AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Unemployment Rate: ನಿರುದ್ಯೋಗ ದರ 6 ವರ್ಷದಲ್ಲಿ ಶೇ. 6ರಿಂದ ಶೇ. 3.2ಕ್ಕೆ ಇಳಿಕೆ

Unemployment rate in India declines from 6pc to 3.2pc in 6 years: ಭಾರತದಲ್ಲಿ 15 ವರ್ಷ ಮೇಲ್ಪಟ್ಟ ವಯಸ್ಸಿನ ಜನರಲ್ಲಿ 2017-18ರಲ್ಲಿ ನಿರುದ್ಯೋಗ ಪ್ರಮಾಣ ಶೇ. 6 ಇತ್ತು. 2023-24ರಲ್ಲಿ ಇದು ಶೇ. 3.2ಕ್ಕೆ ಇಳಿದಿದೆ. ಈ ಆರು ವರ್ಷದಲ್ಲಿ ಭಾರತದಲ್ಲಿ ನಿರುದ್ಯೋಗ ದರ ಗಣನೀಯವಾಗಿ ಕಡಿಮೆ ಆಗಿದೆ. ಸರ್ಕಾರ ನಿರುದ್ಯೋಗ ಕಡಿಮೆ ಮಾಡಲು ಹಲವು ಕೌಶಲ್ಯಾಭಿವೃದ್ಧಿ ಯೊಜನೆಗಳನ್ನು ಹಮ್ಮಿಕೊಂಡಿದೆ.

Unemployment Rate: ನಿರುದ್ಯೋಗ ದರ 6 ವರ್ಷದಲ್ಲಿ ಶೇ. 6ರಿಂದ ಶೇ. 3.2ಕ್ಕೆ ಇಳಿಕೆ
ಉದ್ಯೋಗಾಕಾಂಕ್ಷಿಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 02, 2025 | 12:48 PM

Share

ನವದೆಹಲಿ, ಡಿಸೆಂಬರ್ 2: ಸರ್ಕಾರ ಬಿಡುಗಡೆ ಮಾಡಿರುವ ವಾರ್ಷಿಕ ಕಾರ್ಮಿಕ ಸಮೀಕ್ಷಾ ವರದಿ (PLFS- Periodic Labour Force Survey) ಪ್ರಕಾರ ಭಾರತದಲ್ಲಿ ನಿರುದ್ಯೋಗ ದರ (Unemployment rate) ಕಳೆದ 6 ವರ್ಷದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. 2017-18ರಲ್ಲಿ 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರ ನಿರುದ್ಯೋಗ ದರ ಶೇ. 6 ಇತ್ತು. 2023-24ರಲ್ಲಿ ಅದು ಶೇ. 3.2ಕ್ಕೆ ಇಳಿದಿದೆ. ಆರು ವರ್ಷದಲ್ಲಿ ನಿರುದ್ಯೋಗ ದರ ಶೇ. 6ರಿಂದ ಶೇ. 3.2ಕ್ಕೆ ಇಳಿಕೆ ಕಂಡಿರುವುದು ಈ ದತ್ತಾಂಶದಿಂದ ತಿಳಿಯಬಹುದಾಗಿದೆ.

ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಪಿಎಲ್​ಎಫ್​ಎಸ್ ಸಮೀಕ್ಷಾ ಪದ್ಧತಿಯಲ್ಲಿ ಮಾರ್ಪಾಡುಗಳನ್ನು ತಂದಿದೆ. ಹಾಲಿ ಸಾಪ್ತಾಹಿಕ ಸ್ಥಿತಿ (ಸಿಡಬ್ಲ್ಯುಎಸ್) ಆಧಾರದ ಮೇಲೆ ಮಾಸಿಕವಾಗಿ ನಿರುದ್ಯೋಗಸ್ಥಿತಿಯನ್ನು ಅಂದಾಜು ಮಾಡುವ ವಿಧಾನವನ್ನು ಜಾರಿಗೆ ತರಲಾಗಿದೆ.

ಇದನ್ನು ಓದಿ: GST collections: ಜಿಎಸ್​ಟಿ ದರ ಕಡಿತದ ಪರಿಣಾಮ, ನವೆಂಬರ್​ನಲ್ಲಿ ತೆರಿಗೆ ಸಂಗ್ರಹ ಕುಂಠಿತ

ಈ ಹೊಸ ಮಾಸಿಕ ದತ್ತಾಂಶದ ಪ್ರಕಾರ 15 ವರ್ಷ ಮೇಲ್ಪಟ್ಟ ವಯೋಮಾನದವರ ನಿಗುದ್ಯೋಗದರ 2025ರ ಆಗಸ್ಟ್ ತಿಂಗಳಲ್ಲಿ ಶೇ. 5.1 ಇತ್ತು. ಸೆಪ್ಟೆಂಬರ್ ತಿಂಗಳಲ್ಲಿ ಶೇ. 5.2 ಇದೆ. ಈ ಎರಡು ತಿಂಗಳಲ್ಲಿ ಗ್ರಾಮೀಣ ನಿರುದ್ಯೋಗ ಕ್ರಮವಾಗಿ ಶೇ. 4.3 ಮತ್ತು ಶೇ. 4.6 ಇದೆ. ನಗರ ಭಾಗದಲ್ಲಿ ನಿರುದ್ಯೋಗದರವು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಶೇ. 6.7 ಮತ್ತು ಶೇ. 6.8 ಇದೆ.

ಉದ್ಯೋಗ ಸೃಷ್ಟಿಗೆ ಸರ್ಕಾರದಿಂದ ನಡೆಸಲಾಗುವ ಯೋಜನೆಗಳು

  • ಪಿಎಂ ಉದ್ಯೋಗ ಸೃಷ್ಟಿ ಯೋಜನೆ (ಪಿಎಂಇಜಿಪಿ)
  • ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನ್​ರೇಗಾ)
  • ಪಿಎಲ್​ಐ ಸ್ಕೀಮ್
  • ದೀನದಯಾಳ್ ಅಂತ್ಯೋದಯ ಯೋಜನೆ
  • ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ
  • ಪಿಎಂ ಕೌಶಲ್ ವಿಕಾಸ್ ಯೋಜನೆ
  • ಗ್ರಾಮೀಣ ಸ್ವ ಉದ್ಯೋಗ ಮತ್ತು ತರಬೇತಿ ಸಂಸ್ಥೆಗಳು
  • ಪಿಎಂ ಸ್ವನಿಧಿ ಯೋಜನೆ (ಬೀದಿಬದಿ ವ್ಯಾಪಾರಿಗಳಿಗೆ)
  • ಸ್ಟ್ಯಾಂಡಪ್ ಇಂಡಿಯಾ ಸ್ಕೀಮ್
  • ಸ್ಟಾರ್ಟಪ್ ಇಂಡಿಯಾ ಸ್ಕೀಮ್
  • ಪಿಎಂ ಮುದ್ರಾ ಯೋಜನೆ

ಇದನ್ನೂ ಓದಿ: ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ

ಇದಲ್ಲದೇ ಯುವಜನರನ್ನು ಉದ್ಯೋಗಕ್ಕೆ ಮತ್ತು ಸ್ವ ಉದ್ಯೋಗಕ್ಕೆ ಅಣಿಗೊಳಿಸಲು ಸರ್ಕಾರ ಹಲವು ರೀತಿಯ ಕೌಶಲ್ಯ ಅಭಿವೃದ್ಧಿ ಸ್ಕೀಮ್​ಗಳನ್ನು ನಡೆಸುತ್ತಿದೆ. ಎರಡು ವರ್ಷದಲ್ಲಿ ಮೂರೂವರೆ ಕೋಟಿ ರೂ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಉದ್ಯೋಗ ಆಧಾರಿತ ಭತ್ಯೆ ಯೋಜನೆಯೊಂದನ್ನು (ಇಎಲ್​ಐ) ಸರ್ಕಾರ ಜಾರಿಗೆ ತಂದಿದೆ. ಪಿಎಂ ವಿಕಸಿತ್ ಭಾರತ್ ರೋಜಗಾರ್ ಯೋಜನೆ ಎನ್ನಲಾಗುವ ಈ ಸ್ಕೀಮ್​​ಗೆ ಸರ್ಕಾರ 99,446 ಕೋಟಿ ರೂ ಮುಡಿಪಾಗಿಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ