ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ

Sahasra Semiconductors: ರಾಜಸ್ಥಾನ ಮೂಲದ ಸಹಸ್ರ ಸೆಮಿಕಂಡಕ್ಟರ್ಸ್ ಕಂಪನಿ ಇತಿಹಾಸ ಸೃಷ್ಟಿಸಿದೆ. ಅಮೆರಿಕದ ಸೆಮಿಕಂಡಕ್ಟರ್ ದೈತ್ಯ ಮೈಕ್ರೋನ್​ಗಿಂತ ಮುಂಚೆ ಭಾರತದಲ್ಲಿ ಮೆಮೊರಿ ಚಿಪ್ ಉತ್ಪಾದನೆ ಮಾಡಿ ಸೈ ಎನಿಸಿದೆ. ರಾಜಸ್ಥಾನದ ಭಿವಾಡಿಯಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಅದರ ಹೊಸ ಸೆಮಿಕಂಡಕ್ಟರ್ ಉತ್ಪಾದನಾ ಘಟಕದಲ್ಲಿ ಚಿಪ್​ಗಳನ್ನು ತಯಾರಿಸುವ ಕೆಲಸ ಆರಂಭವಾಗಿತ್ತು. ಈಗಾಗಲೇ ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು ವಿವಿದ ಇ ಕಾಮರ್ಸ್ ಪ್ಲಾಟ್​ಫಾರ್ಮ್​ಗಳಿಗೆ ಸರಬರಾಜು ಮಾಡಲಾಗಿದೆ.

ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ
ಮೆಮೊರಿ ಚಿಪ್
Follow us
|

Updated on: Oct 29, 2023 | 11:36 AM

ಜೈಪುರ್, ಅಕ್ಟೋಬರ್ 29: ರಾಜಸ್ಥಾನ ಮೂಲದ ಸಹಸ್ರ ಸೆಮಿಕಂಡಕ್ಟರ್ಸ್ ಕಂಪನಿ ಇತಿಹಾಸ ಸೃಷ್ಟಿಸಿದೆ. ಸೆಮಿಕಂಡಕ್ಟರ್ ಮೆಮೋರಿ ಚಿಪ್ (Memory Chip) ಉತ್ಪಾದನೆ ಮಾಡಿದ ಮಾರುಕಟ್ಟೆಗೆ ಸಾಗಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆಗೆ ಅದು ಬಾಜನವಾಗಿದೆ. ಅಮೆರಿಕದ ಸೆಮಿಕಂಡಕ್ಟರ್ ದೈತ್ಯ ಮೈಕ್ರೋನ್​ಗಿಂತ ಮುಂಚೆ ಭಾರತದಲ್ಲಿ ಇದು ಉತ್ಪಾದನೆ ಮಾಡಿ ಸೈ ಎನಿಸಿದೆ. ರಾಜಸ್ಥಾನದ ಭಿವಾಡಿಯಲ್ಲಿ (Bhiwadi) ಅಕ್ಟೋಬರ್ ಮೊದಲ ವಾರದಲ್ಲಿ ಅದರ ಹೊಸ ಸೆಮಿಕಂಡಕ್ಟರ್ ಉತ್ಪಾದನಾ ಘಟಕದಲ್ಲಿ ಚಿಪ್​ಗಳನ್ನು ತಯಾರಿಸುವ ಕೆಲಸ ಆರಂಭವಾಗಿತ್ತು. ಈಗಾಗಲೇ ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು (Micro SD) ವಿವಿದ ಇ ಕಾಮರ್ಸ್ ಪ್ಲಾಟ್​ಫಾರ್ಮ್​ಗಳಿಗೆ ಸರಬರಾಜು ಮಾಡಲಾಗಿದೆ.

‘ಮೇಡ್ ಇನ್ ಇಂಡಿಯಾ ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು ಮಾರಿದ ಮೊದಲ ಕಂಪನಿ ಎನಿಸಿದ್ದೇವೆ. ಇಕಾಮರ್ಸ್ ಪ್ಲಾಟ್​​ಫಾರ್ಮ್​ಗಳಲ್ಲಿ ನಮಗೆ ಸಿಕ್ಕಿದ ಸ್ಪಂದನೆ ಅದ್ವಿತೀಯವಾದುದು,’ ಎಂದು ಸಹಸ್ರ ಗ್ರೂಪ್​ನ ಮ್ಯಾನೇಜಿಂಗ್ ಡೈರೆಕ್ಟರ್ ಅಮೃತ್ ಮನ್ವಾನಿ ಹೇಳಿದ್ದಾರೆ.

ಭಿವಾಡಿಯಲ್ಲಿ ಇರುವ ಸಹಸ್ರ ಸೆಮಿಕಂಡಕ್ಟರ್ ಘಟಕದಲ್ಲಿ ಸದ್ಯ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ. ಇನ್ನೆರಡು ತಿಂಗಳಲ್ಲಿ ಶೇ. 30ರಷ್ಟು ಸಾಮರ್ಥ್ಯದಲ್ಲಿ ಉತ್ಪಾದನೆ ನಡೆಯುವ ನಿರೀಕ್ಷೆ ಇದೆ. ಮುಂದಿನ ಆರೇಳು ತಿಂಗಳಲ್ಲಿ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ ನಡೆಸಲು ಗುರಿ ಇಡಲಾಗಿದೆ.

ಇದನ್ನೂ ಓದಿ: ವಿಸ್ಟ್ರಾನ್ ಘಟಕದಲ್ಲಿ ಟಾಟಾ ಕಾರ್ಯಾಚರಣೆ ಅಧಿಕೃತ; ಮೊದಲ ಬಾರಿಗೆ ಭಾರತೀಯ ಕಂಪನಿಯಿಂದ ಆ್ಯಪಲ್ ಐಫೋನ್ ತಯಾರಿಕೆ

ಮೊದಲ ಹಂತದಲ್ಲಿ ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು ತಯಾರಿಸಲಾಗುತ್ತದೆ. ಎರಡನೇ ಹಂತದಲ್ಲಿ ಇಂಟರ್ನಲ್ ಮೆಮೊರಿ ಚಿಪ್​ನಂತರ ಅಡ್ವಾನ್ಸ್ಡ್ ಪ್ಯಾಕೇಜಿಂಗ್ ನಡೆಯಲಿದೆ.

ಗುಜರಾತ್​ನಲ್ಲಿ ಮೈಕ್ರೋನ್ ಘಟಕ

ಅಮೆರಿಕದ ಮೈಕ್ರೋನಾನ್ ಸಂಸ್ಥೆ ಗುಜರಾತ್​ನಲ್ಲಿ ಹೊಸ ಚಿಪ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. ಅದಕ್ಕಾಗಿ 825 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಇಲ್ಲಿ DRAM and NAND ಚಿಪ್​ಗಳನ್ನು ತಯಾರಿಸಲಾಗುತ್ತದೆ. 2024ರ ಅಂತ್ಯದೊಳಗೆ ಉತ್ಪಾದನೆ ಶುರುವಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಅಪ್ಲೈಡ್ ಮೆಟೀರಿಯಲ್ಸ್​ನಿಂದ ಹೊಸ ಎಂಜಿನಿಯರಿಂಗ್ ಸೆಂಟರ್…

ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಅಪ್ಲೈಡ್ ಮೆಟೀರಿಯಲ್ಸ್ ಮುಂದಿನ ನಾಲ್ಕು ವರ್ಷಾದ್ಯಂತ ಭಾರತದಲ್ಲಿ ಒಟ್ಟು 400 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಬೆಂಗಳೂರಿನಲ್ಲಿ ಹೊಸ ಎಂಜಿನಿಯರಿಂಗ್ ಸೆಂಟರ್ ತೆರೆಯಲಿದೆ.

ಇದನ್ನೂ ಓದಿ: ಭಾರತದಲ್ಲಿ ಎಎಂಡಿಯಿಂದ 400 ಮಿಲಿಯನ್ ಡಾಲರ್ ಹೂಡಿಕೆ; ಬೆಂಗಳೂರಿನಲ್ಲಿ ಅತಿದೊಡ್ಡ ಚಿಪ್ ಡಿಸೈನ್ ಸೆಂಟರ್: ಸಚಿವ ಎ ವೈಷ್ಣವ್ ಘೋಷಣೆ

ಗೂಗಲ್​ನ ಮೇಡ್ ಇನ್ ಇಂಡಿಯಾ ಟೆನ್ಸಾರ್ ಚಿಪ್

ಗೂಗಲ್​ನ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳಿಗೆ ಮುಂದಿನ ದಿನಗಳಲ್ಲಿ ಮೇಡ್ ಇನ್ ಇಂಡಿಯಾ ಟೆನ್ಸಾರ್ ಚಿಪ್​ಗಳ (tensor chip) ಅಳವಡಿಕೆ ಆಗಲಿದೆ. ಭಾರತದಲ್ಲಿ ಡಿಸೈನ್ ಮಾಡಲಾದ ಟೆನ್ಸಾರ್ ಚಿಪ್​ಗಳ ಹೊಸ ಆವೃತ್ತಿಯನ್ನು ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿತ್ತು.

ಇನ್ನು, ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (ಎಎಂಡಿ) ಐದು ವರ್ಷದಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಬೆಂಗಳೂರಿನಲ್ಲಿ ಎಎಂಡಿಯ ಅತಿದೊಡ್ಡ ಡಿಸೈನ್ ಘಟಕ ಸಿದ್ಧವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ