ಎನ್ಆರ್ಐಗಳು ಆಧಾರ್ ಕಾರ್ಡ್ ಹೇಗೆ ಮಾಡಿಸುವುದು? ಯಾವ್ಯಾವ ದಾಖಲೆಗಳು ಅಗತ್ಯ? ಇಲ್ಲಿದೆ ವಿವರ
Aadhaar For NRI: ಅನಿವಾಸಿ ಭಾರತೀಯರೂ ಕೂಡ ಆಧಾರ್ ಪಡೆಯಬಹುದು. ಭಾರತೀಯ ಪ್ರಜೆಗಳಿಂದ ಪಡೆಯುವ ಬಯೋಮೆಟ್ರಿಕ್ ಮಾಹಿತಿಯನ್ನೇ ಎನ್ಆರ್ಐಗಳಿಂದಲೂ ಪಡೆಯಲಾಗುತ್ತದೆ. ಫೋಟೋ, ಕಣ್ಣಿನ ಸ್ಕ್ಯಾನ್, ಫಿಂಗರ್ ಪ್ರಿಂಟ್ಗಳನ್ನು ಪಡೆಯಲಾಗುತ್ತದೆ. ಎನ್ಆರ್ಐಗಳ ಬಳಿ ಭಾರತದ ಮೊಬೈಲ್ ನಂಬರ್ ಇರಬೇಕು. ಎನ್ರೋಲ್ಮೆಂಟ್ ಮಾಡಿಸುವಾಗ ಪಾಸ್ಪೋರ್ಟ್ ದಾಖಲೆಯನ್ನು ಒದಗಿಸುವುದು ಕಡ್ಡಾಯ.

ಆಧಾರ್ ಕಾರ್ಡ್ ಎಂಬುದು ಭಾರತದಲ್ಲಿ ಪ್ರಮುಖ ನಾಗರಿಕ ದಾಖಲೆಯಾಗಿದೆ. ಭಾರತದಲ್ಲಿ ಹಲವು ಕಾರ್ಯಗಳಿಗೆ ಇದನ್ನು ದಾಖಲೆಯಾಗಿ ಕೊಡಬಹುದು. ಯುಐಡಿಎಐ ಸಂಸ್ಥೆ ವಿತರಿಸುವ ಈ ಕಾರ್ಡ್ ಭಾರತೀಯ ನಾಗರಿಕರಿಗೆ ಗುರುತಿನ ದಾಖಲೆ ಮತ್ತು ವಿಳಾಸ ದಾಖಲೆಯೂ ಆಗಿರುತ್ತದೆ. ಅನಿವಾಸಿ ಭಾರತೀಯರೂ ಕೂಡ ಆಧಾರ್ ಪಡೆಯಬಹುದು. ಭಾರತೀಯ ಪ್ರಜೆಗಳಿಂದ ಪಡೆಯುವ ಬಯೋಮೆಟ್ರಿಕ್ ಮಾಹಿತಿಯನ್ನೇ ಎನ್ಆರ್ಐಗಳಿಂದಲೂ ಪಡೆಯಲಾಗುತ್ತದೆ. ಫೋಟೋ, ಕಣ್ಣಿನ ಸ್ಕ್ಯಾನ್, ಫಿಂಗರ್ ಪ್ರಿಂಟ್ಗಳನ್ನು ಪಡೆಯಲಾಗುತ್ತದೆ.
ಎನ್ಆರ್ಐಗಳು ಆಧಾರ್ ಪಡೆಯಲು ಅಗತ್ಯ ದಾಖಲೆಗಳು
- ಭಾರತದ ಪಾಸ್ಪೋರ್ಟ್ ಹೊಂದಿರಬೇಕು.
- ಭಾರತದ ಮೊಬೈಲ್ ನಂಬರ್ ಇರಬೇಕು
- ಇಮೇಲ್ ನಂಬರ್ ಕೊಡಬೇಕು
ಎನ್ಆರ್ಐಗಳ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ಗೆ ಆಧಾರ್ ಕಾರ್ಡ್ ಕೊಡಲಾಗುವುದಿಲ್ಲ. ಹೀಗಾಗಿ, ಭಾರತದ ಸಕ್ರಿಯ ಮೊಬೈಲ್ ನಂಬರ್ ಇರಬೇಕು.
ಇದನ್ನೂ ಓದಿ: RBI: ಎಫ್ಡಿ ಪ್ರೀಮೆಚ್ಯೂರ್ ವಿತ್ಡ್ರಾಗೆ 15 ಲಕ್ಷ ರೂ ಇದ್ದ ಕನಿಷ್ಠ ಠೇವಣಿ 1 ಕೋಟಿ ರೂಗೆ ಏರಿಕೆ
ಆಧಾರ್ಗೆ ಎನ್ರೋಲ್ ಆಗುವ ಕ್ರಮ
ಇದು ಭಾರತೀಯರಿಗೆ ಇರುವ ರೀತಿಯದ್ದೇ ಕ್ರಮಗಳಿರುತ್ತವೆ. ಆಧಾರ್ ಮಾಡಿಸಬೇಕೆನ್ನುವ ಎನ್ಆರ್ಐಗಳು ಭಾರತದ ಯಾವುದಾದರೂ ಆಧಾರ್ ಕೇಂದ್ರಕ್ಕೆ ಹೋಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.
- ಆಧಾರ್ ಕೇಂದ್ರದಲ್ಲಿ ಸಿಗುವ ಎನ್ರೋಲ್ಮೆಂಟ್ ಫಾರ್ಮ್ನಲ್ಲಿ ವಿವರವನ್ನು ಭರ್ತಿ ಮಾಡಬೇಕು.
- ಎನ್ಆರ್ಐ ಆಗಿ ಎನ್ರೋಲ್ ಮಾಡುವಂತೆ ಆಧಾರ್ ಕೇಂದ್ರದಲ್ಲಿರುವ ನಿರ್ವಾಹಕರಿಗೆ ತಿಳಿಸಬೇಕು.
- ನಿಮ್ಮ ಗುರುತಿನ ದಾಖಲೆಯಾಗಿ ಪಾಸ್ಪೋರ್ಟ್ ನೀಡಬಹುದು.
- ಜನನ ಮತ್ತು ವಿಳಾಸದ ದಾಖಲೆಯಾಗಿ ಪಾಸ್ಪೋರ್ಟ್ ಅನ್ನೇ ನೀಡಬಹುದು. ಅವುಗಳಿಗೆ ಬೇರೆ ದಾಖಲೆಗಳಿದ್ದರೂ ಕೊಡಬಹುದು.
- ಇದಾದ ಬಳಿಕ ಬಯೋಮೆಟ್ರಿಕ್ ಮಾಹಿತಿಯನ್ನು ನಿಮ್ಮಿಂದ ಪಡೆಯಲಾಗುತ್ತದೆ.
ಇದನ್ನೂ ಓದಿ: ಬಾಪ್ ಆಫ್ ಚಾರ್ಟ್: ಷೇರುಮಾರುಕಟ್ಟೆಯ ಕಿಂಗ್ ಮೇಕರ್ ಆಗುತ್ತೇನೆಂದು ಜನರಿಗೆ ಮಂಕುಬೂದಿ ಹಾಕಿರುವ ನಸೀರ್ ಅನ್ಸಾರಿ ಕಥೆ ಕೇಳಿ..!
ಎನ್ರೋಲ್ಮೆಂಟ್ ಮುಗಿದ ಬಳಿಕ ನಿಮಗೆ ಅಕ್ನಾಲೆಜ್ಮೆಂಟ್ ಸ್ಲಿಪ್ ಅಥವಾ ಎನ್ರೋಲ್ಮೆಂಟ್ ಸ್ಲಿಪ್ ಕೊಡಲಅಗುತ್ತದೆ. ಇದರಲ್ಲಿ 15 ಅಂಕಿಗಳ ಎನ್ರೋಲ್ಮೆಂಟ್ ಐಡಿ ಮತ್ತು ದಿನಾಂಕದ ಮುದ್ರೆ ಇರುತ್ತದೆ.
ಇನ್ನು, ಅನಿವಾಸಿ ಭಾರತೀಯರ ಮಕ್ಕಳಿಗೂ ಆಧಾರ್ ಮಾಡಿಸಬಹುದು. ಈ ಮಕ್ಕಳು ಎನ್ಆರ್ಐ ಆಗಿದ್ದರೆ ಪಾಸ್ಪೋರ್ಟ್ ದಾಖಲೆ ಒದಗಿಸುವುದು ಕಡ್ಡಾಯ. ಹಾಗೆಯೇ, ಪೋಷಕರು ದೃಢೀಕರಣ ನೀಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ