ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ
ಇನ್ಮುಂದೆ ಬಲ್ಕ್ ಸಿಮ್ಗಳು ಸಿಗಲ್ಲ; ಸಿಮ್ ಡೀಲರ್ಗಳಿಗೆ ಪೊಲೀಸ್ ವೆರಿಫಿಕೇಶನ್ ಕಡ್ಡಾಯ; 52,000 ಸಿಮ್ ಕನೆಕ್ಷನ್ಸ್ ರದ್ದು
Telecom Reforms: ಸುಲಭಕ್ಕೆ ಸಿಗುವ ಸಿಮ್ ಕಾರ್ಡ್ಗಳು ದುರ್ಬಳಕೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಅದನ್ನು ತಡೆಯಲು ಕೇಂದ್ರ ಎರಡು ಕ್ರಮಗಳನ್ನು ಕೈಗೊಂಡಿದೆ. ಬಲ್ಕ್ ಸಿಮ್ಗಳನ್ನು ವಿತರಿಸದಂತೆ ನಿರ್ಬಂಧ ಹಾಕಿದೆ. ಹಾಗೆಯೇ ಸಿಮ್ ಡೀಲರ್ಗಳು ಪೊಲೀಸ್ ವೆರಿಫಿಕೇಶನ್ ಪಡೆಯುವುದನ್ನೂ ಕಡ್ಡಾಯಪಡಿಸಲಾಗಿದೆ.
ನವದೆಹಲಿ, ಆಗಸ್ಟ್ 17: ಕೇಂದ್ರ ಸರ್ಕಾರ ಟೆಲಿಕಾಂ ಕ್ಷೇತ್ರದಲ್ಲಿ ಎರಡು ಹೊಸ ಸುಧಾರಣೆಗಳನ್ನು (Telecom sector reforms) ಕೈಗೊಂಡಿದೆ. ಬಲ್ ಸಿಮ್ಗಳನ್ನು ಕನೆಕ್ಷನ್ಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಹಾಗೆಯೇ, ಸಿಮ್ ಕಾರ್ಡ್ಗಳನ್ನು ಮಾರುವ ಡೀಲರ್ಗಳು ಪೊಲೀಸ್ ವೆರಿಫಿಕೇಶನ್ ಪಡೆಯಬೇಕು. ಹೀಗೆ ಎರಡು ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ. ಡಿಜಿಟಲ್ ವಹಿವಾಟು ಹೆಚ್ಚಿರುವ ಈ ಸಂದರ್ಭದಲ್ಲಿ ಮೊಬೈಲ್ ಗ್ರಾಹಕರ ಹಿತರಕ್ಷಿಸುವ ನಿಟ್ಟಿನಲ್ಲಿ ಈ ಕ್ರಮ ಜಾರಿ ಮಾಡಲಾಗಿರುವುದು ತಿಳಿದುಬಂದಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಎ ವೈಷ್ಣವ್ (Union Minister Ashwini Vaishnaw) ಅವರು ಈ ವಿಷಯ ತಿಳಿಸಿದ್ದಾರೆ.
ಬಲ್ಕ್ ಸಿಮ್ ಬದಲು ಬ್ಯುಸಿನೆಸ್ ಸಿಮ್
ಬಲ್ಕ್ ಸಿಮ್ ಕನೆಕ್ಷನ್ಗಳು ಇನ್ಮುಂದೆ ಸಿಕ್ಕುವುದಿಲ್ಲ. ಈ ರೀತಿ ಪಡೆದ ಸಿಮ್ಗಳಲ್ಲಿ ಹೆಚ್ಚಿನವರು ನೈಜವಾಗಿ ಉಪಯೋಗವಾಗುವುದಕ್ಕಿಂತ ದುರ್ಬಳಕೆ ಆಗುವುದೇ ಹೆಚ್ಚು ಎಂಬುದು ಅಧ್ಯಯನಗಳಿಂದ ಗೊತ್ತಾದ ಹಿನ್ನೆಲೆಯಲ್ಲಿ ಬಲ್ಕ್ ಸಿಮ್ ನೀಡುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.
ಬಲ್ಕ್ ಬದಲು ಬ್ಯುಸಿನೆಸ್ ಸಿಮ್ ಕನೆಕ್ಷನ್ಗಳನ್ನು ಮಾತ್ರ ನೀಡಲಾಗುತ್ತದೆ. ಆದರೆ ಬ್ಯುಸಿನೆಸ್ ಸಿಮ್ ಪಡೆಯಬೇಕಾದರೆ ಆ ಬ್ಯುಸಿನೆಸ್ ಅಥವಾ ಕಾರ್ಪೊರೇಟ್ ಸಂಸ್ಥೆಯಿಂದ ಕೆವೈಸಿ ಪಡೆಯಬೇಕು. ಈ ಸಂಸ್ಥೆಗಳು ನೊಂದಾಯಿತವಾಗಿರುವುದರಿಂದ ಅವುಗಳ ಜಿಎಸ್ಟಿ ರಿಜಿಸ್ಟ್ರೇಶನ್, ಪ್ಯಾನ್, ಐಟಿ ರಿಜಿಸ್ಟ್ರೇಶನ್ ಇವುಗಳ ವಿವರ ಸಿಕ್ಕುತ್ತದೆ.
ಇದನ್ನೂ ಓದಿ: Fake IRCTC App: ಐಆರ್ಸಿಟಿಸಿ ಆ್ಯಪ್ ಗುರಿ ಮಾಡಿದ ಸೈಬರ್ ಕೇಡಿಗಳು; ಜನಸಾಮಾನ್ಯರ ಬ್ಯಾಂಕ್ ಡೀಟೇಲ್ಸ್ ಲಪಟಾಯಿಸಲು ಹುನ್ನಾರ
ಸಿಮ್ ಡೀಲರ್ಗಳ ಪೊಲೀಸ್ ವೆರಿಫಿಕೇಶನ್
ಸಿಮ್ ಮಾರುವ ಡೀಲರ್ಗಳು ಪೊಲೀಸ್ ವೆರಿಫಿಕೇಶನ್ ಪಡೆಯುವುದು ಕಡ್ಡಾಯವಾಗಿದೆ. ಪೊಲೀಸ್ ವೆರಿಫೀಕೇಶನ್ ಮಾತ್ರವಲ್ಲ ಬಯೋಮೆಟ್ರಿಕ್ ವೆರಿಫಿಕೇಶನ್ ಕೂಡ ಮಾಡಿಸಬೇಕು. ಸಿಮ್ಗಳ ದುರ್ಬಳಕೆ ಆದರೆ ಅದಕ್ಕೆ ಡೀಲರ್ಗಳನ್ನೂ ಹೊಣೆಗಾರರನ್ನಾಗಿಸುವುದು ಸರ್ಕಾರ ಉದ್ದೇಶ. ಸಿಮ್ ಡೀಲರ್ಗಳ ಮೂಲಕ ಸಮಾಜಘಾತುಕ ಶಕ್ತಿಗಳು ಸಿಮ್ಗಳನ್ನು ಪಡೆಯುತ್ತಿರುವ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
52 ಲಕ್ಷ ಸಿಮ್ ಕನೆಕ್ಷನ್ಗಳ ರದ್ದು
ಈ ವರ್ಷದ ಮೇ ತಿಂಗಳಲ್ಲಿ ಸರ್ಕಾರ ಸಂಚಾರ್ ಸಾಥಿ (Sanchar Saathi) ಎಂಬ ಪೋರ್ಟಲ್ ಆರಂಭಿಸಿತ್ತು. ಈವರೆಗೆ 52 ಲಕ್ಷ ಸಿಮ್ ಕನೆಕ್ಷನ್ಗಳನ್ನು ರದ್ದುಮಾಡಲಾಗಿದೆ. ನಕಲಿ ದಾಖಲೆಗಳನ್ನು ಬಳಸಿ ಇವುಗಳನ್ನು ತೆರೆಯಲಾಗಿತ್ತು.
ಇದನ್ನೂ ಓದಿ: ಮಕ್ಕಳಿಗೆಂದೇ ಪ್ರತ್ಯೇಕ ಬ್ಯಾಂಕ್; ಗುಜರಾತ್ನ ಬಾಲ ಗೋಪಾಲ್ ಬ್ಯಾಂಕ್; 17,000 ಮಕ್ಕಳ ಖಾತೆ, 16 ಕೋಟಿ ಠೇವಣಿ
ಹಾಗೆಯೇ, 67,000 ಸಿಮ್ ಡೀಲರ್ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. 17,000 ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಬ್ಲಾಕ್ ಮಾಡಲಾಗಿದೆ. 300 ಎಫ್ಐಆರ್ಗಳನ್ನು ಹಾಕಲಾಗಿದೆ.
ಅಷ್ಟೇ ಅಲ್ಲ, ಸ್ಪ್ಯಾಮಿಂಗ್ನಲ್ಲಿ ನಿರತವಾಗಿದ್ದ 66,000 ವಾಟ್ಸಾಪ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. 8 ಲಕ್ಷ ವ್ಯಾಲಟ್ ಅಕೌಂಟ್ಗಳನ್ನೂ ಬ್ಲಾಕ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:46 pm, Thu, 17 August 23