ಆಗಸ್ಟ್​​ನಲ್ಲಿ ದೈನಂದಿನ ಸರಾಸರಿ ಯುಪಿಐ ವಹಿವಾಟು 65 ಕೋಟಿ; ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಟ್ರಾನ್ಸಾಕ್ಷನ್ಸ್

UPI payment system sees 20 billion transactions in August: 2025ರ ಆಗಸ್ಟ್ ತಿಂಗಳಲ್ಲಿ ನಡೆದಿರುವ ಯುಪಿಐ ವಹಿವಾಟುಗಳ ಸಂಖ್ಯೆ 2,000 ಕೋಟಿ ಎನ್ನಲಾಗಿದೆ. ಜುಲೈನಲ್ಲಿ 1,947 ಕೋಟಿ ಸಂಖ್ಯೆಯಷ್ಟು ಯುಪಿಐ ಟ್ರಾನ್ಸಾಕ್ಷನ್​ಗಳಾಗಿದ್ದವು. ಆಗಸ್ಟ್ ತಿಂಗಳಲ್ಲಿ 24.85 ಲಕ್ಷ ಕೋಟಿ ರೂ ಮೌಲ್ಯದಷ್ಟು ಯುಪಿಐ ಟ್ರಾನ್ಸಾಕ್ಷನ್​ಗಳಾಗಿರುವುದು ತಿಳಿದುಬಂದಿದೆ.

ಆಗಸ್ಟ್​​ನಲ್ಲಿ ದೈನಂದಿನ ಸರಾಸರಿ ಯುಪಿಐ ವಹಿವಾಟು 65 ಕೋಟಿ; ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಟ್ರಾನ್ಸಾಕ್ಷನ್ಸ್
ಯುಪಿಐ

Updated on: Sep 01, 2025 | 7:12 PM

ನವದೆಹಲಿ, ಸೆಪ್ಟೆಂಬರ್ 1: ಭಾರತದಲ್ಲಿ ಯುಪಿಐ ಮೂಲಕ ಆಗುತ್ತಿರುವ ಆನ್​ಲೈನ್ ಹಣ ಪಾವತಿ ಹೊಸ ಮೈಲಿಗಲ್ಲು ಮುಟ್ಟಿದೆ. ಆಗಸ್ಟ್​ನಲ್ಲಿ ಯುಪಿಐ ಮೂಲಕ 20 ಬಿಲಿಯನ್ ಟ್ರಾನ್ಸಾಕ್ಷನ್ ನಡೆದಿವೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಹೇಳಿದೆ. 20 ಬಿಲಿಯನ್ ಎಂದರೆ ಬರೋಬ್ಬರಿ 2,000 ಕೋಟಿ ಸಂಖ್ಯೆಯಷ್ಟು ಯುಪಿಐ ಟ್ರಾನ್ಸಾಕ್ಷನ್ಸ್ ಒಂದೇ ತಿಂಗಳಲ್ಲಿ ನಡೆದಿವೆ. ಹಿಂದಿನ ತಿಂಗಳಲ್ಲಿ, ಅಂದರೆ 2025ರ ಜುಲೈನಲ್ಲಿ 19.47 ಬಿಲಿಯನ್ ಟ್ರಾನ್ಸಾಕ್ಷನ್​ಗಳು ಆಗಿದ್ದವು.

ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಯುಪಿಐ ಟ್ರಾನ್ಸಾಕ್ಷನ್ಸ್ ಸಂಖ್ಯೆಯಲ್ಲಿ ಶೇ. 34ರಷ್ಟು ಏರಿಕೆ ಆಗಿರುವುದು ಗಮನಾರ್ಹ. ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೊರೇಶನ್ ಸಂಸ್ಥೆ ತನ್ನ ಎಕ್ಸ್ ಅಕೌಂಟ್​ನಲ್ಲಿ ಈ ಕೆಲ ಮಾಹಿತಿಯನ್ನು ಹಂಚಿಕೊಂಡಿದೆ.

ಇದನ್ನೂ ಓದಿ: ಸತತ 8ನೇ ತಿಂಗಳು ಜಿಎಸ್​ಟಿ ಸಂಗ್ರಹ 1.80 ಲಕ್ಷ ಕೋಟಿ ರೂಗಿಂತಲೂ ಅಧಿಕ

25 ಲಕ್ಷ ಕೋಟಿ ರೂ ಮೊತ್ತದಷ್ಟು ಯುಪಿಐ ಪಾವತಿ

ಇನ್ನು, 20 ಬಿಲಿಯನ್ ಸಂಖ್ಯೆಯಲ್ಲಿ ಯುಪಿಐ ವಹಿವಾಟುಗಳು ನಡೆದಿವೆ. ಅವುಗಳಿಂದ ಒಟ್ಟು ವಹಿವಾಟು ಆಗಿರುವ ಮೊತ್ತ ಆಗಸ್ಟ್​ನಲ್ಲಿ 24.85 ಲಕ್ಷ ಕೋಟಿ ರೂ ಎನ್ನಲಾಗಿದೆ. ಜುಲೈ ತಿಂಗಳಲ್ಲಿ ಇದು 25.08 ಲಕ್ಷ ಕೋಟಿ ರೂ ಮೊತ್ತವಿತ್ತು. ಅದಕ್ಕೆ ಹೋಲಿಸಿದರೆ ಕಡಿಮೆ ಹಣದ ವಹಿವಾಟು ಆಗಿದೆ. ಆದರೆ, ಹಿಂದಿನ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಟ್ರಾನ್ಸಾಕ್ಷನ್ ಮೌಲ್ಯದಲ್ಲಿ ಶೇ. 21ರಷ್ಟು ಹೆಚ್ಚಳ ಆಗಿದೆ.

ಎನ್​ಪಿಸಿಐ ಹಾಕಿದ ಪೋಸ್ಟ್

ಆಗಸ್ಟ್​ನಲ್ಲಿ ನಡೆದಿರುವ ಒಟ್ಟೂ ವಹಿವಾಟುಗಳನ್ನು ಪರಿಗಣಿಸಿ ದಿನಕ್ಕೆ ಸರಾಸರಿ ಪಡೆದಾಗ 645 ಮಿಲಿಯನ್ ಆಗುತ್ತದೆ. ದಿನದ ಸರಾಸರಿ ಟ್ರಾನ್ಸಾಕ್ಷನ್ ಮೌಲ್ಯ 80,177 ಕೋಟಿ ರೂ ಆಗುತ್ತದೆ.

ದಿನಕ್ಕೆ ಸರಾಸರಿಯಾಗಿ 100 ಕೋಟಿ ಯುಪಿಐ ಟ್ರಾನ್ಸಾಕ್ಷನ್ ಆಗಲಿ ಎಂದು ಸರ್ಕಾರ ಗುರಿ ಇಟ್ಟಿದೆ. ಆಗಸ್ಟ್​ನಲ್ಲಿ ಸರಾಸರಿಯಾಗಿ ನಿತ್ಯವೂ 64.5 ಕೋಟಿ ಟ್ರಾನ್ಸಾಕ್ಷನ್ ಆಗಿವೆ. ಇದರಲ್ಲಿ ಇನ್ನೂ ಶೇ. 50ರಷ್ಟು ಹೆಚ್ಚಳ ಆಗಬೇಕಾಗುತ್ತದೆ. ಮುಂದಿನ ವರ್ಷದೊಳಗೆ ಈ ಗುರಿ ಮುಟ್ಟುವ ಸಾಧ್ಯತೆ ಇದೆ.

ಇದನ್ನೂ ಓದಿ: ಹೊಸ ಗೇಮಿಂಗ್ ಕಾಯ್ದೆ: ಉದ್ಯಮ ಪ್ರತಿನಿಧಿಗಳೊಂದಿಗೆ ಸರ್ಕಾರದ ಸಭೆ; ಇಸ್ಪೋರ್ಟ್, ಸೋಷಿಯಲ್ ಗೇಮ್​ಗಳ ಉತ್ತೇಜನಕ್ಕೆ ಮುಂದು

ಯುಪಿಐ ಭಾರತದ ಹೆಮ್ಮೆಯ ಉತ್ಪನ್ನ

ಎನ್​ಪಿಸಿಐ ರೂಪಿಸಿರುವ ಯೂನಿಫೈಡ್ ಪೇಮೆಂಟ್ ಇಂಟರ್​ಫೇಸ್ ಅಥವಾ ಯುಪಿಐ ಸಿಸ್ಟಂ ಭಾರತದ್ದೇ ಸ್ವಂತ ನಿರ್ಮಾಣದ ಪಾವತಿ ವ್ಯವಸ್ಥೆ. ಜಗತ್ತಿನಲ್ಲಿ ಬೇರೆಲ್ಲೂ ಕೂಡ ಯುಪಿಐ ರೀತಿಯ ಪೇಮೆಂಟ್ ಸಿಸ್ಟಂ ಇಲ್ಲ. ಬೇರೆಡೆಯೆಲ್ಲಾ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗಳು ಇವೆಯಾದರೂ ಅವುಗಳ ಕಾರ್ಯವ್ಯಾಪ್ತಿ ಮತ್ತು ಫೀಚರ್ಗಳು ಸೀಮಿತವಾಗಿವೆ. ಯುಪಿಐನಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳನ್ನು ಜೋಡಿಸಿಕೊಳ್ಳುವ ಅವಕಾಶ ಇದೆ. ಹೀಗಾಗಿ, ಭಾರತದಲ್ಲಿ ಇದರ ಬಳಕೆ ಬಹಳ ವ್ಯಾಪಕವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ