ನವದೆಹಲಿ, ನವೆಂಬರ್ 29: ಮಹತ್ವದ ಹೆಜ್ಜೆಯಲ್ಲಿ 16ನೇ ಹಣಕಾಸು ಆಯೋಗದ ನಿಬಂಧನೆಗಳಿಗೆ (Terms of Reference for 16th Finance Commission) ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಇದೂ ಸೇರಿದಂತೆ ವಿವಿಧ ಯೋಜನೆ ಮತ್ತು ಪ್ರಸ್ತಾಪಗಳಿಗೆ ಸಮ್ಮತಿ ನೀಡಲಾಗಿದೆ. ಮುಂದೆ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಈ 16ನೇ ಹಣಕಾಸು ಆಯೋಗ ಶಿಫಾರಸುಗಳನ್ನು (recommendations) ಮಾಡಬಹುದು. 2026ರ ಏಪ್ರಿಲ್ 1ರಿಂದ ಆರಂಭವಾಗಿ ಐದು ವರ್ಷ ಅವಧಿಗೆ ಪ್ರಧಾನಿ ಅನುಮೋದನೆಗೆ ಬದ್ಧವಾಗಿ ಈ ಆಯೋಗದ ಶಿಫಾರಸುಗಳು ಮಾನ್ಯವಾಗಿರುತ್ತವೆ.
ಸದ್ಯ 15ನೇ ಹಣಕಾಸು ಆಯೋಗದ ನಿಯಮಗಳು 2025-26ರ ಹಣಕಾಸು ವರ್ಷದವರೆಗೂ ಮಾನ್ಯವಾಗಿರುತ್ತವೆ. ಅದಾದ ಬಳಿಕ 16ನೇ ಹಣಕಾಸು ಆಯೋಗದ ಶಿಫಾರಸುಗಳು ಗಣನೆಗೆ ಬರುತ್ತವೆ. ಹಣಕಾಸು ಆಯೋಗವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತೆರಿಗೆ ಆದಾಯದಲ್ಲಿ ಎಷ್ಟು ಪಾಲು ಹಂಚಿಕೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತದೆ.
ಇದನ್ನೂ ಓದಿ: 81 ಕೋಟಿ ಬಡವರಿಗೆ ಉಚಿತ ಪಡಿತರ ವಿತರಣೆ; 5 ವರ್ಷ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ
ತೆರಿಗೆ ಆದಾಯವನ್ನು ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೆ ಮಾಡಲು ಸೂತ್ರ ರೂಪಿಸುವುದು ಸೇರಿದಂತೆ ಕೆಲವೊಂದಿಷ್ಟು ಸಂಗತಿಗಳಲ್ಲಿ ಶಿಫಾರಸು ಮಾಡಲು 15ನೇ ಹಣಕಾಸು ಆಯೋಗವು ಅಧಿಕಾರ ಹೊಂದಿರುತ್ತದೆ. ಆದರೆ, ಆಯೋಗದ ಶಿಫಾರಸು ಜಾರಿಯಾಗಬೇಕಾದರೆ ಪ್ರಧಾನಿಯ ಅನುಮೋದನೆ ಬೇಕಾಗುತ್ತದೆ.
ಇದನ್ನೂ ಓದಿ: Jeevan Utsav: ಎಲ್ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?
ಸಾಮಾನ್ಯವಾಗಿ ಹಣಕಾಸು ಆಯೋಗವು ವರದಿ ಪ್ರಸ್ತುತಪಡಿಸಲು 2 ವರ್ಷ ಬೇಕಾಗುತ್ತದೆ. ಇಂದು ಸುದ್ದಿಗೋಷ್ಠಿಯಲ್ಲಿ ಸಚಿವ ಅನುರಾಗ್ ಠಾಕೂರ್ ನೀಡಿದ ಮಾಹಿತಿ ಪ್ರಕಾರ 16ನೇ ಹಣಕಾಸು ಆಯೋಗವು ತನ್ನ ವರದಿಯನ್ನು 2025ರ ಅಕ್ಟೋಬರ್ನೊಳಗೆ ಸಲ್ಲಿಸಲಿದೆ. ಅದು ಮಾಡುವ ಶಿಫಾರಸುಗಳು 2026ರ ಏಪ್ರಿಲ್ನಿಂದ ಚಾಲನೆಗೆ ಬರಲಿದ್ದು ಅಲ್ಲಿಂದ 5 ವರ್ಷ ಮಾನ್ಯವಾಗಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Wed, 29 November 23