AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಓವರ್​ವೈಟ್ ರೇಟಿಂಗ್ ಕೊಟ್ಟ ಜೆಪಿ ಮಾರ್ಗನ್; ಪ್ರಮುಖ ಜಾಗತಿಕ ಬ್ರೋಕರೇಜ್ ಕಂಪನಿಗಳಿಂದ ಭಾರತದ ಬಗ್ಗೆ ಭಾರೀ ನಿರೀಕ್ಷೆ

JP Morgan Rating On India: ಮಾರ್ಗನ್ ಸ್ಟಾನ್ಲೀ, ನೊಮುರಾ, ಸಿಎಲ್​ಎಸ್​ಎ ಮೊದಲಾದ ಸಂಸ್ಥೆಗಳು ಭಾರತಕ್ಕೆ ‘ಓವರ್​ವೈಟ್’ ರೇಟಿಂಗ್ ನೀಡಿವೆ. ಈ ಪಟ್ಟಿಗೆ ಜೆಪಿ ಮಾರ್ಗನ್ ಸೇರಿದೆ. ಇದರೊಂದಿಗೆ ಹೂಡಿಕೆದಾರರಿಗೆ ಭಾರತ ಅತಿಕಡಿಮೆ ರಿಸ್ಕ್ ಹೊಂದಿರುವ ದೇಶವೆಂದು ಬಹುತೇಕ ಬ್ರೋಕರೇಜ್ ಕಂಪನಿಗಳು ಪರಿಗಣಿಸಿದಂತಾಗಿದೆ. ಭಾರತದ ಜಿಡಿಪಿ ವೃದ್ಧಿ, ಪ್ರಬಲ ದೇಶೀಯ ಬಾಂಡ್ ಮಾರುಕಟ್ಟೆ, ಸ್ಪರ್ಧಾತ್ಮಕ ರಿಟರ್ನ್ಸ್ ಇವೇ ಮೊದಲಾದ ಅಂಶಗಳನ್ನು ಪರಿಗಣಿಸಿ ಭಾರತಕ್ಕೆ ಓವರ್​ವೈಟ್ ರೇಟಿಂಗ್ ಅನ್ನು ಜೆಪಿ ಮಾರ್ಗನ್ ನೀಡಿದೆ.

ಭಾರತಕ್ಕೆ ಓವರ್​ವೈಟ್ ರೇಟಿಂಗ್ ಕೊಟ್ಟ ಜೆಪಿ ಮಾರ್ಗನ್; ಪ್ರಮುಖ ಜಾಗತಿಕ ಬ್ರೋಕರೇಜ್ ಕಂಪನಿಗಳಿಂದ ಭಾರತದ ಬಗ್ಗೆ ಭಾರೀ ನಿರೀಕ್ಷೆ
ಜೆಪಿ ಮಾರ್ಗನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 27, 2023 | 3:08 PM

ನವದೆಹಲಿ, ಅಕ್ಟೋಬರ್ 27: ಜಾಗತಿಕ ಆರ್ಥಿಕ ಹಿನ್ನಡೆಯಲ್ಲೂ ಭಾರತದ ಜಿಡಿಪಿ ಗಣನೀಯವಾಗಿ ಹೆಚ್ಚುತ್ತಿದೆ. ಕೆಲ ಪ್ರಮುಖ ಬ್ರೋಕರೇಜ್ ಕಂಪನಿಗಳು ಭಾರತಕ್ಕೆ ಉತ್ತಮ ರೇಟಿಂಗ್ ನೀಡಿವೆ. ಮಾರ್ಗನ್ ಸ್ಟಾನ್ಲೀ, ನೊಮುರಾ, ಸಿಎಲ್​ಎಸ್​ಎ ಮೊದಲಾದ ಸಂಸ್ಥೆಗಳು ಭಾರತಕ್ಕೆ ‘ಓವರ್​ವೈಟ್’ ರೇಟಿಂಗ್ ನೀಡಿವೆ. ಈ ಪಟ್ಟಿಗೆ ಜೆಪಿ ಮಾರ್ಗನ್ (J P Morgan Chase & Co) ಸೇರಿದೆ. ಇದರೊಂದಿಗೆ ಹೂಡಿಕೆದಾರರಿಗೆ ಭಾರತ ಅತಿಕಡಿಮೆ ರಿಸ್ಕ್ ಹೊಂದಿರುವ ದೇಶವೆಂದು ಬಹುತೇಕ ಬ್ರೋಕರೇಜ್ ಕಂಪನಿಗಳು ಪರಿಗಣಿಸಿದಂತಾಗಿದೆ.

ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಸಂಸ್ಥೆ ಅಮೆರಿಕದ ಅತಿದೊಡ್ಡ ಬ್ಯಾಂಕ್ ಎನಿಸಿದೆ. ಷೇರುಸಂಪತ್ತಿನಲ್ಲಿ ವಿಶ್ವದ ಅತಿದೊಡ್ಡ ಬ್ಯಾಂಕ್ ಕೂಡ ಹೌದು. ಭಾರತದ ಜಿಡಿಪಿ ವೃದ್ಧಿ, ಪ್ರಬಲ ದೇಶೀಯ ಬಾಂಡ್ ಮಾರುಕಟ್ಟೆ, ಸ್ಪರ್ಧಾತ್ಮಕ ರಿಟರ್ನ್ಸ್ ಇವೇ ಮೊದಲಾದ ಅಂಶಗಳನ್ನು ಪರಿಗಣಿಸಿ ಭಾರತಕ್ಕೆ ಓವರ್​ವೈಟ್ ರೇಟಿಂಗ್ ಅನ್ನು ಜೆಪಿ ಮಾರ್ಗನ್ ನೀಡಿದೆ.

ಇದನ್ನೂ ಓದಿ: ಭಾರತದಲ್ಲಿ ಎಎಂಡಿಯಿಂದ 400 ಮಿಲಿಯನ್ ಡಾಲರ್ ಹೂಡಿಕೆ; ಬೆಂಗಳೂರಿನಲ್ಲಿ ಅತಿದೊಡ್ಡ ಚಿಪ್ ಡಿಸೈನ್ ಸೆಂಟರ್: ಸಚಿವ ಎ ವೈಷ್ಣವ್ ಘೋಷಣೆ

ಭಾರತ ಮಾತ್ರವಲ್ಲದೇ ಸೌದಿ ಅರೇಬಿಯಾವನ್ನೂ ಓವರ್​ವೈಟ್ ಆಗಿ ರೇಟಿಂಗ್ ಅಪ್​ಗ್ರೇಡ್ ಮಾಡಲಾಗಿದೆ. ಚೀನಾಗೂ ಕೂಡ ಓವರ್​ವೈಟ್ ರೇಟಿಂಗ್ ಮುಂದುವರಿದೆ. ಆದರೆ, ಈ ಮೊದಲು ಓವರ್​ವೈಟ್ ರೇಟಿಂಗ್ ಪಡೆದಿದ್ದ ದಕ್ಷಿಣ ಕೊರಿಯಾಗೆ ನ್ಯೂಟ್ರಲ್ ರೇಟಿಂಗ್ ಕೊಡಲಾಗಿದೆ.

ಪೋರ್ಟ್​ಫೋಲಿಯೋದಲ್ಲಿ ಭಾರತದ ಮೂರು ಸಂಸ್ಥೆಗಳನ್ನು ಒಳಗೊಂಡ ಜೆಪಿ ಮಾರ್ಗನ್

ಜೆಪಿ ಮಾರ್ಗನ್ ಅಂಡ್ ಚೇಸ್ ಕಂಪನಿ ತನ್ನ ಎಮರ್ಜಿಂಗ್ ಮಾರ್ಕೆಟ್ ಮಾಡೆಲ್ ಪೋರ್ಟ್​ಫೋಲಿಯೋಗೆ ಭಾರತದ ಸನ್ ಫಾರ್ಮಾಸ್ಯೂಟಿಕಲ್ ಇಂಡಸ್ಟ್ರೀಸ್, ಬ್ಯಾಂಕ್ ಆಫ್ ಬರೋಡಾ ಮತ್ತು ಹಿಂದೂಸ್ಥಾನ್ ಯೂನಿಲಿವರ್ ಸಂಸ್ಥೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಒಂದೇ ವಾರದಲ್ಲಿ 18 ಲಕ್ಷಕೋಟಿ ರೂ ಕಳೆದುಕೊಂಡ ಹೂಡಿಕೆದಾರರು; ಷೇರುಪೇಟೆ ಈ ಪರಿ ಅಲುಗಾಡುತ್ತಿರುವುದೇಕೆ?

ಇನ್ನು, ಭಾರತದಂತಹ ಎಮರ್ಜಿಂಗ್ ಮಾರ್ಕೆಟ್ ಅಥವಾ ಉದಯೋನ್ಮುಖ ಆರ್ಥಿಕತೆಯ ಮಾರುಕಟ್ಟೆ ಹೊಂದಿರುವ ದೇಶಗಳ ಈಕ್ವಿಟಿಗಳಿಗೆ ಸದ್ಯ ತುಸು ಸವಾಲಿನ ಘಳಿಗೆಯಾಗಿರುವುದನ್ನು ಜೆಪಿ ಮಾರ್ಗನ್ ಗಮನಿಸಿದೆ. ಅಮೆರಿಕದ ಬಡ್ಡಿದರ ಮೇಲಿನ ಮಟ್ಟದಲ್ಲಿ ಇರುವುದರಿಂದ ಮತ್ತು ಡಾಲರ್ ಪ್ರಬಲವಾಗಿರುವುದರಿಂದ ಅಭಿವೃದ್ಧಿಶೀಲ ದೇಶಗಳ ಷೇರುಮಾರುಕಟ್ಟೆಗೆ ಹಿನ್ನಡೆ ಆಗಿದೆ. ಆದರೆ, ಅಮೆರಿಕದಲ್ಲಿ ಈ ಬಡ್ಡಿದರ ಕಡಿಮೆ ಆದರೆ ಎಮರ್ಜಿಂಗ್ ಮಾರುಕಟ್ಟೆಗಳು ಮತ್ತೆ ಹೂಡಿಕೆಗಳನ್ನು ಪಡೆಯುತ್ತವೆ ಎಂಬುದು ಜೆಪಿ ಮಾರ್ಗನ್ ಅಂದಾಜು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?