ್ಗಿ ಬ್ಯಾಂಕ್ ತೆರೆದು ಮಕ್ಕಳಿಂದ ಹಣ ಪಡೆಯುತ್ತಾರೆ.

ಬಾಲ್ ಗೋಪಾಲ್ ಬ್ಯಾಂಕ್​ನಲ್ಲಿ ಇರಿಸುವ ಮಕ್ಕಳ ಹಣಕ್ಕೆ ವರ್ಷಕ್ಕೆ ಶೇ. 6ರಷ್ಟು ಬಡ್ಡಿ ಕೊಡಲಾಗುತ್ತದೆ. ಇನ್ನು, ಮಕ್ಕಳಿಗೆ ಸಾಲ ಬೇಕಾದರೆ ಶೇ. 12ರ ಬಡ್ಡಿದರದಲ್ಲಿ ಆ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.

ಇದನ್ನೂ ಓದಿ: ಎಫ್​ಡಿಗೆ ಶೇ. 9.10ರವರೆಗೂ ಬಡ್ಡಿ; ಈ ತಿಂಗಳು ಠೇವಣಿ ದರ ಹೆಚ್ಚಿಸಿದ 4 ಬ್ಯಾಂಕುಗಳು

ಮಕ್ಕಳಲ್ಲಿ ಹಣಕಾಸು ಅರಿವು ಮೂಡಿಸಿ ಸ್ವತಂತ್ರವಾಗಿ ಬದುಕುವ ಕಲೆ ಕಲಿಸುವುದು ಬಾಲ್ ಗೋಪಾಲ್ ಬ್ಯಾಂಕ್​ನ ಉದ್ದೇಶ ಎಂದು ಅದರ ಮುಖ್ಯಸ್ಥ ಅಶ್ವಿನ್ ಪಟೇಲ್ ಹೇಳುತ್ತಾರೆ. ಇತ್ತೀಚೆಗೆ ರಾಜ್ಯಸಭೆಯಲ್ಲಿ ಬಹುರಾಜ್ಯ ಸಹಕಾರ ಸಂಸ್ಥೆಗಳ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯ ವೇಳೆ ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲ ಅವರು ಬಾಲ್ ಗೋಪಾಲ್ ಬ್ಯಾಂಕ್ ಬಗ್ಗೆ ಮಾತನಾಡಿ, ಶ್ಲಾಘನೆ ವ್ಯಕ್ತಪಡಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Thu, 17 August 23

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ