ಹೈದರಾಬಾದ್ನ ವಿಲಾಸಿ ಬಡಾವಣೆಯಾದ ಜ್ಯುಬಿಲಿ ಹಿಲ್ಸ್ನಲ್ಲಿ 6033 ಚದರಡಿಯಲ್ಲಿ ಇರುವ ಮನೆಯೊಂದನ್ನು ಮೂಲಸೌಕರ್ಯ, ಎನರ್ಜಿ. ಸಂಪನ್ಮೂಲ ಹಾಗೂ ವಿಮಾನ ನಿಲ್ದಾಣಗಳ ಉದ್ಯಮವನ್ನು ನಡೆಸುವ ಜಿವಿಕೆ ಸಮೂಹದ ಮಾಲೀಕರು 23.15 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ದಾಖಲೆಗಳು ಲಭ್ಯ ಇರುವ Zapkey.comನಿಂದ ತಿಳಿದುಬಂದಿದೆ. ಜಿವಿಕೆ ಸಮೂಹದ ಅಧ್ಯಕ್ಷ ಜಿ.ವಿ.ಕೃಷ್ಣಾರೆಡ್ಡಿ ಅವರು ಜುಲೈ 16ನೇ ತಾರೀಕಿನಂದು ಖರೀದಿ ಮಾಡಿದ್ದಾರೆ ಎಂದು ದಾಖಲೆಗಳಿಂದ ಗೊತ್ತಾಗಿದೆ. ನೋಂದಣಿ ದಾಖಲೆಯ ನಕಲು ಪ್ರತಿಯು ಮನಿಕಂಟ್ರೋಲ್ ಸಹ ನೋಡಿದೆ. ಭೂಮಿಯ ಒಟ್ಟು ಜಾಗ 1447 ಚದರ ಯಾರ್ಡ್ ಇದ್ದು, ಪ್ರತಿ ಯಾರ್ಡ್ ಬೆಲೆ 1.60 ಲಕ್ಷ ರೂಪಾಯಿ ಹತ್ತಿರ ಇದೆ. ಸ್ಥಳೀಯ ದಲ್ಲಾಳಿ ಹೇಳುವಂತೆ, ಇದು ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ಬೆಲೆ ಆಗಿದೆ.
ದಾಖಲೆಗಳ ಪ್ರಕಾರ, ರೆಡ್ಡಿ ಮುದ್ರಾಂಕ ಶುಲ್ಕ 1.43 ಕೋಟಿ ರೂಪಾಯಿ (ರೂ. 94.2 ಲಕ್ಷ), ವರ್ಗಾವಣೆ ಶುಲ್ಕ ರೂ. 35.26 ಲಕ್ಷ, ನೋಂದಣಿಗೆ ರೂ.11.7 ಲಕ್ಷ, ಬಳಕೆದಾರರ ಶುಲ್ಕ ರೂ. 210 ಹಾಗೂ ಮ್ಯುಟೇಷನ್ 2.3 ಲಕ್ಷ ರೂಪಾಯಿ ಆಗಿದೆ. ಮನಿಕಂಟ್ರೋಲ್ನಿಂದ ಈ ಬಗ್ಗೆ ಪ್ರತಿಕ್ರಿಯೆ ಪಡೆಯುವುದಕ್ಕೆ ಮನಿಕಂಟ್ರೋಲ್ನಿಂದ ಇಮೇಲ್ ಮಾಡಿದ್ದು, ಅದಕ್ಕೆ ಉತ್ತರ ನೀಡಿಲ್ಲ. ಜೂನ್ 26, 2020ರಂದು ಇದೇ ಪ್ರದೇಶದಲ್ಲಿ 23 ಕೋಟಿ ರೂಪಾಯಿಗೆ ಕೃಷ್ಣಾರೆಡ್ಡಿ ಅವರ ಹೆಸರಿನಲ್ಲೇ ಆಸ್ತಿ ನೋಂದಣಿ ಆಗಿದೆ.
ಹೈದರಾಬಾದ್ನ ಅತ್ಯಂತ ದುಬಾರಿ ಪ್ರದೇಶವಾದ ಜ್ಯುಬಿಲ್ ಹಿಲ್ನಲ್ಲಿ ಡೇಟಾ ಸೆಂಟರ್ ಕಂಪೆನಿಯಾದ CtrlsS ಮಾಲೀಕ ಏಪ್ರಿಲ್ನಲ್ಲಿ 2644 ಚದರ ಯಾರ್ಡ್ನ ಆಸ್ತಿಯನ್ನು 48 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು. Zapkey.comನಿಂದ ಈ ಅಂಶ ಗೊತ್ತಾಗಿತ್ತು. CtrlsS ಮಾಲೀಕ ಪಿನ್ನಪುರೆಟ್ಟಿ ಶ್ರೀಧರ್ ರೆಡ್ಡಿ ಈ ಆಸ್ತಿ ಖರೀದಿಸಿದ್ದರು. ಸತ್ಯನಾರಾಯಣರಾಜು ನಂದ್ಯಾಲ ಮಾರಾಟ ಮಾಡಿದ್ದರು. 1.93 ಕೋಟಿ ರೂ. ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದರು.
ಅದಕ್ಕೂ ಮುನ್ನ ಫಾರ್ಮಾ ಕಂಪೆನಿ ಮಾಲೀಕರಾದ ಎನ್. ವೆಂಕಟ ರೆಡ್ಡಿ ಅವರು ಅದೇ ಪ್ರದೇಶದಲ್ಲಿ 41 ಕೋಟಿ ರೂಪಾಯಿಗೆ 1537 ಚದರ ಮೀಟರ್ ಜಾಗವನ್ನು ಖರೀದಿಸಿದ್ದರು. ಕಳೆದ ಐದು ವರ್ಷದಲ್ಲಿ ಜ್ಯುಬಿಲಿ ಹಿಲ್ಸ್ನಲ್ಲಿ 120ರಷ್ಟು 10 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಹಿವಾಟು ಆಗಿವೆ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ಹಾಗೂ ಸನ್ನಿಲಿಯೋನ್ ಒಂದೇ ಅಪಾರ್ಟ್ಮೆಂಟ್ನ ನೆರೆಹೊರೆಯವರು; ಕೋಟಿಕೋಟಿಯ ಫ್ಲ್ಯಾಟ್ ಖರೀದಿ
(GVK Group Owner Purchased Property In Hyderabad Jubilee Hills For Rs 23 Crore )
Published On - 4:52 pm, Tue, 27 July 21