AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 18 August: ಚಿನ್ನದ ಜೊತೆಗೆ ಬೆಳ್ಳಿ ಬೆಲಯೂ ಕುಸಿತ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರ ಪಟ್ಟಿ

Bullion Market 2023, August 18th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 54,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 59,020 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 72.50 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 18 August: ಚಿನ್ನದ ಜೊತೆಗೆ ಬೆಳ್ಳಿ ಬೆಲಯೂ ಕುಸಿತ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರ ಪಟ್ಟಿ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2023 | 5:01 AM

Share

ಬೆಂಗಳೂರು, ಆಗಸ್ಟ್ 18: ಚಿನ್ನ ಬಯಸುವವರಿಗೆ ಖುಷಿ ಸುದ್ದಿ ಎಂಬಂತೆ ಈ ಹಳದಿ ಲೋಹದ ಬೆಲೆ (Gold Rates) ಇಳಿಮುಖವಾಗುವುದು ಮುಂದುವರಿದಿದೆ. ಸತತ ಏರಿಕೆಗಳ ಬಳಿಕ ಬೆಳ್ಳಿ ಬೆಲೆಯೂ ಕುಸಿದಿದೆ. ಬಹುತೇಕ ಎಲ್ಲಾ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ಕಡಿಮೆ ಆಗುತ್ತಿದೆ. ಬಹಳ ಮಂದಿ ಹೂಡಿಕೆದಾರರು ಚಿನ್ನ ಬಿಟ್ಟು ಡಾಲರ್ ಬೆನ್ನುಬೀಳುತ್ತಿದ್ದಾರೆ. ಇದು ತಾತ್ಕಾಲಿಕ ಮಾತ್ರವಾಗಿದ್ದು ಹಳದಿ ಲೋಹಕ್ಕಿರುವ ಡಿಮ್ಯಾಂಡ್ ಮರಳುವ ಸಾಧ್ಯತೆ ಇದೆ. ಚಿನ್ನದ ಮೇಲೆ ಹೂಡಿಕೆ ಮಾಡಬೇಕೆನ್ನುವವರು, ಅಥವಾ ಒಡವೆ ಖರೀದಿಸಬೇಕೆನ್ನುವವರಿಗೆ ಇದು ಸಕಾಲ ಎನ್ನಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆ ಏರುತ್ತಿರುವುದು ಗಮನಾರ್ಹ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 54,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 59,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,250 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 54,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 18ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,020 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 725 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,020 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 720 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 54,100 ರೂ
  • ಚೆನ್ನೈ: 54,560 ರೂ
  • ಮುಂಬೈ: 54,100 ರೂ
  • ದೆಹಲಿ: 54,250 ರೂ
  • ಕೋಲ್ಕತಾ: 54,100 ರೂ
  • ಕೇರಳ: 54,100 ರೂ
  • ಅಹ್ಮದಾಬಾದ್: 54,150 ರೂ
  • ಜೈಪುರ್: 54,250 ರೂ
  • ಲಕ್ನೋ: 54,250 ರೂ
  • ಭುವನೇಶ್ವರ್: 54,100 ರೂ

ಇದನ್ನೂ ಓದಿ: ಇನ್ಮುಂದೆ ಬಲ್ಕ್ ಸಿಮ್​ಗಳು ಸಿಗಲ್ಲ; ಸಿಮ್ ಡೀಲರ್​ಗಳಿಗೆ ಪೊಲೀಸ್ ವೆರಿಫಿಕೇಶನ್ ಕಡ್ಡಾಯ; 52,000 ಸಿಮ್ ಕನೆಕ್ಷನ್ಸ್ ರದ್ದು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,820 ರಿಂಗಿಟ್ (50,353 ರುಪಾಯಿ)
  • ದುಬೈ: 2122.50 ಡಿರಾಮ್ (48,005 ರುಪಾಯಿ)
  • ಅಮೆರಿಕ: 590 ಡಾಲರ್ (49,014 ರುಪಾಯಿ)
  • ಸಿಂಗಾಪುರ: 801 ಸಿಂಗಾಪುರ್ ಡಾಲರ್ (48,980 ರುಪಾಯಿ)
  • ಕತಾರ್: 2,190 ಕತಾರಿ ರಿಯಾಲ್ (49,907 ರೂ)
  • ಓಮನ್: 232 ಒಮಾನಿ ರಿಯಾಲ್ (50,125 ರುಪಾಯಿ)
  • ಕುವೇತ್: 182.50 ಕುವೇತಿ ದಿನಾರ್ (49,237 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,200 ರೂ
  • ಚೆನ್ನೈ: 7,570 ರೂ
  • ಮುಂಬೈ: 7,250 ರೂ
  • ದೆಹಲಿ: 7,250 ರೂ
  • ಕೋಲ್ಕತಾ: 7,250 ರೂ
  • ಕೇರಳ: 7,570 ರೂ
  • ಅಹ್ಮದಾಬಾದ್: 7,250 ರೂ
  • ಜೈಪುರ್: 7,250 ರೂ
  • ಲಕ್ನೋ: 7,250 ರೂ
  • ಭುವನೇಶ್ವರ್: 7,570 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us