AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ 28 ರಷ್ಟು ಜಿಎಸ್​ಟಿ ಏರಿಕೆಗೆ ಕೇಂದ್ರ ಸರ್ಕಾರದ ವಿರುದ್ಧ ಆನ್​ಲೈನ್​ ಗೇಮಿಂಗ್ ಸಂಸ್ಥೆಗಳ ಅಸಮಾಧಾನ

ಕೇಂದ್ರ ಸರ್ಕಾರ ಆನ್​ಲೈನ್​ ಗೇಮಿಂಗ್​ ಮೇಲೆ ಶೇ 28 ರಷ್ಟು ಜಿಎಸ್​ಟಿ ವಿಧಿಸಿದ ಬೆನ್ನಲ್ಲೇ 120ಕ್ಕೂ ಹೆಚ್ಚು ಆನ್​ಲೈನ್​ ಗೇಮಿಂಗ್ ಸಂಸ್ಥೆಗಳು ಪ್ರಧಾನಿಮಂತ್ರಿ ಕಚೇರಿ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿವೆ.

ಶೇ 28 ರಷ್ಟು ಜಿಎಸ್​ಟಿ ಏರಿಕೆಗೆ ಕೇಂದ್ರ ಸರ್ಕಾರದ ವಿರುದ್ಧ ಆನ್​ಲೈನ್​ ಗೇಮಿಂಗ್ ಸಂಸ್ಥೆಗಳ ಅಸಮಾಧಾನ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: Jul 18, 2023 | 8:34 AM

Share

ಬೆಂಗಳೂರು: ಕೇಂದ್ರ ಸರ್ಕಾರ ಆನ್​ಲೈನ್​ ಗೇಮಿಂಗ್​ (Online Gaming) ಮೇಲೆ ಶೇ 28 ರಷ್ಟು ಜಿಎಸ್​ಟಿ (GST) ವಿಧಿಸಿದ ಬೆನ್ನಲ್ಲೇ 120ಕ್ಕೂ ಹೆಚ್ಚು ಆನ್​ಲೈನ್​ ಗೇಮಿಂಗ್ ಸಂಸ್ಥೆಗಳು ಪ್ರಧಾನಿಮಂತ್ರಿ ಕಚೇರಿ (Prime Minister Office) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (Ministry of Electronics and Information Technology) ಪತ್ರ ಬರೆದಿವೆ. ಶೇ 28 ರಷ್ಟು ಜಿಎಸ್​ಟಿ ವಿಧಿಸುವುದರಿಂದ ಆನ್​ಲೈನ್​ ಗೇಮಿಂಗ್​ ಸಂಸ್ಥೆಗಳ ಮೇಲೆ ಭಾರಿ ಹೊರೆಯಾಗಲಿದೆ. ಹೀಗಾಗಿ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿವೆ.

ಆನ್​ಲೈನ್​ ಗೇಮಿಂಗ್​ ಮೇಲೆ ಶೇ 28 ರಷ್ಟು ಜಿಎಸ್​ಟಿ ವಿಧಿಸುವುದರಿಂದ ನಾವು ಸಂಕಷ್ಟಕ್ಕೆ ಸಿಲುಕುತ್ತೇವೆ. ಪ್ರಸ್ತುತ ನಾವು ಜಿಜಿಆರ್​/ ಪ್ಲಾಟ್​ಫಾರ್ಮ್​ ಶುಲ್ಕದ ಮೇಲೆ ಶೇ 18 ರಷ್ಟು ಜಿಎಸ್​​ಟಿ ಪಾವತಿಸುತ್ತಿದ್ದೇವೆ. ಇದೀಗ ಪ್ಲಾಟ್​ಫಾರ್ಮ್​ ಶುಲ್ಕದ ಬದಲಿಗೆ ಸಂಪೂರ್ಣ ಹೂಡಿಕೆ ಮೌಲ್ಯದ ಮೇಲೆ ಜಿಎಸ್​ಟಿ ವಿಧಿಸುವುದರಿಂದ 6 ತಿಂಗಳೊಳಗೆ ಗೇಮಿಂಗ್​ ಉದ್ಯಮ ಶೇ 99 ರಷ್ಟು ಬಿದ್ದುಹೋಗುತ್ತದೆ. ಇದರಿಂದ ಸಾಕಷ್ಟು ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಮತ್ತು ಉದ್ಯಮ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್, ನಜಾರಾ ಟೆಕ್ನಾಲಜೀಸ್ ಸೇರಿದಂತೆ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್, ಇ-ಗೇಮಿಂಗ್ ಫೆಡರೇಶನ್ ಮತ್ತು ಫೆಡರೇಶನ್ ಆಫ್ ಇಂಡಿಯಾ ಫ್ಯಾಂಟಸಿ ಸ್ಪೋರ್ಟ್ಸ್ ಸೇರಿದಂತೆ ಫೆಡರೇಶನ್‌ಗಳು ಪತ್ರಕ್ಕೆ ಸಹಮತ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್​ಗೆ ಶೇ. 28ಜಿಎಸ್​ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ

2020ರಲ್ಲಿ ಆನ್​ಲೈನ್​ ಗೇಮರ್​​ಗಳ ಸಂಖ್ಯೆ 360 ಮಿಲಿಯನ್​ ಇತ್ತು.​ ಇದೀಗ 420 ಮಿಲಿಯನ್​​ಗೆ ಏರಿಕೆಯಾಗಿದೆ. ಭಾರತದ ಆನ್​ಲೈನ್ ಗೇಮಿಂಗ್ ಉದ್ಯಮ ಸದ್ಯ 1.5 ಬಿಲಿಯನ್ ಡಾಲರ್​ನಷ್ಟು ಬೃಹತ್ತಾಗಿದೆ. ಅಂದರೆ 12,000 ಕೋಟಿ ರೂ ಮೊತ್ತದ ಉದ್ಯಮ ಇದು. 2014 ರಿಂದ 2020ರ ನಡುವೆ ಆನ್​ಲೈನ್​ ಗೇಮಿಂಗ್​ನಲ್ಲಿ 500 ಮೀಲಿಯನ್​​ ಡಾಲರ್​ನಷ್ಟು ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಇನ್ನು 2023ರ ಜನವರಿಯಿಂದ ಜೂನ್​ವರೆಗೆ 1.5 ಶತಕೋಟಿಗೂ ಹೆಚ್ಚು ಡಾಲರ್​ ಹೂಡಿಕೆಯಾಗದೆ.

ಭಾರತವು ಪ್ರಸ್ತುತ ಜಾಗತಿಕ ಗೇಮಿಂಗ್​ ಮಾರುಕಟ್ಟೆಯಲ್ಲಿ ಶೇ 1 ರಷ್ಟು ಪಾಲನ್ನು ಹೊಂದಿದೆ. ಯುಎಸ್​ ಮತ್ತು ಚೀನಾ ಶೇ 23 ಮತ್ತು 26 ರಷ್ಟು ಪಾಲು ಹೊಂದಿವೆ. ಕಳೆದ 5 ವರ್ಷಗಳಲ್ಲಿ 15 ಬಿಲಿಯನ್​​ ಮೊಬೈಲ್​ ಗೇಮ್​​ಗಳನ್ನು ಡೌನ್​ಲೋಡ್​ ಮಾಡಲಾಗಿದೆ. ಭಾರತವು ಜಾಗತಿಕವಾಗಿ ಅತಿ ಹೆಚ್ಚು ಗೇಮ್​​ಗಳನ್ನು ಡೌನ್​​ಲೋಡ್​ ಮಾಡಿದೆ. ಮುಂದಿನ ದಿನಗಳಲ್ಲಿ ಭಾರತವು ಗೇಮಿಂಗ್​ ಪವರ್​ಹೌಸ್​ ಆಗಿ ಹೊರಹೊಮ್ಮಬಹುದು.

ಭಾರತದ ಆನ್​ಲೈನ್ ಗೇಮಿಂಗ್ ಉದ್ಯಮ ಸದ್ಯ 1.5 ಬಿಲಿಯನ್ ಡಾಲರ್​ನಷ್ಟು ಬೃಹತ್ತಾಗಿದೆ. ಅಂದರೆ 12,000 ಕೋಟಿ ರೂ ಮೊತ್ತದ ಉದ್ಯಮ ಇದು. ಡ್ರೀಮ್11 ಸೇರಿದಂತೆ ಸಾವಿರಕ್ಕೂ ಹೆಚ್ಚು ಗೇಮಿಂಗ್ ಸ್ಟಾರ್ಟಪ್​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ