AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RIL: ರಿಲಾಯನ್ಸ್ ಇಂಡಸ್ಟ್ರೀಸ್​ನಿಂದ ಹಣಕಾಸು ಸೇವೆ ಪ್ರತ್ಯೇಕ; ಆರ್​ಐಎಲ್ ಷೇರುದಾರರಿಗೆ ಪ್ರತೀ ಷೇರಿಗೆ ಹೊಸ ಜಿಯೋ ಷೇರು ಉಚಿತ; ಇದು ನಿಜವಾ?

RIL Financial Business Demerger: ಆರ್​ಐಎಲ್​ನಿಂದ ಸ್ಟ್ರಾಟಿಜಿಕ್ ಇನ್ವೆಸ್ಟ್​ಮೆಂಟ್ ಸಂಸ್ಥೆ ಡೀಮರ್ಜ್ ಆಗುತ್ತಿದ್ದು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿ ಎಂಬ ಹೊಸ ಹೆಸರು ಪಡೆಯಲಿದೆ. ಈ ವೇಳೆ ರಿಲಾಯನ್ಸ್ ಷೇರುದಾರರಿಗೆ ಪ್ರತೀ ಷೇರಿಗೆ ಜೆಎಫ್​ಎಸ್​ಎಲ್​ನ ಒಂದು ಷೇರು ಉಚಿತವಾಗಿ ಸಿಗಲಿದೆ.

RIL: ರಿಲಾಯನ್ಸ್ ಇಂಡಸ್ಟ್ರೀಸ್​ನಿಂದ ಹಣಕಾಸು ಸೇವೆ ಪ್ರತ್ಯೇಕ; ಆರ್​ಐಎಲ್ ಷೇರುದಾರರಿಗೆ ಪ್ರತೀ ಷೇರಿಗೆ ಹೊಸ ಜಿಯೋ ಷೇರು ಉಚಿತ; ಇದು ನಿಜವಾ?
ರಿಲಾಯನ್ಸ್ ಗ್ರೂಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 17, 2023 | 6:49 PM

ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇದೀಗ ತನ್ನ ಹಣಕಾಸು ಸೇವೆಯ ವ್ಯವಹಾರಗಳನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್ (Jio Financial Services) ಆಗಿ ಡೀಮರ್ಜ್ ಮಾಡುತ್ತಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಬಳಿ ಈಗಾಗಲೇ ರಿಲಾಯನ್ಸ್ ಸ್ಟ್ರಾಟಿಜಿಕ್ ಇನ್ವೆಸ್ಟ್​ಮೆಂಟ್ ಲಿ ಎಂಬ ಸಂಸ್ಥೆ ಇದೆ. ಈ ಕಂಪನಿಯನ್ನು ಆರ್​ಐಎಲ್​ನಿಂದ ಬೇರ್ಪಡಿಸಲಾಗುತ್ತದೆ. ಬೇರ್ಪಟ್ಟ ರಿಲಾಯನ್ಸ್ ಸ್ಟ್ರಾಟಿಜಿಕ್ ಇನ್ವೆಸ್ಟ್​ಮೆಂಟ್ ಸಂಸ್ಥೆಯನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿ (JFSL) ಎಂದು ಮರುಹೆಸರಿಸಲಾಗುತ್ತದೆ.

ಈಗ ಪ್ರತ್ಯೇಕ ಸಂಸ್ಥೆಯಾಗಲಿರುವ ಜೆಎಫ್​ಎಸ್​ಎಲ್ ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್​ಮೆಂಟ್ಸ್ ಅಂಡ್ ಹೋಲ್ಡಿಂಗ್ಸ್ ಲಿ (RIIHL) ಎಂಬ ಸಂಸ್ಥೆಯ ಹೂಡಿಕೆಗಳನ್ನು ಹೊಂದಿರಲಿದೆ. ಈ ಆರ್​ಐಐಎಚ್​ಎಲ್ ಸಂಸ್ಥೆ ರಿಲಾಯನ್ಸ್ ಇಂಡಸ್ಟ್ರೀಸ್​ನಲ್ಲಿ ಶೇ. 6.27ರಷ್ಟು ಪಾಲನ್ನು ಹೊಂದಿದೆ.

ಆರ್​ಐಎಲ್ ಷೇರುದಾರರಿಗೆ ಡಬಲ್ ಷೇರು ಸಿಗುತ್ತಾ?

ಆರ್​ಐಎಲ್​ನಿಂದ ಜೆಎಫ್​ಎಸ್​ಎಲ್ ಪ್ರತ್ಯೇಕಗೊಳ್ಳುವ ವಿಚಾರ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದೆ. ರಿಲಾಯನ್ಸ್ ನೀಡಿದ ಮಾಹಿತಿ ಪ್ರಕಾರ ಆರ್​ಐಎಲ್​ನ ಪ್ರತೀ ಷೇರಿಗೆ ಜೆಎಫ್​ಎಸ್​ಎಲ್​ನ ಒಂದು ಷೇರು ಸಿಗುತ್ತದೆ.

ಇದನ್ನೂ ಓದಿAlia Bhatt, Reliance: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅವರ ಕಂಪನಿ ಸೇಲ್; ಅಂಬಾನಿ ಪಾಲಾಗಲಿದೆಯಾ ಎಡ್ಡೇ ಮಮ್ಮಾ?

ಅಂದರೆ, ನೀವು 1,000 ಆರ್​ಐಎಲ್ ಷೇರುಗಳನ್ನು ಹೊಂದಿದ್ದರೆ ನಿಮಗೆ ಹೆಚ್ಚುವರಿಯಾಗಿ 1,000 ಜೆಫ್​ಎಸ್​ಎಲ್ ಷೇರುಗಳು ಸಿಗುತ್ತವೆ. ಜೆಎಫ್​ಎಸ್​ಎಲ್ ಷೇರುಗಳು ಉಚಿತವಾಗಿಯೇ ಸಿಗುತ್ತವೆ. ಆದರೆ, ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಜೆಎಫ್​ಎಸ್​ಎಲ್ ಷೇರಿನ ಮೌಲ್ಯ ಎಷ್ಟಿದೆಯೋ ಅಷ್ಟು ಆರ್​ಐಎಲ್ ಷೇರುಮೌಲ್ಯ ಕಡಿಮೆ ಆಗುತ್ತದೆ.

ಉದಾಹರಣೆಗೆ, ಈಗ ರಿಲಾಯನ್ಸ್ ಇಂಡಸ್ಟ್ರೀಸ್​ನ ಷೇರುಬೆಲೆ 2,795 ರೂ ಇದೆ. ಜಿಯೋ ಫೈನಾನ್ಷಿಯಲ್ ಸರ್ವಿಸ್ ಸಂಸ್ಥೆಯ ಷೇರುಬೆಲೆ 100 ಇದೆ ಎಂದಿಟ್ಟುಕೊಳ್ಳಿ. ಆರ್​ಐಎಲ್​ನ ಷೇರುದಾರರಿಗೆ ಜೆಎಫ್​ಎಸ್​ಎಲ್ ಷೇರುಗಳು ಉಚಿತವಾಗಿ ಸಿಗುತ್ತವೆ. ಆದರೆ, ಆರ್​ಐಎಲ್ ಷೇರುಬೆಲೆ 100 ರೂ ಕಡಿಮೆ ಆಗುತ್ತದೆ. ಅಂದರೆ 2,695 ರೂ ಆಗುತ್ತದೆ. ಆದರೆ, ಆರ್​ಐಎಲ್ ಷೇರುದಾರರ ಒಟ್ಟು ಷೇರುಸಂಪತ್ತು ಅಷ್ಟೇ ಇರುತ್ತದೆ.

ಇದನ್ನೂ ಓದಿValuable Companies: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಅತಿಹೆಚ್ಚು ಮೌಲ್ಯದ ಖಾಸಗಿ ಕಂಪನಿ; ಬುರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500 ಪಟ್ಟಿ ಬಿಡುಗಡೆ

ಇದು ಮೇಲ್ನೋಟಕ್ಕೆ ಏನೂ ಲಾಭವಾದಂತೆ ಅನಿಸದೇ ಇರಬಹುದು. ಆದರೆ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರು ಬಹಳ ಕಡಿಮೆಗೆ ಸಿಕ್ಕಂತಾಗುತ್ತದೆ. ಮುಂದೆ ಅದು ಗಣನೀಯವಾಗಿ ಬೆಳೆಯುವ ಸಾಧ್ಯತೆ ಇದೆ. ಹಾಗೆಯೇ ರಿಲಾಯನ್ಸ್ ಇಂಡಸ್ಟ್ರೀಸ್​ನ ಷೇರು ಬೆಲೆ ಕೂಡ ಮೇಲ್ಮಟ್ಟಕ್ಕೆ ಹೋಗುವ ಸಾಧ್ಯತೆ ಇದೆ. ಈ ಬೆಳವಣಿಗೆಯು ಆರ್​ಐಎಲ್​ನ ಷೇರುದಾರರಿಗೆ ಡಬಲ್ ಧಮಾಕವಾಗಿ ಪರಿಣಮಿಸಬಹುದು.

ಹಿಂದೆ ರಿಲಾಯನ್ಸ್ ಗ್ರೂಪ್ ನಾಲ್ಕು ಕಂಪನಿಗಳನ್ನು ಡೀಮರ್ಜ್ ಮಾಡಿತ್ತು. ಆಗೆಲ್ಲಾ ಸಂದರ್ಭಗಳಲ್ಲೂ ರಿಲಾಯನ್ಸ್ ಷೇರುದಾರರಿಗೆ ಒಳ್ಳೆಯ ಲಾಭವಾಗಿದ್ದಿದೆ. ಹೀಗಾಗಿ, ಈ ಬಾರಿಯೂ ರಿಲಾಯನ್ಸ್ ಷೇರುದಾರರಿಗೆ ಮ್ಯಾಜಿಕ್ ನಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ