Vande Sadharan Train: ಬಡವರ ಬಂಡಿ; ಬರಲಿದೆ ಸಾಮಾನ್ಯ ಅವತಾರದ ವಂದೇ ಭಾರತ್ ರೈಲು; ಅಗ್ಗದ ದರದಲ್ಲಿ ಪ್ರಯಾಣಕ್ಕೆ ಅವಕಾಶ

Indian Railways To Bring New Non-AC Trains: ಭಾರತೀಯ ರೈಲ್ವೆ ಇದೀಗ ಅಗ್ಗದ ದರದಲ್ಲಿ ಪ್ರಯಾಣ ಸೇವೆ ಕೊಡಲು ವಂದೇ ಭಾರತ್ ರೀತಿಯ ಹೊಸ ರೈಲು ತಯಾರಿಸಲು ಯೋಜಿಸುತ್ತಿದೆ. ಅಕ್ಟೋಬರ್​ನಲ್ಲಿ ಇದರ ಪ್ರೋಟೋಟೈಪ್ ಹೊರಬರುವ ನಿರೀಕ್ಷೆ ಇದೆ.

Vande Sadharan Train: ಬಡವರ ಬಂಡಿ; ಬರಲಿದೆ ಸಾಮಾನ್ಯ ಅವತಾರದ ವಂದೇ ಭಾರತ್ ರೈಲು; ಅಗ್ಗದ ದರದಲ್ಲಿ ಪ್ರಯಾಣಕ್ಕೆ ಅವಕಾಶ
ವಂದೇ ಭಾರತ್ ರೈಲು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 19, 2023 | 11:25 AM

ಭಾರತೀಯ ರೈಲ್ವೆಯ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳು (Vande Bharat Express Trains) ದೇಶವಾಸಿಗಳ ಗಮನ ಸೆಳೆದಿವೆ. ಈ ಹೈ ಸ್ಪೀಡ್ ರೈಲುಗಳ ಪ್ರಯಾಣ ದರ ಬಹಳ ಹೆಚ್ಚಾಯಿತು ಎಂಬ ಅಪಸ್ವರ ಬಿಟ್ಟರೆ ಬಹುತೇಕ ಈ ರೈಲುಗಳು ಹಿಟ್ ಎನಿಸಿವೆ. ಇದೀಗ ಭಾರತೀಯ ರೈಲ್ವೇಸ್ ವಂದೇ ಭಾರತ್ ಮಾದರಿಯ ರೈಲುಗಳನ್ನು ಜನಸಾಮಾನ್ಯರಿಗೆಂದು ತರಲು ಯೋಜಿಸಿದೆ. ಎಸಿ ವ್ಯವಸ್ಥೆ ಇಲ್ಲದ ನಾನ್ಎಸಿ ರೈಲುಗಳನ್ನು ತಯಾರಿಸುವ ಯೋಜನೆ ಇದೆ. ರಿಸರ್ವ್ ಅಲ್ಲದ ಸೆಕೆಂಡ್ ಕ್ಲಾಸ್ ಮತ್ತು 3-ಟಯರ್ ಸ್ಲೀಪರ್ ಕೋಚ್​ಗಳನ್ನು ಅಳವಡಿಸುವ ಸಾಧ್ಯತೆ ಇದೆ. ಇದನ್ನು ಬಿಟ್ಟು ವಂದೇ ಭಾರತ್ ರೈಲಿನ ಕೆಲವೊಂದಿಷ್ಟು ಫೀಚರ್​ಗಳು ಹೊಸ ರೈಲಿನಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ. ಈ ರೈಲಿಗೆ ಇನ್ನೂ ಹೆಸರನ್ನಿಟ್ಟಿಲ್ಲ.

ಬಡವರ ಬಂಡಿಯಲ್ಲಿ ಎರಡು ಬದಿಯಲ್ಲಿ ಎಂಜಿನ್

ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಎಂಜಿನ್ ರಹಿತವಾದ ವ್ಯವಸ್ಥೆ ಹೊಂದಿದೆ. ಅಂದರೆ ಎಂಜಿನ್ ಇಲ್ಲದೇ ಇದು ಚಾಲಿಸಬಲ್ಲುದು. ಆದರೆ, ಸಾಮಾನ್ಯರಿಗೆಂದು ರೂಪಿಸಲಾಗುವ ಹೊಸ ರೈಲಿಗೆ ಸಾಮಾನ್ಯ ರೈಲುಗಳಲ್ಲಿಯಂತೆ ಎಂಜಿನ್ ಇರುತ್ತದೆ. ವಿಶೇಷತೆ ಎಂದರೆ ಎರಡೂ ತುದಿಗಳಲ್ಲಿ ಲೊಕೋಮೋಟಿವ್ (ಎಂಜಿನ್) ಅಳವಡಿಸಲಾಗುತ್ತದೆ. ಅಂದರೆ ಎರಡೂ ಕಡೆಗಳಿಂದ ರೈಲುಗಳನ್ನು ಚಾಲಿಸಬಹುದು. ಒಂದೇ ಬದಿಯಲ್ಲಿ ಎಂಜಿನ್ ಇರುವ ರೈಲಾದರೆ, ಎಂಜಿನ್ ಅನ್ನು ಡೀಟ್ಯಾಚ್ ಮಾಡಿ ಇನ್ನೊಂದು ಬದಿಗೆ ತೆಗೆದುಕೊಂಡು ಹೋಗಿ ಜೋಡಿಸಲು ಒಂದಷ್ಟು ಸಮಯ ವ್ಯಯ ಆಗುತ್ತದೆ. ಎರಡೂ ಕಡೆ ಲೋಕೋಮೋಟಿವ್ ಇದ್ದರೆ ಈ ಸಮಸ್ಯೆ ತಪ್ಪುತ್ತದೆ.

ಇದನ್ನೂ ಓದಿRIL: ರಿಲಾಯನ್ಸ್ ಇಂಡಸ್ಟ್ರೀಸ್​ನಿಂದ ಹಣಕಾಸು ಸೇವೆ ಪ್ರತ್ಯೇಕ; ಆರ್​ಐಎಲ್ ಷೇರುದಾರರಿಗೆ ಪ್ರತೀ ಷೇರಿಗೆ ಹೊಸ ಜಿಯೋ ಷೇರು ಉಚಿತ; ಇದು ನಿಜವಾ?

ವಂದೇ ಭಾರತ್​ನ ಬಡವರ ಬಂಡಿ ಅವತಾರದ ರೈಲಿನಲ್ಲಿ ದಿವ್ಯಾಂಗರಿಗೆ ಅನುಕೂಲವಾಗುವ ಬೋಗಿಗಳಿರುತ್ತವೆ. 8 ಸೆಕೆಂಡ್ ಕ್ಲಾಸ್ ಅನ್​ರಿಸರ್ವ್ಡ್ ಕೋಚ್, 12 ಸೆಕೆಂಡ್ ಕ್ಲಾಸ್ 3ಟಯರ್ ಸ್ಲೀಪರ್ ಕೋಚ್​ಗಳಿರುತ್ತವೆ. ಇವೆಲ್ಲವೂ ಹವಾನಿಯಂತ್ರಿತ ವ್ಯವಸ್ಥೆ ರಹಿತವಾದವು.

ಹೊಸ ರೈಲಿನ ಪ್ರೋಟೋಟೈಪ್ ಅನ್ನು ಈ ವರ್ಷದ ಅಂತ್ಯದೊಳಗೆ ಪ್ರಸ್ತುಪಡಿಸಬಹುದು. ಬಹುತೇಕ ಅಕ್ಟೋಬರ್ ತಿಂಗಳಲ್ಲಿ ಪ್ರೋಟೋಟೈಪ್ ಸಿದ್ಧವಾಗಬಹುದು. ಈ ಹೊಸ ರೈಲುಗಳ ಲೋಕೋಮೋಟಿವ್​ಗಳನ್ನು ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ (ಸಿಎಲ್​ಡಬ್ಲ್ಯು) ಘಟಕದಲ್ಲಿ ತಯಾರಿಸಲಾಗುತ್ತದೆ. ಇದರ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ನಿರ್ಮಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Tue, 18 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ