AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿಬಿಟ್ಟರೆ ಅದನ್ನು ರಿವರ್ಸ್ ಮಾಡಬಹುದಾ? ಇಲ್ಲಿದೆ ತಿಳಿದಿರಬೇಕಾದ ಮಾಹಿತಿ

UPI payment update: ಭಾರತದಲ್ಲಿ ಸಣ್ಣ ಮೊತ್ತದ ಹಣ ವಹಿವಾಟಿಗೆ ಅತಿಹೆಚ್ಚು ಬಳಕೆಯಾಗುವುದು ಯುಪಿಐ ಪೇಮೆಂಟ್ ಸಿಸ್ಟಂ. ಒಂದು ತಿಂಗಳಲ್ಲಿ ಸಾವಿರಾರು ಕೋಟಿಯಷ್ಟು ಸಂಖ್ಯೆಯಲ್ಲಿ ಟ್ರಾನ್ಸಾಕ್ಷನ್​ಗಳಾಗುತ್ತವೆ. ಈ ವೇಳೆ ತಪ್ಪಾದ ವ್ಯಕ್ತಿಗಳಿಗೆ ಹಣ ಕಳುಹಿಸುವ ಸಾಧ್ಯತೆಗಳೂ ಇರುತ್ತವೆ. ಹೀಗೆ ತಪ್ಪಾಗಿ ಕಳುಹಿದ ಯುಪಿಐ ಹಣವನ್ನು ಹಿಂಪಡೆಯಲು ಸಾಧ್ಯವಾ?

ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿಬಿಟ್ಟರೆ ಅದನ್ನು ರಿವರ್ಸ್ ಮಾಡಬಹುದಾ? ಇಲ್ಲಿದೆ ತಿಳಿದಿರಬೇಕಾದ ಮಾಹಿತಿ
ಯುಪಿಐ ಪೇಮೆಂಟ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 13, 2026 | 5:38 PM

Share

ಭಾರತದಲ್ಲಿ ಕಳೆದ ಆರೇಳು ವರ್ಷಗಳಿಂದ ಯುಪಿಐ ಪೇಮೆಂಟ್ ಸಿಸ್ಟಂ (UPI) ಬಹಳ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೋಟ್ಯಂತರ ಜನರು ನಿತ್ಯವೂ ಪೇಮೆಂಟ್​ಗೆ ಯುಪಿಐ ಬಳಸುತ್ತಾರೆ. ಅಂಗಡಿಯಲ್ಲಿ ಪೇಮೆಂಟ್ ಮಾಡಲು, ಸ್ನೇಹಿತರಿಗೆ ಹಣ ಕಳುಹಿಸಲು, ಪರಿಚಿತರಿಗೆ ಹಣ ಕಳುಹಿಸಲು, ಥರ್ಡ್ ಪಾರ್ಟಿಗೆ ಹಣ ಕಳುಹಿಸಲು ಹೀಗೆ ಯುಪಿಐ ಬಳಕೆ ತೀರಾ ಸಾಮಾನ್ಯವಾಗಿದೆ.

ಮಾರ್ಚ್ ತಿಂಗಳಲ್ಲಿ ದೇಶದಲ್ಲಿ 2,264 ಕೋಟಿ ಸಂಖ್ಯೆಗಳಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿದೆ. ಇಷ್ಟು ಅಪಾರ ಪ್ರಮಾಣದಲ್ಲಿ ಟ್ರಾನ್ಸಾಕ್ಷನ್​ಗಳು ಆಗುವಾಗ ಕೆಲವೊಮ್ಮೆ ತಪ್ಪುಗಳಾಗಬಹುದು. ಯುಪಿಐ ಪೇಮೆಂಟ್ ಮಾಡುವಾಗ ಸಾಮಾನ್ಯವಾಗಿ ಸ್ವೀಕೃತರ ಮೊಬೈಲ್ ನಂಬರ್ ಅನ್ನು ಹಾಕಿ ಪೇಮೆಂಟ್ ಮಾಡಲಾಗುತ್ತದೆ. ಈ ವೇಳೆ ಮೊಬೈಲ್ ನಂಬರ್ ತಪ್ಪಾಗಿ ಹಾಕಿಬಿಟ್ಟರೆ ತಪ್ಪಾದ ವ್ಯಕ್ತಿಗೆ ಪೇಮೆಂಟ್ ಹೋಗಬಹುದು. ಸ್ವಲ್ಪ ಎಚ್ಚರಿಕೆ ವಹಿಸಿದರೆ ಇಂಥ ತಪ್ಪು ಆಗದಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: 10,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ, ಐಎಂಪಿಎಸ್ ಪೇಮೆಂಟ್ 1 ಗಂಟೆ ವಿಳಂಬ? ಆರ್​ಬಿಐ ಹೊಸ ಕ್ರಮಕ್ಕೆ ಯೋಜನೆ

ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿದರೆ ಏನು ಮಾಡಬೇಕು?

ತಪ್ಪಾದ ವ್ಯಕ್ತಿಗಳಿಗೆ ಯುಪಿಐ ಪೇಮೆಂಟ್ ಮಾಡಿರುವ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಹಣವನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವೇ? ಅಥವಾ ಪೇಮೆಂಟ್ ರಿವರ್ಸ್ ಮಾಡಲು ಸಾಧ್ಯವೇ? ಇದಕ್ಕೆ ಸಿಂಪಲ್ಲಾದ ಉತ್ತರ ಎಂದರೆ ಆಗೊಲ್ಲ ಎನ್ನುವುದು.

ಯುಪಿಐ ಮೂಲಕ ಪೇಮೆಂಟ್ ಮಾಡಿದಾಗ ಅದನ್ನು ರಿವರ್ಸ್ ಮಾಡುವ ಅವಕಾಶ ಇರುವುದಿಲ್ಲ. ಇದು ರಿಯಲ್ ಟೈಮ್​ನಲ್ಲಿ ಮಾಡಲಾಗುವ ಪೇಮೆಂಟ್. ಸರ್ಕಾರ ಈಗ ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ 10,000 ರೂಗೂ ಅಧಿಕ ಮೌಲ್ಯದ ಯುಪಿಐ ಪೇಮೆಂಟ್​ನಲ್ಲಿ ಒಂದು ಗಂಟೆ ಕೂಲಿಂಗ್ ಆಫ್ ಅವಧಿಯ ನಿಯಮ ಮಾಡಲು ಆರ್​ಬಿಐ ಯೋಜಿಸುತ್ತಿದೆ. ಆಗ ಪೇಮೆಂಟ್ ರಿವರ್ಸ್ ಮಾಡಿಸಲು ಅವಕಾಶ ಸಿಗಬಹುದು.

ಇದನ್ನೂ ಓದಿ: ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

ಯುಪಿಐ ಪೇಮೆಂಟ್ ಮೂಲಕ ಹಣವು ಬೇರೆ ವ್ಯಕ್ತಿಯ ಬ್ಯಾಂಕ್ ಅಕೌಂಟ್​ಗೆ ಹೋಗಿಬಿಟ್ಟರೆ ಅದನ್ನು ಹಿಂಪಡೆಯಲು ಇರುವ ಏಕೈಕ ಮಾರ್ಗ ಎಂದರೆ ಅದು ಸ್ವೀಕೃತರು ಮಾತ್ರವೇ. ಹಣ ಸ್ವೀಕರಿಸಿದವರನ್ನು ನೀವು ಸಂಪರ್ಕಿಸಿ ಮನವಿ ಮಾಡಿಕೊಳ್ಳಬಹುದು ಅಷ್ಟೇ. ಅವರು ಹಾಕಿದರೆ ಆಯಿತು. ಇಲ್ಲದಿದ್ದರೆ ಕೆಲ ದೂರುಗಳನ್ನು ಸಲ್ಲಿಸುವುದಷ್ಟೇ ಉಳಿದಿರುವ ಮಾರ್ಗೋಪಾಯಗಳು.

ಸ್ವೀಕೃತರು ಸ್ಪಂದಿಸದಿದ್ದಾಗ ಥರ್ಡ್ ಪಾರ್ಟಿ ಆ್ಯಪ್​ನಲ್ಲಿ ‘ರಿಪೋರ್ಟ್ ಇಷ್ಯೂ’ (Report Issue) ಆಯ್ಕೆ ಬಳಸಬಹುದು. ಎನ್​ಪಿಸಿಐ ಸಿಸ್ಟಂ ಮೂಲಕ ದೂರು ಸಲ್ಲಿಸಬಹುದು. ಇಲ್ಲಿ ಪರಿಹಾರ ಸಿಗದಿದ್ದಾಗ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಅಲ್ಲಿಯೂ ಕೆಲಸವಾಗದಿದ್ದಾಗ ಆರ್​ಬಿಐ ಓಂಬುಡ್ಸ್​ಮ್ಯಾನ್ (RBI Ombudsman) ಅವರ ಬಳಿ ದೂರು ಕೊಂಡೊಯ್ಯಬಹುದು. ಅಲ್ಲಿಯೂ ನಿಮ್ಮ ಹಣ ವಾಪಸ್ ಬರಲು ಸಾಧ್ಯವಾಗುತ್ತದೆ ಎಂದನ್ನಲು ಕಷ್ಟ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Mon, 13 April 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !