ಯುಪಿಐ ಅಪ್​ಡೇಟ್; ಪೇಮೆಂಟ್​ಗೆ ಪಿನ್ ನೀಡಬೇಕಿಲ್ಲ; ಬಳಕೆದಾರರಿಗೆ ಹೆಚ್ಚಿನ ಆಯ್ಕೆ

No PIN number, biometric authentication enough for UPI payment: ಯುಪಿಐ ಮೂಲಕ ಪೇಮೆಂಟ್ ಮಾಡುವಾಗ ದೃಢೀಕರಣಕ್ಕೆ ಪಿನ್ ನಂಬರ್ ಹಾಕಬೇಕು. ಪ್ರತೀ ಪಾವತಿಯಲ್ಲೂ ಪಿನ್ ನಂಬರ್ ಹಾಕುವುದು ಕಿರಿಕಿರಿ ಎನಿಸುತ್ತಿರುವವರಿಗೆ ಅ. 8ರಿಂದ ಹೊಸ ಆಯ್ಕೆ ಸಿಗಲಿದೆ. ಫೇಸಿಯಲ್ ರೆಕಗ್ನಿಶನ್ ಮತ್ತು ಫಿಂಗರ್ ಪ್ರಿಂಟ್ ನೀಡಿ ಪೇಮೆಂಟ್ ಮಾಡುವ ಅವಕಾಶ ಸಿಗಲಿದೆ.

ಯುಪಿಐ ಅಪ್​ಡೇಟ್; ಪೇಮೆಂಟ್​ಗೆ ಪಿನ್ ನೀಡಬೇಕಿಲ್ಲ; ಬಳಕೆದಾರರಿಗೆ ಹೆಚ್ಚಿನ ಆಯ್ಕೆ
ಯುಪಿಐ

Updated on: Oct 07, 2025 | 6:35 PM

ನವದೆಹಲಿ, ಅಕ್ಟೋಬರ್ 7: ಯುಪಿಐ ಪೇಮೆಂಟ್ ಸರ್ವಿಸ್​ನಲ್ಲಿ (UPI payment) ನಾಳೆಯಿಂದ ಮಹತ್ವದ ಬದಲಾವಣೆ ಆಗುತ್ತಿದೆ. ಪಾವತಿಯಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸುವ ಫೀಚರ್ ತರಲಾಗುತ್ತಿದೆ. ಯುಪಿಐ ಮೂಲಕ ಹಣ ಪಾವತಿ ಮಾಡುವಾಗ ಪಿನ್ ನಂಬರ್ ನಮೂದಿಸುವುದು ಕಿರಿಕಿರಿ ಎನಿಸುತ್ತಿದ್ದವರಿಗೆ ನಾಳೆಯಿಂದ ನಿರಾಳರಾಗಬಹುದು. ಟ್ರಾನ್ಸಾಕ್ಷನ್​ನ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಆರ್​ಬಿಐ ಹೊಸ ಮಾರ್ಗಸೂಚಿ ಹೊರಡಿಸಿದೆ. ಅಕ್ಟೋಬರ್ 8ರಿಂದ ಪಿನ್ ನಂಬರ್ ಜೊತೆಗೆ ಬಯೋಮೆಟ್ರಿಕ್ ವೆರಿಫಿಕೇಶನ್ ಆಯ್ಕೆಯೂ ಇರಲಿದೆ.

ಸದ್ಯ ಯುಪಿಐ ಬಳಕೆದಾರರು ಯುಪಿಐ ಲೈಟ್ ಮೂಲಕ ಹಣ ಪಾವತಿಸಿದರೆ ಯಾವುದೇ ಪಿನ್ ನಮೂದಿಸಬೇಕಿಲ್ಲ. ಉಳಿದ ಪೇಮೆಂಟ್​ಗೆ ಪಿನ್ ನಂಬರ್ ಮೂಲಕ ದೃಢೀಕರಣ ಮಾಡುವ ಅವಶ್ಯಕತೆ ಇದೆ. ಇನ್ಮುಂದೆ, ಬಯೋಮೆಟ್ರಿಕ್ ವಿಧಾನಗಳಾದ ಮುಖ ಚಹರೆ ಮತ್ತು ಫಿಂಗರ್ ಪ್ರಿಂಟ್ ಮೂಲಕ ಟ್ರಾನ್ಸಾಕ್ಷನ್ ಅನ್ನು ದೃಢೀಕರಿಸಬಹುದು ಎಂದು ಫೈನಾನ್ಷಿಯಲ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿದೆ.

ಇದನ್ನೂ ಓದಿ: ಲಾಭವಾಗುವಂತೆ ಕ್ರೆಡಿಟ್ ಕಾರ್ಡ್ ಬಳಸುವ ತಂತ್ರ ತಿಳಿದಿರಿ; ಇಲ್ಲಿದೆ ಟಿಪ್ಸ್

ಯುಪಿಐನಲ್ಲಿ ಬಯೋಮೆಟ್ರಿಕ್ ಅಥೆಂಟಿಕೇಶನ್​ಗೆ ಆಧಾರ್ ಸಿಸ್ಟಂ ಆಧಾರವಾಗಿರುತ್ತದೆ. ಬಳಕೆದಾರರು ಯುಪಿಐಗೆ ತಮ್ಮ ಆಧಾರ್ ಅನ್ನು ಲಿಂಕ್ ಮಾಡಿರಬೇಕಾಗಬಹುದು. ಬಳಕೆದಾರರ ಮುಖ ಚಹರೆ ಹಾಗೂ ಫಿಂಗರ್ ಪ್ರಿಂಟ್​ಗಳು ಆಧಾರ್ ಫ್ರೇಮ್​ವರ್ಕ್​ನಲ್ಲಿ ಸಂಗ್ರಹವಾಗಿರುತ್ತವೆ. ಪೇಮೆಂಟ್ ಮಾಡುವಾಗ ದೃಢೀಕರಣ ಮಾಡಲು ಈ ಬಯೋಮೆಟ್ರಿಕ್ ದತ್ತಾಂಶವನ್ನು ಬಳಸಲಾಗುತ್ತದೆ.

ಜಾಗತಿಕವಾಗಿ ಗಮನ ಸೆಳೆಯುತ್ತಿರುವ ಯುಪಿಐ

ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಅಭಿವೃದ್ಧಿಪಡಿಸಿರುವ ಯುಪಿಐ ಪೇಮೆಂಟ್ ಸಿಸ್ಟಂ ಬಗ್ಗೆ ಜಾಗತಿಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತವೇ ಸ್ವಂತವಾಗಿ ನಿರ್ಮಿಸಿದ ವಿಶೇಷ ಟೆಕ್ನಾಲಜಿಯಲ್ಲಿ ಇದೂ ಒಂದು. ಬಹುತೇಕ ಎಲ್ಲಾ ದೇಶಗಳಲ್ಲೂ ಆನ್ಲೈನ್ ಪೇಮೆಂಟ್ ಸಿಸ್ಟಂಗಳಿವೆಯಾದರೂ, ಎಲ್ಲಾ ಪೆಮೆಂಟ್ ಪ್ಲಾಟ್​ಫಾರ್ಮ್​ಗಳನ್ನು ಯುಪಿಐ ಮೂಲಕ ಬೆಸೆಯಲಾಗಿದೆ. ಇಂಥದ್ದು ವಿಶ್ವದಲ್ಲಿ ಬೇರೆಲ್ಲೂ ಇಲ್ಲ.

ಇದನ್ನೂ ಓದಿ: ಭಾರತದ ಮುಂದಿನ ಸ್ಟಾರ್ಟಪ್ ಕೇಂದ್ರ ಕರ್ನಾಟಕದ ಈ ಬಂದರುನಗರಿ: ಸುನೀಲ್ ಶೆಟ್ಟಿ, ಮೋಹನದಾಸ್ ಪೈ ಅನಿಸಿಕೆ

ಮುಂಬೈನ ಗ್ಲೋಬಲ್ ಫಿನ್​ಟೆಕ್ ಉತ್ಸವ ನಡೆಯುತ್ತಿದ್ದು ಅಲ್ಲಿ ಯುಪಿಐನ ಬಯೋಮೆಟ್ರಿಕ್ ಫೀಚರ್ ಅನ್ನು ಹೊರತಂದಿರುವ ಸಂಗತಿಯನ್ನು ಪ್ರಚುರಪಡಿಸುವ ನಿರೀಕ್ಷೆ ಇದೆ. ಇದರಿಂದ ಹೆಚ್ಚಿನ ದೇಶಗಳು ಯುಪಿಐ ಅಳವಡಿಸಲು ಉತ್ತೇಜನ ಸಿಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ