AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್​ನ ಯುಪಿಐ ಧಮಾಕ; 20 ಬಿಲಿಯನ್ ಸಂಖ್ಯೆ, 26 ಟ್ರಿಲಿಯನ್ ರೂ ಮೌಲ್ಯದ ವಹಿವಾಟು

UPI transactions in 2025 November crosses 20 billion: 2025ರ ನವೆಂಬರ್ ತಿಂಗಳಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ 20 ಬಿಲಿಯನ್ ಗಡಿ ದಾಟಿದೆ. ವಹಿವಾಟು ಮೌಲ್ಯ ಕೂಡ 26 ಲಕ್ಷ ಕೋಟಿ ರೂಗಿಂತ ಹೆಚ್ಚಿದೆ. ಹಿಂದಿನ ವರ್ಷದ ನವೆಂಬರ್​ಗೆ ಹೋಲಿಸಿದರೆ ಯುಪಿಐ ವಹಿವಾಟು ಸಂಖ್ಯೆಯಲ್ಲಿ ಶೇ. 32ರಷ್ಟು ಏರಿಕೆ ಆಗಿದೆ.

ನವೆಂಬರ್​ನ ಯುಪಿಐ ಧಮಾಕ; 20 ಬಿಲಿಯನ್ ಸಂಖ್ಯೆ, 26 ಟ್ರಿಲಿಯನ್ ರೂ ಮೌಲ್ಯದ ವಹಿವಾಟು
ಯುಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 02, 2025 | 4:44 PM

Share

ನವದೆಹಲಿ, ಡಿಸೆಂಬರ್ 2: ಭಾರತದಲ್ಲಿ ಯುಪಿಐ ಬಳಕೆ (UPI) ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಎನ್​ಪಿಸಿಐನಿಂದ ಬಿಡುಗಡೆಯಾಗಿರುವ ದತ್ತಾಂಶದ ಪ್ರಕಾರ ನವೆಂಬರ್ ತಿಂಗಳಲ್ಲಿ 2,047 ಕೋಟಿ ಸಂಖ್ಯೆಯಷ್ಟು ಯುಪಿಐ ವಹಿವಾಟುಗಳು ನಡೆದಿವೆ. ಈ ತಿಂಗಳಲ್ಲಿ ಒಟ್ಟು 26.32 ಲಕ್ಷ ಕೋಟಿ ರೂ ಮೊತ್ತದಷ್ಟು ಹಣದ ವಹಿವಾಟು ಯುಪಿಐ ಮೂಲಕ ಆಗಿವೆ.

ಕಳೆದ ವರ್ಷದ ನವೆಂಬರ್​ಗೆ ಹೋಲಿಸಿದರೆ ಯುಪಿಐ ವಹಿವಾಟು ಪ್ರಮಾಣದಲ್ಲಿ ಶೇ. 32ರಷ್ಟು ಹೆಚ್ಚಳ ಆಗಿದೆ. ವಹಿವಾಟು ಮೌಲ್ಯದಲ್ಲೂ ಶೇ. 22ರಷ್ಟು ಏರಿಕೆ ಆಗಿದೆ. 2024ರ ನವೆಂಬರ್​ನಲ್ಲಿ 21.55 ಲಕ್ಷ ಕೋಟಿ ರೂ ಮೊತ್ತದ 1,548 ಕೋಟಿಯಷ್ಟು ವಹಿವಾಟುಗಳು ನಡೆದಿದ್ದವು. 2023ರ ನವೆಂಬರ್​ಗೆ ಹೋಲಿಸಿದರೆ, ಈಗ ಯುಪಿಐ ವಹಿವಾಟು ಪ್ರಮಾಣ ಶೇ. 70ರಷ್ಟು ಏರಿರುವುದು ಗಮನಾರ್ಹ.

ಇದನ್ನೂ ಓದಿ: Unemployment Rate: ನಿರುದ್ಯೋಗ ದರ 6 ವರ್ಷದಲ್ಲಿ ಶೇ. 6ರಿಂದ ಶೇ. 3.2ಕ್ಕೆ ಇಳಿಕೆ

ಕಳೆದ ಐದು ವರ್ಷದಲ್ಲಿ ಯುಪಿಐ ಬಳಕೆ ಗಣನೀಯವಾಗಿ ಏರುತ್ತಾ ಬಂದಿದೆ. 2021ರ ನವೆಂಬರ್​ನಲ್ಲಿ 7.68 ಲಕ್ಷ ಕೋಟಿ ರೂ ಮೌಲ್ಯದ 418 ಕೋಟಿ ಟ್ರಾನ್ಸಾಕ್ಷನ್​ಗಳು ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ಆಗಿದ್ದವು. 2022ರಲ್ಲಿ ಇದು ಎರಡು ಪಟ್ಟು ಹೆಚ್ಚಾಗಿದೆ. ಆ ನಂತರ ಯುಪಿಐ ಬಳಕೆ ಬಹಳ ಸ್ಥಿರವಾಗಿ ಏರುತ್ತಾ ಬಂದಿದೆ. ಸಣ್ಣ ಮೌಲ್ಯದ ವಹಿವಾಟುಗಳಲ್ಲಿ ಹೆಚ್ಚಿನವು ಯುಪಿಐನಿಂದಲೇ ಆಗುತ್ತಿರುವುದು ಗಮನಾರ್ಹ.

ಸೆಪ್ಟೆಂಬರ್ ತಿಂಗಳಲ್ಲಿ 1,963 ಕೋಟಿ, ಅಕ್ಟೋಬರ್ ತಿಂಗಳಲ್ಲಿ 2,070 ಕೋಟಿ ಮತ್ತು ನವೆಂಬರ್​ನಲ್ಲಿ 2,040 ಕೋಟಿ ಯುಪಿಐ ವಹಿವಾಟುಗಳು ನಡೆದಿವೆ. ಅಕ್ಟೋಬರ್​ಗೆ ಹೋಲಿಸಿದರೆ ನವೆಂಬರ್​ನಲ್ಲಿ ವಹಿವಾಟು ಪ್ರಮಾಣ ಕಡಿಮೆ ಆಗಿದೆ. ವಹಿವಾಟು ಮೌಲ್ಯದಲ್ಲೂ ಇದೇ ಟ್ರೆಂಡ್ ಇದೆ. ಸೆಪ್ಟೆಂಬರ್​ನಲ್ಲಿ 24.90 ಲಕ್ಷ ಕೋಟಿ ರೂ, ಅಕ್ಟೋಬರ್​ನಲ್ಲಿ 27.28 ಲಕ್ಷ ಕೋಟಿ ರೂ ಮತ್ತು ಈಗ ನವೆಂಬರ್​ನಲ್ಲಿ 26.32 ಲಕ್ಷ ಕೋಟಿ ರೂ ಮೌಲ್ಯದ ವಹಿವಾಟುಗಳು ನಡೆದಿವೆ.

ಇದನ್ನೂ ಓದಿ: GST collections: ಜಿಎಸ್​ಟಿ ದರ ಕಡಿತದ ಪರಿಣಾಮ, ನವೆಂಬರ್​ನಲ್ಲಿ ತೆರಿಗೆ ಸಂಗ್ರಹ ಕುಂಠಿತ

ನಿತ್ಯದ ಸರಾಸರಿ ಯುಪಿಐ ವಹಿವಾಟು ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ 66ರಿಂದ 68 ಕೋಟಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್