US GDP: ಅಮೆರಿಕ ಆರ್ಥಿಕತೆ ಏಪ್ರಿಲ್​ನಿಂದ ಜೂನ್​ ತ್ರೈಮಾಸಿಕದಲ್ಲಿ ಶೇ 6.5ರಷ್ಟು ವಿಸ್ತರಣೆ

| Updated By: Srinivas Mata

Updated on: Jul 29, 2021 | 10:13 PM

ಏಪ್ರಿಲ್​ನಿಂದ ಜೂನ್​ನ ಎರಡನೇ ತ್ರೈಮಾಸಿಕದಲ್ಲಿ ವಾರ್ಷಿಕ ಲೆಕ್ಕಾಚಾರದ ಪ್ರಕಾರ ಅಮೆರಿಕದ ಆರ್ಥಿಕತೆ ಶೇ 6.5ರಷ್ಟು ವಿಸ್ತರಣೆ ಆಗಿದೆ ಎಂಬ ಅಂಶ ಸರ್ಕಾರದ ದತ್ತಾಂಶಗಳಿಂದ ಗುರುವಾರ ತಿಳಿದುಬಂದಿದೆ. ಅಂದಹಾಗೆ ಆರ್ಥಿಕ ತಜ್ಞರು ಅಂದುಕೊಂಡಿದ್ದಕ್ಕಿಂತ ಕೊವಿಡ್-19 ಬಿಕ್ಕಟ್ಟಿನಿಂದ ಚೇತರಿಕೆ ಬಹಳ ನಿಧಾನವಾಗಿದೆ. ಈ ಗಳಿಕೆ ಲೆಕ್ಕಾಚಾರವನ್ನು ವಾಣಿಜ್ಯ ಇಲಾಖೆಯು ವರದಿ ಮಾಡಿದ್ದು, ವಿಶ್ವ್ದದ ಅತಿ ದೊಡ್ಡ ಆರ್ಥಿಕತೆಯಾದ ಅಮೆರಿಕವು ಕೊರೊನಾ ಬಿಕ್ಕಟ್ಟಿನ ಹಿಂದಿನ ಗಾತ್ರವನ್ನು ದಾಟಿದೆ. 2019ರ ನಾಲ್ಕನೇ ತ್ರೈಮಾಸಿಕದ ಮಟ್ಟವನ್ನು ಮೀರಿ 19.4 ಲಕ್ಷ ಕೋಟಿ ಡಾಲರ್ ಆಗಿದೆ. […]

US GDP: ಅಮೆರಿಕ ಆರ್ಥಿಕತೆ ಏಪ್ರಿಲ್​ನಿಂದ ಜೂನ್​ ತ್ರೈಮಾಸಿಕದಲ್ಲಿ ಶೇ 6.5ರಷ್ಟು ವಿಸ್ತರಣೆ
ಜೋ ಬೈಡನ್ (ಸಂಗ್ರಹ ಚಿತ್ರ)
Follow us on

ಏಪ್ರಿಲ್​ನಿಂದ ಜೂನ್​ನ ಎರಡನೇ ತ್ರೈಮಾಸಿಕದಲ್ಲಿ ವಾರ್ಷಿಕ ಲೆಕ್ಕಾಚಾರದ ಪ್ರಕಾರ ಅಮೆರಿಕದ ಆರ್ಥಿಕತೆ ಶೇ 6.5ರಷ್ಟು ವಿಸ್ತರಣೆ ಆಗಿದೆ ಎಂಬ ಅಂಶ ಸರ್ಕಾರದ ದತ್ತಾಂಶಗಳಿಂದ ಗುರುವಾರ ತಿಳಿದುಬಂದಿದೆ. ಅಂದಹಾಗೆ ಆರ್ಥಿಕ ತಜ್ಞರು ಅಂದುಕೊಂಡಿದ್ದಕ್ಕಿಂತ ಕೊವಿಡ್-19 ಬಿಕ್ಕಟ್ಟಿನಿಂದ ಚೇತರಿಕೆ ಬಹಳ ನಿಧಾನವಾಗಿದೆ. ಈ ಗಳಿಕೆ ಲೆಕ್ಕಾಚಾರವನ್ನು ವಾಣಿಜ್ಯ ಇಲಾಖೆಯು ವರದಿ ಮಾಡಿದ್ದು, ವಿಶ್ವ್ದದ ಅತಿ ದೊಡ್ಡ ಆರ್ಥಿಕತೆಯಾದ ಅಮೆರಿಕವು ಕೊರೊನಾ ಬಿಕ್ಕಟ್ಟಿನ ಹಿಂದಿನ ಗಾತ್ರವನ್ನು ದಾಟಿದೆ. 2019ರ ನಾಲ್ಕನೇ ತ್ರೈಮಾಸಿಕದ ಮಟ್ಟವನ್ನು ಮೀರಿ 19.4 ಲಕ್ಷ ಕೋಟಿ ಡಾಲರ್ ಆಗಿದೆ. ಕೊರೊನಾದಿಂದ ಕಳೆದ ವರ್ಷ ಅಮೆರಿಕದಲ್ಲಿ ತೀವ್ರ ಕುಸಿತ ಕಂಡಿತ್ತು. ಆರ್ಥಿಕತೆ ಅಂತಿಮವಾಗಿ ಶೇ 3.5ರಷ್ಟು ಕುಗ್ಗಿತ್ತು. ಆಧುನಿಕಚಾಗಿ ದಾಖಲೆಯನ್ನು ಇಡುವುದಕ್ಕೆ ಆರಂಭಿಸಿದ 1946ರ ನಂತರ ತುಂಬ ಕೆಟ್ಟ ಕುಸಿತ ಇದಾಗಿದೆ.

ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಖರ್ಚನ್ನು ಮಾಡುವುದಕ್ಕೆ ಅಲ್ಲಿನ ಕಾಂಗ್ರೆಸ್ (ಸಂಸತ್) ಒಪ್ಪಿಗೆ ಸೂಚಿಸಿದ್ದು, ಜತೆಗೆ ಲಸಿಕೆ ಹಾಕುತ್ತಿರುವುದರಿಂದ ಉದ್ಯಮ ಚಟುವಟಿಕೆಗಳು ಕೊವಿಡ್-19ನಿಂದ ಚೇತರಿಸಿಕೊಳ್ಳುವುದಕ್ಕೆ ಸಹಾಯ ಆಗಿದೆ. ಕೊವಿಡ್-19 ಕುಸಿತದಿಂದ ದೇಶವು ಚೇತರಿಸಿಕೊಳ್ಳುವ ನಿರೀಕ್ಷೆಯಿದ್ದು, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್​)ಯಿಂದ ಅಂದಾಜು ಮಾಡಿರುವಣತೆ ಈ ವರ್ಷ ಶೇ 7ರಷ್ಟು ಬೆಳವಣಿಗೆ ಆಗಬಹುದು.

ಏಪ್ರಿಲ್​ನಿಂದ ಜೂನ್​ ಅವಧಿಯ ಬೆಳವಣಿಗೆ ದರವು ಮೊದಲ ತ್ರೈಮಾಸಿಕದ ಶೇ 6.3ರ ಬೆಳವಣಿಗೆ ದರಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಮಾಡಿರುವ ಖರ್ಚು, ರಫ್ತು ಮತ್ತು ಸ್ಥಳೀಯ ಸರ್ಕಾರಗಳ ವೆಚ್ಚ ಇವೆಲ್ಲವೂ ಕಾರಣವಾಗಿದೆ ಎಂದು ವರದಿ ಹೇಳಿದೆ. ಅಮದಹಾಗೆ ಬೆಳವಣಿಗೆಯು ಸಣ್ಣ ಉದ್ಯಮಗಳಿಗೆ ನೀಡುವ ಅನುದಾನ, ಸಾಲದ ಕಾರ್ಯಕ್ರಮದಲ್ಲಿ ಕಡಿಮೆ ಮಾಡಿದ್ದು, ಇದರ ಜತೆಗೆ ಸರ್ಕಾರದ ವೆಚ್ಚದಲ್ಲೂ ಇಳಿಕೆ ಮಾಡಲಾಗಿತ್ತು.

ಈಗಿನ ದತ್ತಾಂಶ ಸೂಚಿಸುವಂತೆ, ಪರ್ಸನಲ್ ಕನ್ಸಮ್ಷನ್ ಎಕ್ಸ್​ಪೆಂಡಿಚರ್ (PCE) ದರದ ಸೂಚ್ಯಂಕವು ಎರಡನೇ ತ್ರೈಮಾಸಿಕದಲ್ಲಿ ಶೇ 6.4ಕ್ಕೆ ಏರಿಕೆಯಾಗಿದ್ದು, ಅದರ ಹಿಂದಿನ ಅವಧಿಯಲ್ಲಿ ಶೇ 3.8 ಇತ್ತು. ವರ್ಷದ ಹಿಂದಿನ ಕುಸಿತದಿಂದ ಬೇಡಿಕೆ ಮರಳಿದ ಮೇಲೆ ಹಣದುಬ್ಬರ ಏರಿಕೆ ಆಗಿದೆ. ಆಹಾರ ಮತ್ತು ಎನರ್ಜಿ ದರಗಳ ಏರಿಳಿತಗಳನ್ನು ಹೊರತುಪಡಿಸಿ ಪಿಸಿಇ ದರ ಸೂಚ್ಯಂಕವು ಶೇ 6.1ಕ್ಕೆ ಏರಿಕೆ ಆಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ 7 ವರ್ಷಗಳ ಗರಿಷ್ಠ ಮಟ್ಟ ತಲುಪುತ್ತಿದೆ ಇಂಧನದ ಬೆಲೆ; ಭಾರತಕ್ಕೆ ಹೋಲಿಸಿದರೆ ಎಷ್ಟು ವ್ಯತ್ಯಾಸ ಗೊತ್ತಾ?

(US Economy Growth Rate At 6.5 Percent In April To June Second Quarter)