RBI: ಎಫ್​ಡಿ ಪ್ರೀಮೆಚ್ಯೂರ್ ವಿತ್​ಡ್ರಾಗೆ 15 ಲಕ್ಷ ರೂ ಇದ್ದ ಕನಿಷ್ಠ ಠೇವಣಿ 1 ಕೋಟಿ ರೂಗೆ ಏರಿಕೆ

Fixed Deposit Premature Withdrawal: ಇಲ್ಲಿಯವರೆಗೆ ಬ್ಯಾಂಕುಗಳು ತಮ್ಮಲ್ಲಿನ 15 ಲಕ್ಷ ರೂವರೆಗಿನ ಠೇವಣಿಗಳನ್ನು ಅವಧಿಗೆ ಮುನ್ನ ಪ್ರೀಮೆಚ್ಯೂರ್ ಆಗಿ ಹಿಂಪಡೆಯಲು ಅವಕಾಶ ನೀಡಿದ್ದವು. ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಯಾದರೆ ಅವಧಿ ಮುಗಿಯುವವರೆಗೂ ವಿತ್​ಡ್ರಾ ಮಾಡಲು ಅವಕಾಶ ಇರುತ್ತಿರಲಿಲ್ಲ. ಈಗ ಈ ಕನಿಷ್ಠ ಮೊತ್ತವನ್ನು 1 ಕೋಟಿ ರುಪಾಯಿಗೆ ಏರಿಸಲಾಗಿದೆ. ಈ ನಿಯಮ ಬದಲಾವಣೆಯು ಎಲ್ಲಾ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ತತ್​ಕ್ಷಣದಿಂದಲೇ (ಅ. 26) ಅನ್ವಯ ಆಗುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

RBI: ಎಫ್​ಡಿ ಪ್ರೀಮೆಚ್ಯೂರ್ ವಿತ್​ಡ್ರಾಗೆ 15 ಲಕ್ಷ ರೂ ಇದ್ದ ಕನಿಷ್ಠ ಠೇವಣಿ 1 ಕೋಟಿ ರೂಗೆ ಏರಿಕೆ
ಫಿಕ್ಸೆಡ್ ಡೆಪಾಸಿಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 27, 2023 | 3:54 PM

ನವದೆಹಲಿ, ಅಕ್ಟೋಬರ್ 27: ಬ್ಯಾಂಕುಗಳಲ್ಲಿನ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಮುಂಚಿತವಾಗಿ ವಿತ್​ಡ್ರಾ ಮಾಡಿಕೊಳ್ಳುವ ನಿಯಮದಲ್ಲಿ ಆರ್​ಬಿಐ ಬದಲಾವಣೆ ಮಾಡಿದೆ. 15 ಲಕ್ಷ ರೂ ಇದ್ದ ಕನಿಷ್ಠ ಮೊತ್ತವನ್ನು 1 ಕೋಟಿ ರೂಗೆ ಏರಿಸಲಾಗಿದೆ. ಅಂದರೆ, ಒಂದು ಕೋಟಿ ರೂವರೆಗಿನ ಫಿಕ್ಸೆಡ್ ಡೆಪಾಸಿಟ್ ಅನ್ನು ಪ್ರೀಮೆಚ್ಯೂರ್ ಆಗಿ ಹಿಂಪಡೆಯಲು ಸಾಧ್ಯವಾಗಿಸುತ್ತದೆ ಈ ನಿಯಮ ಬದಲಾವಣೆ. ಅಕ್ಟೋಬರ್ 26ರಂದು ಆರ್​ಬಿಐ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಈ ನಿಯಮ ಬದಲಾವಣೆ ತತ್​ಕ್ಷಣದಿಂದಲೇ ಅನ್ವಯ ಆಗುತ್ತದೆ ಎಂದು ಹೇಳಿದೆ.

ಇಲ್ಲಿಯವರೆಗೆ ಬ್ಯಾಂಕುಗಳು ತಮ್ಮಲ್ಲಿನ 15 ಲಕ್ಷ ರೂವರೆಗಿನ ಠೇವಣಿಗಳನ್ನು ಅವಧಿಗೆ ಮುನ್ನ ಪ್ರೀಮೆಚ್ಯೂರ್ ಆಗಿ ಹಿಂಪಡೆಯಲು ಅವಕಾಶ ನೀಡಿದ್ದವು. ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಯಾದರೆ ಅವಧಿ ಮುಗಿಯುವವರೆಗೂ ವಿತ್​ಡ್ರಾ ಮಾಡಲು ಅವಕಾಶ ಇರುತ್ತಿರಲಿಲ್ಲ. ಈಗ ಈ ಕನಿಷ್ಠ ಮೊತ್ತವನ್ನು 1 ಕೋಟಿ ರುಪಾಯಿಗೆ ಏರಿಸಲಾಗಿದೆ.

ಇದನ್ನೂ ಓದಿ: Capital gain Tax: ನೀವು ಮನೆ ಖರೀದಿಸಿ ಲಾಭಕ್ಕೆ ಮಾರಿದರೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಲೆಕ್ಕಚಾರ

‘ನಾನ್ ಕ್ಯಾಲಬಲ್ ಟರ್ಮ್ ಡೆಪಾಸಿಟ್​ಗಳಲ್ಲಿ ಕನಿಷ್ಠ ಮೊತ್ತವನ್ನು 15 ಲಕ್ಷದಿಂದ 1 ಕೋಟಿ ರೂಗೆ ಏರಿಕೆ ಮಾಡಲಾಗಿದೆ. ಒಂದು ಕೋಟಿ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಟರ್ಮ್ ಡೆಪಾಸಿಟ್​​ಗಳಿಗೆ ಪ್ರೀಮೆಚ್ಯೂರ್ ವಿತ್​ಡ್ರಾಯಲ್ ಫೆಸಿಲಿಟಿ ಇರುತ್ತದೆ,’ ಎಂದು ಆರ್​ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಈ ನಿಯಮ ಬದಲಾವಣೆಯು ಎಲ್ಲಾ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ತತ್​ಕ್ಷಣದಿಂದಲೇ (ಅ. 26) ಅನ್ವಯ ಆಗುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ತಿಂಗಳಿಗೆ 5,000 ರೂ ಪಿಂಚಣಿ ಸಿಗಲು ಎಷ್ಟು ಹೂಡಿಕೆ ಬೇಕು?

ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಹೂಡಿಕೆ ಸಾಧನಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಅಥವಾ ಅವಧಿ ಠೇವಣಿ ಪ್ರಮುಖವಾದುದು. ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಶೇ. 7.5ರಿಂದ 8ರವರೆಗೂ ಬಡ್ಡಿ ನೀಡಲಾಗುತ್ತದೆ. ಸಹಕಾರಿ ಬ್ಯಾಂಕುಗಳಲ್ಲಿ ಎಫ್​ಡಿ ಮೇಲೆ ಶೇ. 9ರವರೆಗೂ ಬಡ್ಡಿ ಸಿಗುವುದುಂಟು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ