ಐಫೋನ್​ಗಳಿಗೆ ಭಾರತದಲ್ಲೇ ಗೊರಿಲ್ಲಾ ಗ್ಲಾಸ್ ಉತ್ಪಾದನೆ; ಅಮೆರಿಕದ ಕಾರ್ನಿಂಗ್​ನಿಂದ ಫ್ಯಾಕ್ಟರಿ ಸ್ಥಾಪನೆ

|

Updated on: Dec 12, 2023 | 12:56 PM

Gorilla Glass Manufacturing in Tamil Nadu: ಐಫೋನ್ ಸ್ಮಾರ್ಟ್​ಫೋನ್​ಗಳಿಗೆ ಬಳಸುವ ಗೊರಿಲ್ಲಾ ಗ್ಲಾಸ್​ಗಳನ್ನು ಪೂರೈಸುವ ಅಮೆರಿಕದ ಕಾರ್ನಿಂಗ್ ಭಾರತದಲ್ಲಿ ಫ್ಯಾಕ್ಟರಿ ಆರಂಭಿಸಲಿದೆ. ತಮಿಳುನಾಡಿನ ಶ್ರೀಪೆರಂಬದೂರು ಬಳಿಯ ಪಿಳ್ಳೈಪ್ಪಾಕ್ಕಂನಲ್ಲಿ 1,000 ಕೋಟಿ ರು ಹೂಡಿಕೆಯಲ್ಲಿ ಘಟಕ ಆರಂಭವಾಗಲಿದೆ. 2024ರ ಜನವರಿಯಲ್ಲಿ ಕಾರ್ನಿಂಗ್ ಮತ್ತು ತಮಿಳುನಾಡು ಸರ್ಕಾರದ ಮಧ್ಯೆ ಎಂಒಯು ಆಗಲಿದ್ದು, ಒಂದು ವರ್ಷದಲ್ಲಿ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಐಫೋನ್​ಗಳಿಗೆ ಭಾರತದಲ್ಲೇ ಗೊರಿಲ್ಲಾ ಗ್ಲಾಸ್ ಉತ್ಪಾದನೆ; ಅಮೆರಿಕದ ಕಾರ್ನಿಂಗ್​ನಿಂದ ಫ್ಯಾಕ್ಟರಿ ಸ್ಥಾಪನೆ
ಕಾರ್ನಿಂಗ್
Follow us on

ಚೆನ್ನೈ, ಡಿಸೆಂಬರ್ 12: ಆ್ಯಪಲ್ ಕಂಪನಿಯ ಐಫೋನ್​ಗಳಿಗೆ ಗೊರಿಲ್ಲಾ ಗ್ಲಾಸ್ (Gorilla Glass) ಸರಬರಾಜು ಮಾಡುವ ಅಮೆರಿಕದ ಕಾರ್ನಿಂಗ್ (corning inc.) ಸಂಸ್ಥೆ ಭಾರತದಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ತಮಿಳುನಾಡಿನಲ್ಲಿ ಕಾರ್ನಿಂಗ್​ನಿಂದ ಗೊರಿಲ್ಲಾ ಗ್ಲಾಸ್ ಉತ್ಪಾದನೆ ಘಟಕ ಸ್ಥಾಪನೆ ಆಗುವ ಸಾಧ್ಯತೆ ಇದೆ. ಶ್ರೀಪೆರುಂಬುದೂರಿನ ಬಳಿ ಇರುವ ಪಿಳ್ಳೈಪ್ಪಾಕ್ಕಂನಲ್ಲಿ (Pillaipakkam) 1,000 ಕೋಟಿ ರೂ ಬಂಡವಾಳದೊಂದಿಗೆ ಫ್ಯಾಕ್ಟರಿ ಆರಂಭವಾಗಲಿದ್ದು 300 ಮಂದಿಗೆ ಉದ್ಯೋಗಾವಕಾಶ ಇರಲಿದೆ ಎನ್ನಲಾಗುತ್ತಿದೆ.

ಕಾರ್ನಿಂಗ್ ಸಂಸ್ಥೆ ಭಾರತದ ಮಾರುಕಟ್ಟೆಗೆ ಅಡಿ ಇಡುತ್ತಿರುವುದು ಇದೇ ಮೊದಲು. ಕೆಲ ತಿಂಗಳ ಹಿಂದೆ ಕಾರ್ನಿಂಗ್​ನಿಂದ ತಮ್ಮಲ್ಲಿ ಹೂಡಿಕೆ ಆಗಲಿದೆ ಎಂದು ತೆಲಂಗಾಣ ಸರ್ಕಾರ ಹೇಳಿಕೊಂಡಿತ್ತು. ಎರಡು ತಿಂಗಳ ಹಿಂದೆ ಬಿಸಿನೆಸ್ ಸ್ಟಾಂಡರ್ಡ್​ನಲ್ಲಿ ಬಂದ ವರದಿ ಪ್ರಕಾರ, ಭಾರತದ ಆಪ್ಟೀಮಸ್ ಇನ್​ಫ್ರಾಕಾಮ್ ಮತ್ತು ಅಮೆರಿಕದ ಕಾರ್ನಿಂಗ್ ಸಂಸ್ಥೆಗಳು ಜೊತೆಯಾಗಿ ಉಚ್ಚ ಗುಣಮಟ್ಟದ ಸ್ಮಾರ್ಟ್​ಫೋನ್ ಕವರ್ ಗ್ಲಾಸ್ ಫ್ಯಾಕ್ಟರಿಯನ್ನು ಆರಂಭಿಸಬಹುದು. 2024ರ ಅಂತ್ಯದೊಳಗೆ ಈ ಘಟಕಗಳು ಕಾರ್ಯಾಚರಿಸಬಹದು ಎಂದಿತ್ತು.

ಇದನ್ನೂ ಓದಿ: Economy: ಕೋವಿಡ್ ಬಾರದೇ ಹೋಗಿದ್ದರೆ ಭಾರತದ ಆರ್ಥಿಕತೆ ಹೇಗಿರುತ್ತಿತ್ತು? ಎಷ್ಟು ಹಿಂದೆಬಿದ್ದಿದೆ? ಆರ್ಥಿಕ ತಜ್ಞ ನೀಲಕಾಂತ್ ಮಿಶ್ರ ಅಭಿಪ್ರಾಯ ಇದು

ಆದರೆ, ಆ್ಯಪಲ್​ನ ಐಫೋನ್ ಅಸೆಂಬ್ಲಿಂಗ್ ಮಾಡುವ ಫಾಕ್ಸ್​ಕಾನ್ ಮತ್ತು ಪೆಗಾಟ್ರಾನ್​ನ ಘಟಕಗಳು ತಮಿಳುನಾಡಿನಲ್ಲಿಯೇ ಇರುವುದರಿಂದ ತೆಲಂಗಾಣ ಬದಲು ತಮಿಳುನಾಡಿನಲ್ಲಿ ಗೋರಿಲ್ಲ ಗ್ಲಾಸ್ ಉತ್ಪಾದನಾ ಘಟಕ ಆರಂಭಿಸಲು ಕಾರ್ನಿಂಗ್ ನಿರ್ಧರಿಸಿದೆ ಎಂದು ಇಂದು ಪತ್ರಿಕೆಯಲ್ಲಿ ಬಂದ ವರದಿಯಲ್ಲಿ ಹೇಳಲಾಗಿದೆ.

ಜನವರಿಯಲ್ಲಿ ನಡೆಯಲಿರುವ ಗ್ಲೋಬಲ್ ಇನ್ವೆಸ್ಟರ್ ಮೀಟ್​ನಲ್ಲಿ ತಮಿಳುನಾಡು ಸರ್ಕಾರ ಮತ್ತು ಕಾರ್ನಿಂಗ್ ಮಧ್ಯೆ ಒಡಂಬಡಿಕೆ ನಡೆಯುವ ಸಾಧ್ಯತೆ ಇದೆ. ಅದಾದ ಬಳಿಕ ಘಟಕ ನಿರ್ಮಾಣಕ್ಕೆ ಒಂದು ವರ್ಷ ಆಗಬಹುದು.

ಇದನ್ನೂ ಓದಿ: ಬರೋಬ್ಬರಿ 84,000 ಕೋಟಿ ರೂ ಮೌಲ್ಯದ ಆಸ್ತಿ ಒಬ್ಬ ಹಮಾಲಿಗೆ ಧಾರೆ ಎರೆಯುತ್ತಿರುವ ಶ್ರೀಮಂತ; ಏನು ಕಾರಣ?

ಅಕ್ಟೋಬರ್​ನಲ್ಲಿ ಬಂದ ವರದಿಯಂತೆ 2024ರ ಅಂತ್ಯದಲ್ಲಿ ಘಟಕ ಕಾರ್ಯಾಚರಣೆ ಆರಂಭವಾಗಬಹುದು. ಮೊದಲ ಹಂತದಲ್ಲಿ 3 ಕೋಟಿ ಗೋರಿಲ್ಲ ಗ್ಲಾಸ್ ಕವರ್​ಗಳ ಉತ್ಪಾದನೆ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ