Post Office: ಭಾರತದ ಅಂಚೆ ಕಚೇರಿ ಮತ್ತು ಯುಪಿಐ ವ್ಯವಸ್ಥೆ ವಿಶ್ವಕ್ಕೆ ಮಾದರಿ ಎಂದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್​ನ ಮಸಾಹಿಕೋ ಮೆಟೋಕಿ

|

Updated on: Jul 19, 2023 | 11:13 AM

UPU DG Visit to India: ಅಂಚೆ ಕಚೇರಿಗಳ ಮೂಲಕ ಕ್ರಾಸ್ ಬಾರ್ಡರ್ ರೆಮಿಟೆನ್ಸ್​ಗೆ ಯುಪಿಐ ಅನ್ನು ಅಳವಡಿಸುವ ಪ್ರಸ್ತಾವವನ್ನು ಪರಿಶೀಲಿಸುವುದಾಗಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್​ನ ಡಿಜಿ ಮಸಾಹಿಕೋ ಮೆಟೋಕಿ ಹೇಳಿದ್ದಾರೆ.

Post Office: ಭಾರತದ ಅಂಚೆ ಕಚೇರಿ ಮತ್ತು ಯುಪಿಐ ವ್ಯವಸ್ಥೆ ವಿಶ್ವಕ್ಕೆ ಮಾದರಿ ಎಂದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್​ನ ಮಸಾಹಿಕೋ ಮೆಟೋಕಿ
ಅಶ್ವಿನಿ ವೈಷ್ಣವ್, ಮಸಾಹಿಕೋ ಮೆಟೋಕಿ
Follow us on

ನವದೆಹಲಿ: ಭಾರತದ ಅಂಚೆ ಕಚೇರಿ ವ್ಯವಸ್ಥೆಯಲ್ಲಿ ಆಗಿರುವ ಪರಿವರ್ತನೆಗಳನ್ನು ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU- Universal Postal Union) ಸಂಘಟನೆಯ ಮಹಾನಿರ್ದೇಶಕ ಮಸಾಹಿಕೋ ಮೆಟೋಕಿ (Masahiko Metoki) ಶ್ಲಾಘಿಸಿದ್ದಾರೆ. ನವದೆಹಲಿಯಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್​ನ ಪ್ರಾದೇಶಿಕ ಕಚೇರಿ ಉದ್ಘಾಟನೆಯ ನಿಮಿತ್ತ ಮೆಟೋಕಿ ಅವರು ಮೂರು ದಿನಗಳ ಭೇಟಿಗೆ ಭಾರತಕ್ಕೆ ಆಗಮಿಸಿದ ವೇಳೆ ಕೇಂದ್ರ ಐಟಿ, ಕಮ್ಯೂನಿಕೇಶನ್ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಅವರನ್ನು ಭೇಟಿಯಾದರು. ಈ ವೇಳೆ, ಭಾರತದ ಅಂಚೆ ಕಚೇರಿ ಮತ್ತು ಯುಪಿಐ ವ್ಯವಸ್ಥೆ ಬಗ್ಗೆ ಅವರಿಬ್ಬರಲ್ಲಿ ವಿಚಾರ ವಿನಿಯಮ ನಡೆಯಿತು.

ಭಾರತದಲ್ಲಿ ಅಂಚೆ ಕಚೇರಿಗಳು ಡಿಜಿಟಲ್ ಶಕ್ತಿಯೊಂದಿಗೆ ಪ್ರಬಲ ಜಾಲವಾಗಿ ಪರಿವರ್ತನೆ ಆಗಿರುವುದು; ಮೂಲೆ ಮೂಲೆಗಳಲ್ಲಿನ ಮನೆಗಳಿಗೆ ಸರ್ಕಾರಿ ಸೇವೆಗಳನ್ನು ತಲುಪಿಸಲು ಪೋಸ್ಟ್ ಆಫೀಸ್ ಜಾಲ ಬಲಯುತವಾಗಿರುವುದು; ಹಾಗೆಯೇ ಯುಪಿಐ ಮತ್ತು ಐಪಿಪಿಬಿ (IPPB- India Post Payment Bank) ಮೂಲಕ ಅಂಚೆ ಕಚೇರಿಗಳು ಒಳ್ಳೆಯ ಹಣಕಾಸು ಮಾದರಿ (Financial Inclusion) ಹಾಕಿಕೊಟ್ಟಿವೆ ಎಂದು ಸಚಿವ ಎ ವೈಷ್ಣವ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಇದನ್ನೂ ಓದಿVande Sadharan Train: ಬಡವರ ಬಂಡಿ; ಬರಲಿದೆ ಸಾಮಾನ್ಯ ಅವತಾರದ ವಂದೇ ಭಾರತ್ ರೈಲು; ಅಗ್ಗದ ದರದಲ್ಲಿ ಪ್ರಯಾಣಕ್ಕೆ ಅವಕಾಶ

ಸಚಿವರ ಅಭಿಪ್ರಾಯಕ್ಕೆ ಸಮ್ಮತಿಸಿದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್​ನ ಡೈರೆಕ್ಟರ್ ಜನರಲ್ ಮಸಹಾಹಿಕೋ ಮೆಟೋಕಿ, ಡಿಜಿಟಲ್ ಸೌಕರ್ಯಗಳನ್ನು ಬಳಸಿಕೊಂಡು ಅಂಚೆ ಕಚೇರಿಗಳು ಭಾರತದಲ್ಲಿ ವಿಸ್ತರಣೆ ಆಗಿರುವ ಸಂಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಭಾರತದಲ್ಲಿ ಅಂಚೆ ಕಚೇರಿಗಳು ಕಂಡಿರುವ ಪರಿವರ್ತನೆ ವಿಶ್ವಕ್ಕೆ ಮಾದರಿಯಾಗಿದೆ. ಬೇರೆ ದೇಶಗಳಲ್ಲೂ ಇದೇ ರೀತಿ ಅಂಚೆ ಕಚೇರಿಗಳಿಗೆ ಪರಿವರ್ತನೆ ತರಬೇಕು ಎಂದು ಮೆಟೋಕಿ ಅಭಿಪ್ರಾಯಪಟ್ಟರು.

ಯುಪಿಐ ವ್ಯವಸ್ಥೆ ಬಗ್ಗೆ ಮೆಟೋಕಿ ಮೆಚ್ಚುಗೆ

ಇಡೀ ವಿಶ್ವದ ಗಮನ ಸೆಳೆದಿರುವ ಭಾರತದ ಹಣ ಪಾವತಿ ವ್ಯವಸ್ಥೆ ಯುಪಿಐ ಬಗ್ಗೆ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ ಡಿಜಿ ಮಸಾಹಿಕೋ ಮೆಟೋಕಿ ಕೂಡ ಶ್ಲಾಘನೆ ವ್ಯಕ್ತಪಡಿಸಿದರು. ಪೋಸ್ಟಲ್ ಚಾನಲ್​ಗಳ ಮೂಲಕ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜನರು ಹಣ ಕಳುಹಿಸುವ ವ್ಯವಸ್ಥೆಯಲ್ಲಿ (Cross Border Remittance) ಯುಪಿಐ ಅನ್ನು ಅಳವಡಿಸುವ ಬಗ್ಗೆ ಸಚಿವ ವೈಷ್ಣವ್ ಅವರ ಪ್ರಸ್ತಾವವನ್ನು ಪರಿಶೀಲಿಸುವುದಾಗಿ ಮೆಟುಕಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ