Unclaimed Deposits: ಬ್ಯಾಂಕ್​ಗಳು, ಇನ್ಷೂರೆನ್ಸ್​ ಕಂಪೆನಿಗಳಲ್ಲಿ ಇರುವ ಜನರ ಅನ್​ಕ್ಲೇಮ್ಡ್​ ಮೊತ್ತ 49 ಸಾವಿರ ಕೋಟಿ ರೂಪಾಯಿ

| Updated By: Srinivas Mata

Updated on: Jul 27, 2021 | 8:13 PM

ಬ್ಯಾಂಕ್​ಗಳು, ಇನ್ಷೂರೆನ್ಸ್​ ಕಂಪೆನಿಗಳ ಬಳಿ ಇರುವ ಅನ್​ಕ್ಲೇಮ್ಡ್​ ಠೇವಣಿಗಳ ಅಂದಾಜು ಮೊತ್ತ 49,000 ಕೋಟಿ ರೂಪಾಯಿ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ಹೇಳಿದ್ದಾರೆ.

Unclaimed Deposits: ಬ್ಯಾಂಕ್​ಗಳು, ಇನ್ಷೂರೆನ್ಸ್​ ಕಂಪೆನಿಗಳಲ್ಲಿ ಇರುವ ಜನರ ಅನ್​ಕ್ಲೇಮ್ಡ್​ ಮೊತ್ತ 49 ಸಾವಿರ ಕೋಟಿ ರೂಪಾಯಿ
ಈ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.
Follow us on

ಬ್ಯಾಂಕ್​ಗಳು ಮತ್ತು ಇನ್ಷೂರೆನ್ಸ್​ ಕಂಪೆನಿಗಳ ಬಳಿ ಅನ್​ಕ್ಲೇಮ್ಡ್​ (ತಮ್ಮದು ಎಂದು ಹಕ್ಕು ಸಾಧಿಸದ) (Unclaimed Deposits) ಮೊತ್ತ ಅಂದಾಜು 49,000 ಕೋಟಿ ರೂಪಾಯಿಯಷ್ಟಿದೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವರಾದ ಭಗವತ್ ಕರಡ್ ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಈ ಅನ್​ಕ್ಲೇಮ್​ ಮೊತ್ತವು ಡಿಸೆಂಬರ್ 31, 2020ರ ತನಕದ ಡೇಟಾ ಆಗಿದೆ. ಲಿಖಿತವಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve Bank Of India) ಪಡೆದಿರುವ ಮಾಹಿತಿಯಂತೆ, ಬ್ಯಾಂಕ್​ಗಳಲ್ಲಿ ಇರುವ ಅನ್​ಕ್ಲೇಮ್ಡ್ ಠೇವಣಿಯ ಮೊತ್ತವು ಡಿಸೆಂಬರ್ 31, 2020ರ ಕೊನೆಗೆ 24,356 ಕೋಟಿ ರೂಪಾಯಿ ಆಗುತ್ತದೆ. ಇನ್ನು ಇನ್ಷೂರೆನ್ಸ್ ರೆಗ್ಯುಲೇಟರ್ ಡೆವಲಪ್​ಮೆಂಟ್ ಅಥಾರಿಟಿ ಆಫ್ ಇಂಡಿಯಾದ ಪ್ರಕಾರ, ಸಾರ್ವಜನಿಕ ಹಾಗೂ ಖಾಸಗಿ ವಲಯದ ಇನ್ಷೂರೆನ್ಸ್​ ಕಂಪೆನಿಗಳಲ್ಲಿ ಇರುವ ಪಾಲಿಸಿದಾರರ ಅನ್​ಕ್ಲೇಮ್ಡ್​ ಮೊತ್ತವು 2020ರ ಡಿಸೆಂಬರ್ ಕೊನೆ ಹೊತ್ತಿಗೆ 24,586 ಕೋಟಿ ರೂಪಾಯಿ ಇದೆ.

ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾದಿಂದ ಡೆಪಾಸಿಟರ್ ಎಜುಕೇಷನ್ ಅಂಡ್ ಅವೇರ್​ನೆಸ್ ಫಂಡ್ (DEAF) ಸ್ಕೀಮ್, 2014 ಇದನ್ನು ರೂಪಿಸಲಾಗಿದೆ. ಬ್ಯಾಂಕ್​ಗಳಲ್ಲಿ ಕ್ಲೇಮ್​ ಆಗದೆ ಉಳಿದಿರುವ ಮೊತ್ತವನ್ನು DEAFಗೆ ಜಮೆ ಮಾಡಲಾಗುತ್ತದೆ. ಆ ನಂತರ DEAF ಅನ್ನು ಠೇವಣಿದಾರರ ಹಿತಾಸಕ್ತಿಯ ಉತ್ತೇಜನಕ್ಕಾಗಿ ಬಳಸಲಾಗುತ್ತದೆ. ಇನ್ನೊಂದು ಕಡೆ, ಎಲ್ಲ ಇನ್ಷೂರೆನ್ಸ್ ಕಂಪೆನಿಗಳಲ್ಲಿ ಇರುವ ಪಾಲಿಸಿದಾರರ ಅನ್​ಕ್ಲೇಮ್ಡ್​ ಮೊತ್ತವು 10 ವರ್ಷದ ನಂತರ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ (SCWF) ಪ್ರತಿ ವರ್ಷ ಹೋಗುತ್ತದೆ.

ಅಂದಹಾಗೆ, ಈ ನಿಧಿಯನ್ನು ಹಿರಿಯ ನಾಗರಿಕರ ಕಲ್ಯಾಣದ ಉತ್ತೇಜನಕ್ಕಾಗಿ ಬಳಸಲಾಗುತ್ತದೆ. ಸಚಿವರು ಮತ್ತೂ ಮುಂದುವರಿದು ಮಾತನಾಡಿ, ಅನ್​ಕ್ಲೇಮ್ಡ್​ ಠೇವಣಿಗಳು/ಕಾರ್ಯ ನಿರ್ವಹಣೆಯಲ್ಲಿ ಇಲ್ಲದ ಖಾತೆಗಳನ್ನು ಹೊಂದಿರುವ ಖಾತೆದಾರರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಬೇಕು ಎಂದು ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾದಿಂದ ಸಲಹೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Reserve Bank Of India: ಗ್ರಾಹಕರ ಅನ್​ಕ್ಲೇಮ್ ಡೆಪಾಸಿಟ್ ಬಗ್ಗೆ ಆರ್​ಬಿಐ ಮಹತ್ವದ ತೀರ್ಮಾನ

(Unclaimed Deposits With Banks And Insurance Company Amounted To Rs 49000 Crore As On December 2020)

Published On - 8:12 pm, Tue, 27 July 21