
ನವದೆಹಲಿ, ಡಿಸೆಂಬರ್ 2: ಸರ್ಕಾರ ಬಿಡುಗಡೆ ಮಾಡಿರುವ ವಾರ್ಷಿಕ ಕಾರ್ಮಿಕ ಸಮೀಕ್ಷಾ ವರದಿ (PLFS- Periodic Labour Force Survey) ಪ್ರಕಾರ ಭಾರತದಲ್ಲಿ ನಿರುದ್ಯೋಗ ದರ (Unemployment rate) ಕಳೆದ 6 ವರ್ಷದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. 2017-18ರಲ್ಲಿ 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರ ನಿರುದ್ಯೋಗ ದರ ಶೇ. 6 ಇತ್ತು. 2023-24ರಲ್ಲಿ ಅದು ಶೇ. 3.2ಕ್ಕೆ ಇಳಿದಿದೆ. ಆರು ವರ್ಷದಲ್ಲಿ ನಿರುದ್ಯೋಗ ದರ ಶೇ. 6ರಿಂದ ಶೇ. 3.2ಕ್ಕೆ ಇಳಿಕೆ ಕಂಡಿರುವುದು ಈ ದತ್ತಾಂಶದಿಂದ ತಿಳಿಯಬಹುದಾಗಿದೆ.
ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಪಿಎಲ್ಎಫ್ಎಸ್ ಸಮೀಕ್ಷಾ ಪದ್ಧತಿಯಲ್ಲಿ ಮಾರ್ಪಾಡುಗಳನ್ನು ತಂದಿದೆ. ಹಾಲಿ ಸಾಪ್ತಾಹಿಕ ಸ್ಥಿತಿ (ಸಿಡಬ್ಲ್ಯುಎಸ್) ಆಧಾರದ ಮೇಲೆ ಮಾಸಿಕವಾಗಿ ನಿರುದ್ಯೋಗಸ್ಥಿತಿಯನ್ನು ಅಂದಾಜು ಮಾಡುವ ವಿಧಾನವನ್ನು ಜಾರಿಗೆ ತರಲಾಗಿದೆ.
ಇದನ್ನು ಓದಿ: GST collections: ಜಿಎಸ್ಟಿ ದರ ಕಡಿತದ ಪರಿಣಾಮ, ನವೆಂಬರ್ನಲ್ಲಿ ತೆರಿಗೆ ಸಂಗ್ರಹ ಕುಂಠಿತ
ಈ ಹೊಸ ಮಾಸಿಕ ದತ್ತಾಂಶದ ಪ್ರಕಾರ 15 ವರ್ಷ ಮೇಲ್ಪಟ್ಟ ವಯೋಮಾನದವರ ನಿಗುದ್ಯೋಗದರ 2025ರ ಆಗಸ್ಟ್ ತಿಂಗಳಲ್ಲಿ ಶೇ. 5.1 ಇತ್ತು. ಸೆಪ್ಟೆಂಬರ್ ತಿಂಗಳಲ್ಲಿ ಶೇ. 5.2 ಇದೆ. ಈ ಎರಡು ತಿಂಗಳಲ್ಲಿ ಗ್ರಾಮೀಣ ನಿರುದ್ಯೋಗ ಕ್ರಮವಾಗಿ ಶೇ. 4.3 ಮತ್ತು ಶೇ. 4.6 ಇದೆ. ನಗರ ಭಾಗದಲ್ಲಿ ನಿರುದ್ಯೋಗದರವು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಶೇ. 6.7 ಮತ್ತು ಶೇ. 6.8 ಇದೆ.
ಇದನ್ನೂ ಓದಿ: ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ
ಇದಲ್ಲದೇ ಯುವಜನರನ್ನು ಉದ್ಯೋಗಕ್ಕೆ ಮತ್ತು ಸ್ವ ಉದ್ಯೋಗಕ್ಕೆ ಅಣಿಗೊಳಿಸಲು ಸರ್ಕಾರ ಹಲವು ರೀತಿಯ ಕೌಶಲ್ಯ ಅಭಿವೃದ್ಧಿ ಸ್ಕೀಮ್ಗಳನ್ನು ನಡೆಸುತ್ತಿದೆ. ಎರಡು ವರ್ಷದಲ್ಲಿ ಮೂರೂವರೆ ಕೋಟಿ ರೂ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಉದ್ಯೋಗ ಆಧಾರಿತ ಭತ್ಯೆ ಯೋಜನೆಯೊಂದನ್ನು (ಇಎಲ್ಐ) ಸರ್ಕಾರ ಜಾರಿಗೆ ತಂದಿದೆ. ಪಿಎಂ ವಿಕಸಿತ್ ಭಾರತ್ ರೋಜಗಾರ್ ಯೋಜನೆ ಎನ್ನಲಾಗುವ ಈ ಸ್ಕೀಮ್ಗೆ ಸರ್ಕಾರ 99,446 ಕೋಟಿ ರೂ ಮುಡಿಪಾಗಿಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ