Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone Unit: ತುಮಕೂರಿಗೂ ಬರಲಿದೆ ಆ್ಯಪಲ್ ಫ್ಯಾಕ್ಟರಿ; 100 ಎಕರೆ ಜಾಗದಲ್ಲಿ ಫಾಕ್ಸ್​ಕಾನ್ ಘಟಕ?

Foxconn Subsidiary Plant In Tumkur: ದೇವನಹಳ್ಳಿಯಲ್ಲಿ ಐಫೋನ್ ಘಟಕ ಸ್ಥಾಪಿಸಲಿರುವ ಫಾಕ್ಸ್​ಕಾನ್ ಸಂಸ್ಥೆ ಇದೀಗ ತುಮಕೂರಿನಲ್ಲಿ ಪೂರಕ ಘಟಕ ಸ್ಥಾಪಿಸಲು ಯೋಜಿಸಿದೆ. ಇದಕ್ಕೆ ಸರ್ಕಾರ ಕೂಡ ಒಪ್ಪಿಕೊಂಡಿದೆ.

iPhone Unit: ತುಮಕೂರಿಗೂ ಬರಲಿದೆ ಆ್ಯಪಲ್ ಫ್ಯಾಕ್ಟರಿ; 100 ಎಕರೆ ಜಾಗದಲ್ಲಿ ಫಾಕ್ಸ್​ಕಾನ್ ಘಟಕ?
ಫಾಕ್ಸ್​ಕಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 17, 2023 | 5:45 PM

ಬೆಂಗಳೂರು, ಜುಲೈ 17: ಆ್ಯಪಲ್​ಗೆ ಐಫೋನ್ ನಿರ್ಮಿಸಿಕೊಡುವ ಫಾಕ್ಸ್​ಕಾನ್ ಸಂಸ್ಥೆ (Foxconn) ಕರ್ನಾಟಕದಲ್ಲಿ ದೇವನಹಳ್ಳಿ ಜೊತೆಗೆ ತುಮಕೂರಿನಲ್ಲೂ ಪ್ರತ್ಯೇಕ ಘಟಕ ಸ್ಥಾಪಿಸಲಿದೆ. ದೇವನಹಳ್ಳಿಯಲ್ಲಿ ಐಫೋನ್ ಅಸೆಂಬಲ್ ಮಾಡುವ ಪ್ರಮುಖ ಘಟಕ ಇದ್ದರೆ, ತುಮಕೂರಿನಲ್ಲಿ ಬೇರೆ ಬಿಡಿಭಾಗ ತಯಾರಿಯಾಗುವ ಪೂರಕ ಘಟಕ ಸ್ಥಾಪನೆಯಾಗುವ ಪ್ರಸ್ತಾಪ ಇದೆ. ಬೆಂಗಳೂರಿನಲ್ಲಿ ಸೋಮವಾರ (ಜುಲೈ 17) ಫಾಕ್ಸ್​ಕಾನ್​ನ ಅಧಿಕಾರಿಗಳ ತಂಡ ಮತ್ತು ಸಿಎಂ ಸಿದ್ದರಾಮಯ್ಯ ಮಧ್ಯೆ ಈ ವಿಚಾರದ ಚರ್ಚೆಗಳಾಗಿರುವುದು ತಿಳಿದುಬಂದಿದೆ.

ತುಮಕೂರಿನ ಜಪಾನ್ ಇಂಡಸ್ಟ್ರಿಯಲ್ ಟೌನ್​ಶಿಪ್​ನಲ್ಲಿ 100 ಎಕರೆಯಷ್ಟು ಜಾಗ ಬೇಕೆಂದು ಫಾಕ್ಸ್​ಕಾನ್ ಕಂಪನಿ ಕೇಳಿಕೊಂಡಿದೆ. ಇದಕ್ಕೆ ಸರ್ಕಾರ ಕೂಡ ಪೂರಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಫಾಕ್ಸ್​ಕಾನ್​ನ ತಂಡವೊಂದು ತುಮಕೂರಿಗೆ ಹೋಗಿ ಜಾಗ ನೋಡಿಕೊಂಡು ಬರುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಮತ್ತು ಫಾಕ್ಸ್​ಕಾನ್ ಅಧಿಕಾರಗಳ ಮಧ್ಯೆ ನಡೆದ ಭೇಟಿಯಲ್ಲಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿFoxconn: ದೊಡ್ಡಬಳ್ಳಾಪುರದಲ್ಲಿ ಐಫೋನ್ ಫ್ಯಾಕ್ಟರಿಗೆ 300 ಎಕರೆ ಜಾಗ: ಕಾನೂನು ತೊಡಕು ನಿವಾರಣೆ- ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ

ಫಾಕ್ಸ್​ಕಾನ್​ನ ಅಂಗಸಂಸ್ಥೆಯಾದ ಫಾಕ್ಸ್​ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ (ಎಫ್​ಐಐ) ತುಮಕೂರಿನಲ್ಲಿ ಹೊಸ ಘಟಕ ಆರಂಭಿಸುವ ಇರಾದೆಯಲ್ಲಿದೆ. ಸಿಎಂ ಭೇಟಿ ಮಾಡಿದ ನಿಯೋಗವು ಎಫ್​ಐಐನ ಸಿಇಒ ಬ್ರಾಂಡ್ ಚೆಂಗ್ ಮುಂದಾಳತ್ವದಲ್ಲಿ ಇತ್ತು. ತುಮಕೂರಿನ ಉದ್ದೇಶಿತ ಘಟಕದಲ್ಲಿ ಐಫೋನ್​ಗಳ ಸ್ಕ್ರೀನ್, ಹೊರಕವಚ ಮತ್ತಿತರ ಬಿಡಿಭಾಗಗಳ ತಯಾರಿಕೆ ಆಗಲಿದೆ.

ಮಾರ್ಚ್​ನಲ್ಲಿ ದೇವನಹಳ್ಳಿ ಘಟಕ ಸ್ಥಾಪನೆಗೆ ಒಡಂಬಡಿಕೆ

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ಮಾರ್ಚ್ ತಿಂಗಳಲ್ಲಿ ಫಾಕ್ಸ್​ಕಾನ್ ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರದ ಮಧ್ಯೆ ಒಡಂಬಡಿಕೆ ಆಗಿತ್ತು. ದೇವನಹಳ್ಳಿಯಲ್ಲಿ ಫಾಕ್ಸ್​ಕಾನ್​ಗೆ ಐಫೋನ್ ತಯಾರಿಕೆ ಘಟಕ ಸ್ಥಾಪಿಸಲು ಸರ್ಕಾರ 300 ಎಕರೆ ಜಾಗ ಕೊಡಲು ಒಪ್ಪಿತ್ತು. ಇತ್ತೀಚೆಗಷ್ಟೇ, 300 ಎಕರೆ ಜಾಗ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ ಎಂದು ಈಗಿನ ಸರ್ಕಾರದ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದರು.

ರಾಜ್ಯದಲ್ಲಿ ಫಾಕ್ಸ್​ಕಾನ್ ಸಂಸ್ಥೆ ಒಟ್ಟು 8,000ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದ್ದು 50,000 ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ