ವಿಸ್ಟ್ರಾನ್ ಘಟಕದಲ್ಲಿ ಟಾಟಾ ಕಾರ್ಯಾಚರಣೆ ಅಧಿಕೃತ; ಮೊದಲ ಬಾರಿಗೆ ಭಾರತೀಯ ಕಂಪನಿಯಿಂದ ಆ್ಯಪಲ್ ಐಫೋನ್ ತಯಾರಿಕೆ

TATA to Make iPhones In Wistron facility: ಟಾಟಾ ಗ್ರೂಪ್ ಸಂಸ್ಥೆ ಭಾರತದಲ್ಲಿ ಆ್ಯಪಲ್​ನ ಐಫೋನ್​ಗಳನ್ನು ತಯಾರಿಸುವುದು ಖಚಿತವಾಗಿದೆ. ಟಾಟಾ ವಿಸ್ಟ್ರಾನ್ ಇನ್ಫೋಕಾಮ್ ಸಂಸ್ಥೆಯನ್ನು ಟಾಟಾಗೆ ಮಾರುವುದಕ್ಕೆ ಅದರ ಮಾತೃ ಸಂಸ್ಥೆ ಒಪ್ಪಿಗೆ ನೀಡಿದೆ. ಈ ವಿಚಾರವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್ ಖಾತೆ ಮೂಲಕ ತಿಳಿಸಿದ್ದಾರೆ. ಟಾಟಾ ಸಂಸ್ಥೆಗೆ ಆ್ಯಪಲ್ ಉತ್ಪನ್ನಗಳ ತಯಾರಿಕೆ ಹೊಸದೇನಲ್ಲ. ಅದರ ತಮಿಳುನಾಡು ಘಟಕದಲ್ಲಿ ಐಫೋನ್​ನ ಚಾಸಿಸ್ ತಯಾರಿಸಿ ಕೊಡುತ್ತಾ ಬರುತ್ತಿದೆ. ಈಗ ಇದೇ ಮೊದಲ ಬಾರಿಗೆ ಐಫೋನ್ ಅಸೆಂಬ್ಲಿಂಗ್ ಅನ್ನು ಟಾಟಾ ನಡೆಸಲಿದೆ.

ವಿಸ್ಟ್ರಾನ್ ಘಟಕದಲ್ಲಿ ಟಾಟಾ ಕಾರ್ಯಾಚರಣೆ ಅಧಿಕೃತ; ಮೊದಲ ಬಾರಿಗೆ ಭಾರತೀಯ ಕಂಪನಿಯಿಂದ ಆ್ಯಪಲ್ ಐಫೋನ್ ತಯಾರಿಕೆ
ಐಫೋನ್ ತಯಾರಿಕೆ
Follow us
|

Updated on: Oct 27, 2023 | 6:32 PM

ನವದೆಹಲಿ, ಅಕ್ಟೋಬರ್ 27: ಟಾಟಾ ಗ್ರೂಪ್ ಸಂಸ್ಥೆ (Tata group) ಭಾರತದಲ್ಲಿ ಆ್ಯಪಲ್​ನ ಐಫೋನ್​ಗಳನ್ನು ತಯಾರಿಸುವುದು ಖಚಿತವಾಗಿದೆ. ವಿಸ್ಟ್ರಾನ್ ಇನ್ಫೋಕಾಮ್ (Wistron Infocomm Manufacturing Ltd) ಸಂಸ್ಥೆಯನ್ನು ಟಾಟಾಗೆ ಮಾರುವುದಕ್ಕೆ ಅದರ ಮಾತೃ ಸಂಸ್ಥೆ ಒಪ್ಪಿಗೆ ನೀಡಿದೆ. ಈ ವಿಚಾರವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chadrashekhar) ತಮ್ಮ ಎಕ್ಸ್ ಖಾತೆ ಮೂಲಕ ತಿಳಿಸಿದ್ದಾರೆ. ವಿಸ್ಟ್ರಾನ್ ಕಾರ್ಪೊರೇಶನ್ ಸಂಸ್ಥೆ ಈ ನಿಟ್ಟಿನಲ್ಲಿ ಅಧಿಕೃತ ಘೋಷಣೆ ಮಾಡಿರುವ ಪತ್ರವನ್ನೂ ಅವರು ತಮ್ಮ ಟ್ವೀಟ್ ಜೊತೆಗೆ ಲಗತ್ತಿಸಿದ್ದಾರೆ. ಈ ವಹಿವಾಟು 125 ಡಾಲರ್​ಗೆ (ಸುಮಾರು 1,000 ರುಪಾಯಿ) ಆಗಿರುವುದು ತಿಳಿದುಬಂದಿದೆ. ಇದರೊಂದಿಗೆ ಅತಿಶೀಘ್ರದಲ್ಲಿ ಕೋಲಾರದ ವಿಸ್ಟ್ರಾನ್ ಘಟಕದಲ್ಲಿ ಟಾಟಾ ವತಿಯಿಂದ ಐಫೋನ್ ತಯಾರಿಕೆ ಆರಂಭವಾಗಲಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪಿಎಲ್​ಐ ಸ್ಕೀಮ್​ನಿಂದಾಗಿ ಸ್ಮಾರ್ಟ್​ಫೋನ್ ಮ್ಯಾನುಫ್ಯಾಕ್ಚರಿಂಗ್ ಮತ್ತು ರಫ್ತಿನಲ್ಲಿ ಭಾರತ ಪ್ರಮುಖ ಅಡ್ಡೆಯಾಗಿ ಬೆಳೆದಿದೆ. ಎರಡೂವರೆ ವರ್ಷದೊಳಗೆಯೇ ಟಾಟಾ ಕಂಪನಿ ಭಾರತದಲ್ಲಿ ಐಫೋನ್​ಗಳ ತಯಾರಿಕೆಯನ್ನು ಈಗ ಆರಂಭಿಸುತ್ತಿದೆ. ವಿಸ್ಟ್ರಾನ್ ಆಪರೇಷನ್ಸ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಟಾಟಾ ಟೀಮ್​ಗೆ ಧನ್ಯವಾದಗಳು.

ಇದನ್ನೂ ಓದಿ: ಭಾರತಕ್ಕೆ ಓವರ್​ವೈಟ್ ರೇಟಿಂಗ್ ಕೊಟ್ಟ ಜೆಪಿ ಮಾರ್ಗನ್; ಪ್ರಮುಖ ಜಾಗತಿಕ ಬ್ರೋಕರೇಜ್ ಕಂಪನಿಗಳಿಂದ ಭಾರತದ ಬಗ್ಗೆ ಭಾರೀ ನಿರೀಕ್ಷೆ

‘ಜಾಗತಿಕ ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿಗಳ ಬೆಳವಣಿಗೆಗೆ ಸರ್ಕಾರ ಪೂರ್ಣ ಬೆಂಬಲ ನೀಡುತ್ತದೆ. ಇದರಿಂದ ಭಾರತವನ್ನು ಪಾಲುದಾರನಾಗಿ ಮಾಡಿಕೊಳ್ಳಬಯಸುವ ಜಾಗತಿಕ ಎಲೆಕ್ಟ್ರಾನಿಕ್ ಬ್ರ್ಯಾಂಡ್​ಗಳಿಗೆ ಅನುಕೂಲವಾಗುತ್ತದೆ’ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಆ್ಯಪಲ್ ಸಂಸ್ಥೆ ಬೇರೆ ಕಂಪನಿಗಳ ಮೂಲಕ ತನ್ನ ಐಫೋನ್ ಮೊದಲಾದ ಉತ್ಪನ್ನಗಳನ್ನು ತಯಾರಿಸುತ್ತದೆ. ಇದರಲ್ಲಿ ತೈವಾನ್ ಮೂಲದ ಫಾಕ್ಸ್​ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಕಂಪನಿಗಳಿದ್ದವು. ಈಗ ಟಾಟಾ ಗ್ರೂಪ್ ಈ ಪಟ್ಟಿಗೆ ಸೇರಿದೆ.

ಇದನ್ನೂ ಓದಿ: ಭಾರತದಲ್ಲಿ ಎಎಂಡಿಯಿಂದ 400 ಮಿಲಿಯನ್ ಡಾಲರ್ ಹೂಡಿಕೆ; ಬೆಂಗಳೂರಿನಲ್ಲಿ ಅತಿದೊಡ್ಡ ಚಿಪ್ ಡಿಸೈನ್ ಸೆಂಟರ್: ಸಚಿವ ಎ ವೈಷ್ಣವ್ ಘೋಷಣೆ

ಟಾಟಾ ಸಂಸ್ಥೆಗೆ ಆ್ಯಪಲ್ ಉತ್ಪನ್ನಗಳ ತಯಾರಿಕೆ ಹೊಸದೇನಲ್ಲ. ಅದರ ತಮಿಳುನಾಡು ಘಟಕದಲ್ಲಿ ಐಫೋನ್​ನ ಚಾಸಿಸ್ ತಯಾರಿಸಿ ಕೊಡುತ್ತಾ ಬರುತ್ತಿದೆ. ಈಗ ಇದೇ ಮೊದಲ ಬಾರಿಗೆ ಐಫೋನ್ ಅಸೆಂಬ್ಲಿಂಗ್ ಅನ್ನು ಟಾಟಾ ನಡೆಸಲಿದೆ. ಐಫೋನ್ ಅಸೆಂಬ್ಲಿಂಗ್ ಅನ್ನು ಮಾಡಲಿರುವ ಮೊದಲ ಭಾರತೀಯ ಕಂಪನಿ ಟಾಟಾ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ