ನವದೆಹಲಿ, ನವೆಂಬರ್ 9: ಭಾರತದಲ್ಲಿ ಸೆಮಿಕಂಡ್ಟರ್ ಉದ್ದಿಮೆ (semiconductor manufacturing) ಶುರು ಮಾಡಲು ಪ್ರಯತ್ನಿಸುತ್ತಿರುವ ವೇದಾಂತ ಸಂಸ್ಥೆ ಇದೀಗ ಡಿಸ್ಪ್ಲೇ ಫ್ಯಾಬ್ರಿಕೇಶನ್ ಘಟಕದ (display fab unit) ಸ್ಥಾಪನೆಗೆ ತೈವಾನ್ ಕಂಪನಿಯೊಂದರೊಂದಿಗೆ ಕೈಜೋಡಿಸಲು ಯತ್ನಿಸುತ್ತಿದೆ. ಟಿಎಫ್ಡಿ ಎಲ್ಸಿಡಿ ತಯಾರಿಸುವ ತೈವಾನ್ನ ಇನ್ನೋಲುಕ್ಸ್ ಕಾರ್ಪೊರೇಶನ್ ಸಂಸ್ಥೆ ಜೊತೆ ವೇದಾಂತ ಗ್ರೂಪ್ ಮಾತುಕತೆ ನಡೆಸುತ್ತಿದೆ. ಈ ಎರಡೂ ಕಂಪನಿಗಳ ಉನ್ನತ ಅಧಿಕಾರಿಗಳು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತನಾಡಿರುವುದು ತಿಳಿದುಬಂದಿದೆ.
‘ವೇದಾಂತ ಡಿಸ್ಪ್ಲೇಸ್ ಲಿ ಸಂಸ್ಥೆಯ ಸಿಇಒ ವೈ.ಜೆ. ಚೆನ್, ವೇದಾಂತ ಗ್ರೂಪ್ನ ಸ್ಟ್ರಾಟಿಜಿ ಮತ್ತು ಪಾಲಿಸಿ ವಿಭಾಗದ ಛೇರ್ಮನ್ ಸುನೀಲ್ ದುಗ್ಗಲ್, ಇನ್ನೋಲುಕ್ಸ್ನ ಡೈರೆಕ್ಟರ್ ಜೈಹ ಚೌ ವ್ಯಾಂಗ್ ಅವರು ನನ್ನ ಕಚೇರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದೇಶೀಯವಾಗಿ ಡಿಸ್ಪ್ಲೇ ತಯಾರಿಸುವ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿದೆವು,’ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
Mr. YJ Chen, CEO, #Vedanta Displays Ltd; Mr. Sunil Duggal- Strategy & Policy Chairman, @Vedanta_Group; Mr. James Yang- President and Mr. Jyh Chau Wang – Director #Innolux called on me at my office @GoI_MeitY today.
We discussed about India’s vision and goals in domestic display… pic.twitter.com/Wp133VJuS3
— Rajeev Chandrasekhar 🇮🇳 (@Rajeev_GoI) November 8, 2023
ಇದನ್ನೂ ಓದಿ: ಎಲ್ ಅಂಡ್ ಟಿಯಿಂದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಡಿಸೈನ್ ಘಟಕ; ಪ್ರತ್ಯೇಕ ಉಪಸಂಸ್ಥೆ ರಚನೆಗೆ ಅನುಮೋದನೆ
ಇದರೊಂದಿಗೆ, ತೈವಾನ್ನ ಇನ್ನೋಲುಕ್ಸ್ ಕಂಪನಿ ಜೊತೆ ವೇದಾಂತ ಮಾತುಕತೆ ನಡೆಸುತ್ತಿರುವ ಸಂಗತಿ ದೃಢಪಟ್ಟಿದೆ. ವೇದಾಂತದ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ವ್ಯವಹಾರ ವಿಭಾಗದ ವಕ್ತಾರರೊಬ್ಬರು ಈ ವಿಚಾರವನ್ನು ಖಚಿತಪಡಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಕೂಡ ತಿಳಿಸಿದೆ.
‘ಸರ್ಕಾರದ ಸ್ವಾವಂಬನೆಯ ಭಾರತದ ಮಹೋದ್ದೇಶಕ್ಕೆ ನಾವು ಬೆಂಬಲ ನೀಡಲು ಕಟಿಬದ್ಧರಾಗಿದ್ದೇವೆ. ಡಿಸ್ಪ್ಲೇ ಫ್ಯಾಬ್ ಯೂನಿಟ್ ಅನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ. ಈ ಮೂಲಕ ಹೈಟೆಕ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಸ್ವಾವಲಂಬನೆ ಸಾಧ್ಯವಾಗಬಹುದು,’ ಎಂದು ಆ ವಕ್ತಾರರು ಖಚಿತಪಡಿಸಿದ್ದಾರೆ.
ತೈವಾನ್ನ ಇನ್ನೋಲುಕ್ಸ್ ಕಾರ್ಪೊರೇಶನ್ ಸಂಸ್ಥೆ ಟಿಎಫ್ಟಿ ಎಲ್ಸಿಡಿ ಡಿಸ್ಪ್ಲೇ ಅನ್ನು ತಯಾರಿಸುತ್ತದೆ. ಥಿನ್ ಫಿಲಂ ಟ್ರಾನ್ಸಿಸ್ಟರ್ ತಂತ್ರಜ್ಞಾನದ ಮೂಲಕ ಎಲ್ಸಿಡಿ ಸ್ಕ್ರೀನ್ಗಳು ಇವು. ಕಂಪ್ಯೂಟರ್, ಲ್ಯಾಪ್ಟಾಪ್, ಸ್ಮಾರ್ಟ್ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಒಟ್ಟಾರೆ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಸರಪಳಿಯ ಒಂದು ಭಾಗವಾಗಿ ಡಿಸ್ಪ್ಲೇ ಫ್ಯಾಬ್ ಯೂನಿಟ್ ಇರುತ್ತದೆ.
ಇದನ್ನೂ ಓದಿ: ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ
ವೇದಾಂತ ಸಂಸ್ಥೆ ಸೆಮಿಕಂಡಕ್ಟರ್ ಚಿಪ್ ಘಟಕಗಳ ನಿರ್ಮಾಣದ ಮುಖ್ಯ ಗುರಿ ಹೊಂದಿದೆ. ಈ ಹಿಂದೆ ತೈವಾನ್ನ ಫಾಕ್ಸ್ಕಾನ್ ಜೊತೆ ಅದು ಒಪ್ಪಂದ ಮಾಡಿಕೊಂಡಿತ್ತು. ಸೆಮಿಕಂಡಕ್ಟರ್ ವೇಫರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆಯ ಪ್ರಸ್ತಾಪ ಇತ್ತು. ಆದರೆ, ಈ ಜಂಟಿ ವ್ಯವಹಾರ ಕೆಲ ತಿಂಗಳ ಹಿಂದೆ ಮುರಿದುಬಿದ್ದಿತು. ಎರಡೂ ಕಂಪನಿಗಳು ಪ್ರತ್ಯೇಕವಾಗಿ ಸೆಮಿಕಂಡಕ್ಟರ್ ಉತ್ಪಾದನೆಯ ಹಾದಿ ಹಿಡಿಯಲು ನಿರ್ಧರಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ