
ನವದೆಹಲಿ, ಡಿಸೆಂಬರ್ 2: ಭಾರತದಲ್ಲಿ ಯುಪಿಐ ಬಳಕೆ (UPI) ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಎನ್ಪಿಸಿಐನಿಂದ ಬಿಡುಗಡೆಯಾಗಿರುವ ದತ್ತಾಂಶದ ಪ್ರಕಾರ ನವೆಂಬರ್ ತಿಂಗಳಲ್ಲಿ 2,047 ಕೋಟಿ ಸಂಖ್ಯೆಯಷ್ಟು ಯುಪಿಐ ವಹಿವಾಟುಗಳು ನಡೆದಿವೆ. ಈ ತಿಂಗಳಲ್ಲಿ ಒಟ್ಟು 26.32 ಲಕ್ಷ ಕೋಟಿ ರೂ ಮೊತ್ತದಷ್ಟು ಹಣದ ವಹಿವಾಟು ಯುಪಿಐ ಮೂಲಕ ಆಗಿವೆ.
ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಯುಪಿಐ ವಹಿವಾಟು ಪ್ರಮಾಣದಲ್ಲಿ ಶೇ. 32ರಷ್ಟು ಹೆಚ್ಚಳ ಆಗಿದೆ. ವಹಿವಾಟು ಮೌಲ್ಯದಲ್ಲೂ ಶೇ. 22ರಷ್ಟು ಏರಿಕೆ ಆಗಿದೆ. 2024ರ ನವೆಂಬರ್ನಲ್ಲಿ 21.55 ಲಕ್ಷ ಕೋಟಿ ರೂ ಮೊತ್ತದ 1,548 ಕೋಟಿಯಷ್ಟು ವಹಿವಾಟುಗಳು ನಡೆದಿದ್ದವು. 2023ರ ನವೆಂಬರ್ಗೆ ಹೋಲಿಸಿದರೆ, ಈಗ ಯುಪಿಐ ವಹಿವಾಟು ಪ್ರಮಾಣ ಶೇ. 70ರಷ್ಟು ಏರಿರುವುದು ಗಮನಾರ್ಹ.
ಇದನ್ನೂ ಓದಿ: Unemployment Rate: ನಿರುದ್ಯೋಗ ದರ 6 ವರ್ಷದಲ್ಲಿ ಶೇ. 6ರಿಂದ ಶೇ. 3.2ಕ್ಕೆ ಇಳಿಕೆ
ಕಳೆದ ಐದು ವರ್ಷದಲ್ಲಿ ಯುಪಿಐ ಬಳಕೆ ಗಣನೀಯವಾಗಿ ಏರುತ್ತಾ ಬಂದಿದೆ. 2021ರ ನವೆಂಬರ್ನಲ್ಲಿ 7.68 ಲಕ್ಷ ಕೋಟಿ ರೂ ಮೌಲ್ಯದ 418 ಕೋಟಿ ಟ್ರಾನ್ಸಾಕ್ಷನ್ಗಳು ಯುಪಿಐ ಪ್ಲಾಟ್ಫಾರ್ಮ್ನಲ್ಲಿ ಆಗಿದ್ದವು. 2022ರಲ್ಲಿ ಇದು ಎರಡು ಪಟ್ಟು ಹೆಚ್ಚಾಗಿದೆ. ಆ ನಂತರ ಯುಪಿಐ ಬಳಕೆ ಬಹಳ ಸ್ಥಿರವಾಗಿ ಏರುತ್ತಾ ಬಂದಿದೆ. ಸಣ್ಣ ಮೌಲ್ಯದ ವಹಿವಾಟುಗಳಲ್ಲಿ ಹೆಚ್ಚಿನವು ಯುಪಿಐನಿಂದಲೇ ಆಗುತ್ತಿರುವುದು ಗಮನಾರ್ಹ.
ಸೆಪ್ಟೆಂಬರ್ ತಿಂಗಳಲ್ಲಿ 1,963 ಕೋಟಿ, ಅಕ್ಟೋಬರ್ ತಿಂಗಳಲ್ಲಿ 2,070 ಕೋಟಿ ಮತ್ತು ನವೆಂಬರ್ನಲ್ಲಿ 2,040 ಕೋಟಿ ಯುಪಿಐ ವಹಿವಾಟುಗಳು ನಡೆದಿವೆ. ಅಕ್ಟೋಬರ್ಗೆ ಹೋಲಿಸಿದರೆ ನವೆಂಬರ್ನಲ್ಲಿ ವಹಿವಾಟು ಪ್ರಮಾಣ ಕಡಿಮೆ ಆಗಿದೆ. ವಹಿವಾಟು ಮೌಲ್ಯದಲ್ಲೂ ಇದೇ ಟ್ರೆಂಡ್ ಇದೆ. ಸೆಪ್ಟೆಂಬರ್ನಲ್ಲಿ 24.90 ಲಕ್ಷ ಕೋಟಿ ರೂ, ಅಕ್ಟೋಬರ್ನಲ್ಲಿ 27.28 ಲಕ್ಷ ಕೋಟಿ ರೂ ಮತ್ತು ಈಗ ನವೆಂಬರ್ನಲ್ಲಿ 26.32 ಲಕ್ಷ ಕೋಟಿ ರೂ ಮೌಲ್ಯದ ವಹಿವಾಟುಗಳು ನಡೆದಿವೆ.
ಇದನ್ನೂ ಓದಿ: GST collections: ಜಿಎಸ್ಟಿ ದರ ಕಡಿತದ ಪರಿಣಾಮ, ನವೆಂಬರ್ನಲ್ಲಿ ತೆರಿಗೆ ಸಂಗ್ರಹ ಕುಂಠಿತ
ನಿತ್ಯದ ಸರಾಸರಿ ಯುಪಿಐ ವಹಿವಾಟು ಅಕ್ಟೋಬರ್ ಮತ್ತು ನವೆಂಬರ್ನಲ್ಲಿ 66ರಿಂದ 68 ಕೋಟಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ