ಎಂಡಿಆರ್ ಕ್ರಮ ಜಾರಿಗೆ ಮುನ್ನವೇ ಸೆಪ್ಟೆಂಬರ್​ನಲ್ಲಿ ಯುಪಿಐ ವಹಿವಾಟು ಇಳಿಮುಖ; ಆರ್​ಬಿಐ ದತ್ತಾಂಶ

ಅಕ್ಟೋಬರ್‌ನಿಂದ ವ್ಯಾಪಾರಿಗಳ ಮೇಲೆ ನೂತನ ಎಂಡಿಆರ್ ಶುಲ್ಕ ಅನ್ವಯವಾಗಲಿರುವ ಬೆನ್ನಲ್ಲೇ, ಸೆಪ್ಟೆಂಬರ್‌ನಲ್ಲಿ ಯುಪಿಐ (UPI) ವಹಿವಾಟುಗಳ ಒಟ್ಟು ಸಂಖ್ಯೆ ಮತ್ತು ಮೌಲ್ಯದಲ್ಲಿ ಶೇಕಡಾ 1.8 ರಷ್ಟು ಇಳಿಕೆ ಕಂಡುಬಂದಿದೆ. ಆಗಸ್ಟ್​ನಲ್ಲಿ 2,450 ಕೋಟಿ ಸಂಖ್ಯೆಯಲ್ಲಿ ಯುಪಿಐ ವಹಿವಾಟುಗಳು ನಡೆದಿದ್ದವು. ಸೆಪ್ಟೆಂಬರ್​ನಲ್ಲಿ ಈ ಸಂಖ್ಯೆ 2,407 ಕೋಟಿಗೆ ಇಳಿಕೆಯಾಗಿದೆ. ಆರ್‌ಬಿಐ ಅಂಕಿಅಂಶಗಳ ಸಂಪೂರ್ಣ ವಿವರ ಇಲ್ಲಿದೆ.

ಎಂಡಿಆರ್ ಕ್ರಮ ಜಾರಿಗೆ ಮುನ್ನವೇ ಸೆಪ್ಟೆಂಬರ್​ನಲ್ಲಿ ಯುಪಿಐ ವಹಿವಾಟು ಇಳಿಮುಖ; ಆರ್​ಬಿಐ ದತ್ತಾಂಶ
ಯುಪಿಐ
Image Credit source: Getty Images

Updated on: Oct 02, 2026 | 2:21 PM

ನವದೆಹಲಿ, ಅಕ್ಟೋಬರ್ 2: ಸೆಪ್ಟೆಂಬರ್ ತಿಂಗಳಲ್ಲಿ ಆಗಿರುವ ಯುಪಿಐ ವಹಿವಾಟಿನ ಪ್ರಮಾಣ ಮತ್ತು ಮೌಲ್ಯದಲ್ಲಿ ಇಳಿಕೆಯಾಗಿರುವುದು ಕುತೂಹಲ ಮೂಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಎನ್​ಪಿಸಿಐ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಒಟ್ಟು 2,407 ಕೋಟಿ (24.07 ಬಿಲಿಯನ್) ಯುಪಿಐ ವಹಿವಾಟುಗಳು ನಡೆದಿವೆ. ಆಗಸ್ಟ್‌ನಲ್ಲಿ ನಡೆದ 2,450 ಕೋಟಿ ವಹಿವಾಟುಗಳಿಗೆ ಹೋಲಿಸಿದರೆ ಇದು ಶೇ. 1.8 ರಷ್ಟು ಕಡಿಮೆಯಾಗಿದೆ.

ವರ್ತಕರಿಗೆ ಮಾಡಲಾಗುವ ಯುಪಿಐ ಪಾವತಿಗಳ ಮೇಲೆ ನೂತನ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ನಿಯಮ ಅಕ್ಟೋಬರ್ 15ರಂದು ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ, ಯುಪಿಐ ವಹಿವಾಟು ಇಳಿಕೆ ಆಗಿದೆ. ಇದು ಕಾಕತಾಳೀಯವೋ, ಅಥವಾ ಜನರು ಯುಪಿಐ ಬಳಸಲು ಹಿಂದೇಟು ಹಾಕುತ್ತಿರುವ ಮುನ್ಸೂಚನೆಯೋ ಗೊತ್ತಾಗಿಲ್ಲ.

ದತ್ತಾಂಶದ ಪ್ರಕಾರ, ಯುಪಿಐ ವಹಿವಾಟಿನ ಮೌಲ್ಯದಲ್ಲೂ ಕಡಿಮೆ ಆಗಿದೆ. ಒಟ್ಟು ಯುಪಿಐ ವಹಿವಾಟು ಮೌಲ್ಯವು ಶೇ. 1.5 ರಷ್ಟು ತಗ್ಗಿದ್ದು, ಆಗಸ್ಟ್‌ನ ₹29.82 ಲಕ್ಷ ಕೋಟಿಯಿಂದ ಸೆಪ್ಟೆಂಬರ್‌ನಲ್ಲಿ ₹29.37 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಇದನ್ನೂ ಓದಿ: ವಿಮಾ ಕಂಪನಿಗಳು ದಿವಾಳಿ ಎದ್ದರೆ ಗ್ರಾಹಕರ ಹಣಕ್ಕೆ ಏನು ಕಥೆ? ಸುರಕ್ಷತಾ ವ್ಯವಸ್ಥೆ ನಿರ್ಮಿಸುವಂತೆ ಪ್ರಧಾನಿಗೆ ಮನವಿ

ದಿನನಿತ್ಯದ ಸರಾಸರಿ ವಹಿವಾಟಿನಲ್ಲಿ ಹೆಚ್ಚಳ

ತಿಂಗಳ ಒಟ್ಟು ವಹಿವಾಟಿನಲ್ಲಿ ಇಳಿಕೆ ಕಂಡುಬಂದಿದ್ದರೂ, ದಿನನಿತ್ಯದ ಸರಾಸರಿ ಆಧಾರದ ಮೇಲೆ ಪ್ರಗತಿ ಕಂಡುಬಂದಿದೆ. ಆಗಸ್ಟ್‌ಗಿಂತ (31 ದಿನಗಳು) ಸೆಪ್ಟೆಂಬರ್‌ನಲ್ಲಿ (30 ದಿನಗಳು) ಒಂದು ದಿನ ಕಡಿಮೆಯಿರುವುದೇ ಒಟ್ಟು ತಿಂಗಳ ಮೊತ್ತ ತಗ್ಗಲು ಮುಖ್ಯ ಕಾರಣ ಎನ್ನಲಾಗಿದೆ. ಸೆಪ್ಟೆಂಬರ್‌ನಲ್ಲಿ ದಿನಕ್ಕೆ ಸರಾಸರಿ 80.2 ಕೋಟಿ (802 ಮಿಲಿಯನ್) ವಹಿವಾಟುಗಳು ನಡೆದಿದ್ದು, ಆಗಸ್ಟ್‌ನ ಸರಾಸರಿ 79.1 ಕೋಟಿಗಿಂತ ಹೆಚ್ಚಾಗಿದೆ.

ಎಂಡಿಆರ್ (MDR) ಶುಲ್ಕಗಳ ಗೊಂದಲ

ದೊಡ್ಡ ವ್ಯಾಪಾರಿಗಳಿಗೆ ಮಾಡಲಾಗುವ 2,000 ರೂ ಮೇಲ್ಪಟ್ಟ ಯುಪಿಐ ಪಾವತಿಗಳಿಗೆ ಶೇ. 0.4 ಎಂಡಿಆರ್ ಶುಲ್ಕ ಹಾಕಲಾಗುತ್ತದೆ. ಈ ಕ್ರಮದ ವಿರುದ್ಧ ಹಲವು ಕಡೆಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವರ್ತಕ ಸಮುದಾಯ ತಮ್ಮ ಮೇಲೆ ಇದು ಹೆಚ್ಚುವರಿ ಹೊರೆ ಎಂದು ಹೇಳುತ್ತಿದ್ದು, ಎಂಡಿಆರ್ ಶುಲ್ಕ ನೀತಿಯನ್ನು ಕೈಬಿಡಬೇಕೆಂದು ಒತ್ತಾಯಿಸುತ್ತಿದೆ. ಅಕ್ಟೋಬರ್ 15ರಿಂದ ಶುಲ್ಕ ಕ್ರಮ ಜಾರಿಗೆ ಬರುತ್ತದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ದಿ, ಕೆವಿಪಿ, ಎನ್​ಎಸ್​ಸಿ, ಪಿಪಿಎಫ್, ಟೈಮ್ ಡೆಪಾಸಿಟ್ ಸ್ಕೀಮ್​ಗಳಿಂದ ಸಿಗುವ ಲಾಭವೆಷ್ಟು? ಇಲ್ಲಿದೆ ಲೆಕ್ಕಾಚಾರ

ಇತರೆ ಪಾವತಿ ವ್ಯವಸ್ಥೆಗಳ ವಹಿವಾಟು ಎಷ್ಟಿದೆ?

  • ಐಎಮ್‌ಪಿಎಸ್ (IMPS): ₹7.05 ಲಕ್ಷ ಕೋಟಿ ಮೌಲ್ಯದ 35.40 ಕೋಟಿ ವಹಿವಾಟುಗಳು.
  • ಆರ್‌ಟಿಜಿಎಸ್ (RTGS): ₹235.71 ಲಕ್ಷ ಕೋಟಿ ಮೌಲ್ಯದ 3.25 ಕೋಟಿ ವಹಿವಾಟುಗಳು.
  • ಎನ್‌ಇಎಫ್‌ಟಿ (NEFT): ₹46.75 ಲಕ್ಷ ಕೋಟಿ ಮೌಲ್ಯದ 86.2 ಕೋಟಿ ವಹಿವಾಟುಗಳು.

ವಾರ್ಷಿಕ ಆಧಾರದಲ್ಲಿ ನೋಡುವುದಾದರೆ, ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಯುಪಿಐ ವಹಿವಾಟಿನ ಮೌಲ್ಯವು ಶೇ. 18 ರಷ್ಟು ಮತ್ತು ವಹಿವಾಟಿನ ಪ್ರಮಾಣವು ಶೇ. 23 ರಷ್ಟು ಏರಿಕೆಯಾಗಿದ್ದು, ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಬಲವಾಗಿ ಮುಂದುವರಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us