Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake IRCTC App: ಐಆರ್​ಸಿಟಿಸಿ ಆ್ಯಪ್ ಗುರಿ ಮಾಡಿದ ಸೈಬರ್ ಕೇಡಿಗಳು; ಜನಸಾಮಾನ್ಯರ ಬ್ಯಾಂಕ್ ಡೀಟೇಲ್ಸ್ ಲಪಟಾಯಿಸಲು ಹುನ್ನಾರ

IRCTC ಮೊಬೈಲ್ ಅಪ್ಲಿಕೇಶನ್ ಮೂಲಕ ಹೆಚ್ಚಿನ ರೈಲು ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡುತ್ತಾರೆ. ಸೈಬರ್ ಕಿಡಿಕೇಡಿಗಳು ಇದೀಗ ನಕಲಿ ಐಆರ್​ಸಿಟಿಸಿ ಆ್ಯಪ್ ಸೃಷ್ಟಿಸಿ ಜನರನ್ನು ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

Fake IRCTC App: ಐಆರ್​ಸಿಟಿಸಿ ಆ್ಯಪ್ ಗುರಿ ಮಾಡಿದ ಸೈಬರ್ ಕೇಡಿಗಳು; ಜನಸಾಮಾನ್ಯರ ಬ್ಯಾಂಕ್ ಡೀಟೇಲ್ಸ್ ಲಪಟಾಯಿಸಲು ಹುನ್ನಾರ
ಐಆರ್​ಸಿಟಿಸಿ ಅಪ್ಲಿಕೇಶನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 17, 2023 | 4:06 PM

ಭಾರತದಲ್ಲಿ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಆಫ್‌ಲೈನ್ ಮತ್ತು ಆನ್‌ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ರೈಲು ಟಿಕೆಟ್‌ಗಳು ಬುಕ್ ಆಗುತ್ತವೆ. ಹೆಚ್ಚಿನ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು IRCTC ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡುತ್ತಾರೆ. ಆದರೆ, ಸೈಬರ್ ಕ್ರಿಮಿನಲ್​ಗಳು ಈ ಆ್ಯಪ್‌ನನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಐಆರ್‌ಸಿಟಿಸಿಯ ನಕಲಿ ಆ್ಯಪ್ ಮೂಲಕ ಸೈಬರ್ ​ಕಳ್ಳರು ( ಸೈಬರ್ ಕ್ರೈಮ್ ) ಜನರನ್ನು ವಂಚಿಸುತ್ತಿದ್ದಾರೆ ಎಂಬ ಸುದ್ದಿ ಇದೆ .

ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರ ಕದಿಯುತ್ತಾರೆ

ಸೈಬರ್ ಥಗ್‌ಗಳು ನಕಲಿ IRCTC ಅಪ್ಲಿಕೇಶನ್ ಲಿಂಕ್ ಅನ್ನು ಇಮೇಲ್ ಅಥವಾ ವಿವಿಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನರಿಗೆ ಹಂಚಿಕೊಳ್ಳುತ್ತಿದ್ದಾರೆ. ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಬುಕ್ ಮಾಡಲು ಈ ಲಿಂಕ್ ಬಳಸಿ ಎಂದು ಈ ವಂಚಕರು ಜನರಿಗೆ ಲಿಂಕ್ ಇರುವ ಮೆಸೇಜ್ ಕಳುಹಿಸುತ್ತಾರೆ. ಆ ಲಿಂಕ್ ಅನ್ನು ಜನರು ಕ್ಲಿಕ್ ಮಾಡಿದರೆ ನಕಲಿ ಐಆರ್​ಸಿಟಿಸಿ ವೆಬ್​ಸೈಟ್ ತೆರೆದುಕೊಂಡು ನಿಮ್ಮಿಂದ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರ ಪಡೆಯಬಹುದು. ನಿಮಗೆ ಇಂತಹ ಸಂದೇಶಗಳು ಬಂದಿದ್ದರೆ ಎಚ್ಚರದಿಂದಿರಿ.

ಇದನ್ನೂ ಓದಿ: ಐಪಿಎಲ್ ಆಯ್ತು ಈಗ ಒಟಿಟಿಯಲ್ಲಿ ಧೂಳೆಬ್ಬಿಸಿದ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಒಟಿಟಿ; ಮೂರು ಸಾವಿರ ಕೋಟಿ ನಿಮಿಷ ವೀಕ್ಷಣೆ

ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಆ್ಯಪ್ ಲಿಂಕ್

irctcconnect.apk’ ಹೆಸರಿನ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದಂತೆ ಐಆರ್​ಸಿಟಿಸಿ ಮನವಿ ಮಾಡಿದೆ. ಈ ಅಪ್ಲಿಕೇಶನ್‌ಗೆ ಲಿಂಕ್ ಅನ್ನು WhatsApp ಮತ್ತು ಟೆಲಿಗ್ರಾಮ್‌ನಂತಹ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಳುಹಿಸಲಾಗುತ್ತಿದೆ. WhatsApp ಮತ್ತು Telegram ನಂತಹ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಅಪ್ಲಿಕೇಶನ್ ಅನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು IRCTC ಹೇಳಿದೆ. ನೀವು ಈ ನಕಲಿ irctcconnect.apk ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದರೆ, ನೀವು ಮೋಸ ಹೋಗಬಹುದು ಎಂದೂ IRCTC ಬಳಕೆದಾರರಿಗೆ ಎಚ್ಚರಿಸಿದೆ.

ಇದನ್ನೂ ಓದಿ: ಮಕ್ಕಳಿಗೆಂದೇ ಪ್ರತ್ಯೇಕ ಬ್ಯಾಂಕ್; ಗುಜರಾತ್​ನ ಬಾಲ ಗೋಪಾಲ್ ಬ್ಯಾಂಕ್; 17,000 ಮಕ್ಕಳ ಖಾತೆ, 16 ಕೋಟಿ ಠೇವಣಿ

ಪ್ಲೇಸ್ಟೋರ್​ಗೆ ಹೋಗಿ ಖಚಿತಡಿಸಿಕೊಂಡು ಡೌನ್​ಲೋಡ್ ಮಾಡಿ

ನೀವ ಐಆರ್​ಸಿಟಿಸಿ ಅಪ್ಲಿಕೇಶನ್ ಅನ್ನು ಮೊಬೈಲ್​ನಲ್ಲಿ ಇನ್ಸ್​ಟಾಲ್ ಮಾಡಬೇಕೆಂದಿದ್ದರೆ ಯಾವುದೋ ಅನಧಿಕೃತ ಮೂಲದಿಂದ ಬಂದ ಎಪಿಕೆ ಫೈಲ್ ಅನ್ನು ಬಳಸದಿರಿ. ಆ್ಯಪಲ್ ಸ್ಟೋರ್ ಅಥವಾ ಪ್ಲೇ ಸ್ಟೋರ್​ಗೆ ಹೋಗಿ ಅಲ್ಲಿ ಐಆರ್​ಸಿಟಿಸಿ ಆ್ಯಪ್ ಅನ್ನು ಡೌನ್​ಲೋಡ್ ಮಾಡಿಕೊಳ್ಳಿ. IRCTC ಎಂದಿಗೂ ಜನರ PIN, OTP, ಪಾಸ್‌ವರ್ಡ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳು, ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅಥವಾ UPI ವಿವರಗಳನ್ನು ಕೇಳುವುದಿಲ್ಲ. ಯಾರಾದರೂ ಅಂತಹ ಮಾಹಿತಿಯನ್ನು ಕೇಳಿದರೆ ಜಾಗರೂಕರಾಗಿರಿ.

ವಂಚನೆಯ ಸಂದರ್ಭದಲ್ಲಿ, ನೀವು ಭಾರತ ಸರ್ಕಾರದ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬೇಕು. ಯಾವುದೇ ರೀತಿಯ ಸೈಬರ್ ವಂಚನೆಯ ಸಂದರ್ಭದಲ್ಲಿ ನೀವು cybercrime.gov.in ನಲ್ಲಿ ದೂರು ಸಲ್ಲಿಸಬಹುದು .

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್