ಒಂದೇ ವಾರದಲ್ಲಿ 18 ಲಕ್ಷಕೋಟಿ ರೂ ಕಳೆದುಕೊಂಡ ಹೂಡಿಕೆದಾರರು; ಷೇರುಪೇಟೆ ಈ ಪರಿ ಅಲುಗಾಡುತ್ತಿರುವುದೇಕೆ?
Stock Market Shaking: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ ಒಂದು ದಿನದಲ್ಲಿ 900ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡಿದೆ. ನಿನ್ನೆ ದಿನಾಂತ್ಯದಲ್ಲಿ ಈ ಸೂಚ್ಯಂಕ 63,148.15 ಅಂಕಗಳಲ್ಲಿ ಅಂತ್ಯಗೊಂಡಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಒಟ್ಟು ಷೇರುಸಂಪತ್ತು ಬಹಳಷ್ಟು ನಶಿಸಿದೆ. ವರದಿ ಪ್ರಕಾರ ಬಿಎಸ್ಇಯಲ್ಲಿರುವ ಒಟ್ಟು ಷೇರುಸಂಪತ್ತು 324 ಲಕ್ಷಕೋಟಿ ರೂನಿಂದ 306 ಲಕ್ಷಕೋಟಿ ರೂಗೆ ಕುಸಿದಿದೆ. ಅಂದರೆ, ಸುಮಾರು 17,77,622 ಕೋಟಿ ರೂನಷ್ಟು ಷೇರುನಷ್ಟವಾಗಿದೆ.
ನವದೆಹಲಿ, ಅಕ್ಟೋಬರ್ 27: ಭಾರತದ ಷೇರುಪೇಟೆ ಕಳೆದ ಒಂದು ವಾರದಲ್ಲಿ ವಿಪರೀತವಾಗಿ ಅಲುಗಾಡುತ್ತಿದೆ. ಬಹಳಷ್ಟು ಷೇರುಗಳು ಸತತವಾಗಿ ಕುಸಿಯುತ್ತಿವೆ. ಕಳೆದ ಒಂದು ವಾರದಲ್ಲಂತೂ ಷೇರುಪೇಟೆ (share market) ಕುಸಿತ ಗಮನಾರ್ಹವಾಗಿದೆ. ಸತತ ಆರು ದಿನದಲ್ಲಿ ಷೇರುಪೇಟೆಯಲ್ಲಿ ಹೂಡಿಕೆದಾರರು ನಷ್ಟ ಮಾಡಿಕೊಂಡ ಹಣ 17.7 ಲಕ್ಷಕೋಟಿ ರೂ ಎನ್ನಲಾಗಿದೆ. ಇಸ್ರೇಲ್ ಪ್ಯಾಲಸ್ಟೀನ್ ಬಿಕ್ಕಟ್ಟು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜಾಗತಿಕವಾಗಿ ಯಾವುದೇ ಬಿಕ್ಕಟ್ಟು ಉದ್ಭವವಾದರೂ ಈ ರೀತಿ ಷೇರುಪೇಟೆಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವುದು ಅಸಹಜವೇನಲ್ಲ. ಮುಂದಿನ ದಿನಗಳಲ್ಲಿ ಷೇರುಪೇಟೆ ಸಹಜ ಸ್ಥಿತಿಗೆ ಮರಳಬಹುದು ಎಂದು ತಜ್ಞರು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ ಒಂದು ದಿನದಲ್ಲಿ 900ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡಿದೆ. ನಿನ್ನೆ ದಿನಾಂತ್ಯದಲ್ಲಿ ಈ ಸೂಚ್ಯಂಕ 63,148.15 ಅಂಕಗಳಲ್ಲಿ ಅಂತ್ಯಗೊಂಡಿದೆ. ಅಕ್ಟೋಬರ್ 17ರ ನಂತರ ಈ ಸೂಚ್ಯಂಕ ಶೇ. 4.93ರಷ್ಟು ಕುಸಿತ ಕಂಡಿದೆ. 3,279 ಅಂಕಗಳನ್ನು ಕಳೆದುಕೊಂಡಿದೆ.
ಇದನ್ನೂ ಓದಿ: ವನ್ಯಜೀವಿ ಕಳ್ಳಸಾಗಾಣಿಕೆ ಭಾರೀ ದೊಡ್ಡ ಬಿಸಿನೆಸ್; ವರ್ಷದಲ್ಲಿ ಎಷ್ಟು ಅಕ್ರಮ ಟ್ರೇಡಿಂಗ್ ನಡೆಯುತ್ತೆ ಗೊತ್ತಾ?
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಒಟ್ಟು ಷೇರುಸಂಪತ್ತು ಬಹಳಷ್ಟು ನಶಿಸಿದೆ. ವರದಿ ಪ್ರಕಾರ ಬಿಎಸ್ಇಯಲ್ಲಿರುವ ಒಟ್ಟು ಷೇರುಸಂಪತ್ತು 324 ಲಕ್ಷಕೋಟಿ ರೂನಿಂದ 306 ಲಕ್ಷಕೋಟಿ ರೂಗೆ ಕುಸಿದಿದೆ. ಅಂದರೆ, ಸುಮಾರು 17,77,622 ಕೋಟಿ ರೂನಷ್ಟು ಷೇರುನಷ್ಟವಾಗಿದೆ.
ಬಿಎಸ್ಇನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಪೈಕಿ 2,232 ಸಂಸ್ಥೆಗಳು ಕುಸಿತ ಕಂಡಿವೆ. ಮಹೀಂದ್ರ ಅಂಡ್ ಮಹೀಂದ್ರ ಅತಿಹೆಚ್ಚು ಹಿನ್ನಡೆ ಕಂಡಿದೆ. ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್ಸರ್ವ್, ನೆಸ್ಲೆ, ಟಾಟಾ, ಜೆಎಸ್ಡಬ್ಲ್ಯು ಸ್ಟೀಲ್, ಟೆಕ್ ಮಹೀಂದ್ರ, ಎಚ್ಡಿಎಫ್ಸಿ ಬ್ಯಾಂಕ್, ಟಾಟಾ ಮೋಟಾರ್ಸ್, ಎಲ್ ಅಂಡ್ ಟಿ ಸಂಸ್ಥೆಗಳ ಷೇರುಗಳು ಹೆಚ್ಚು ನಷ್ಟ ಮಾಡಿಕೊಂಡಿವೆ.
ಇಸ್ರೇಲ್ ಯುದ್ಧ ಮಾತ್ರವಾ ಈ ಹಿನ್ನಡೆಗೆ ಕಾರಣ?
ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಯುದ್ಧ ನಿರೀಕ್ಷೆಮೀರಿದ ರೀತಿಯಲ್ಲಿ ದೀರ್ಘ ಬಿಕ್ಕಟ್ಟು ಮುಂದುವರಿಯುತ್ತಿರುವುದು ಷೇರು ಪೇಟೆಯ ಅಲುಗಾಟಕ್ಕೆ ಒಂದು ಕಾರಣವಾಗಿದೆ. ಆದರೆ ಹೂಡಿಕೆದಾರರು ಬಂಡವಾಳ ಹಿಂತೆಗೆಯಲು ಅದೊಂದೇ ಕಾರಣವಲ್ಲ. ಅಮೆರಿಕದ ಮಾರುಕಟ್ಟೆಯಲ್ಲಿ ಬಾಂಡ್ ಮೌಲ್ಯ ಹೆಚ್ಚುತ್ತಿರುವುದು ಇನ್ನೊಂದು ಪ್ರಮುಖ ಕಾರಣ. ಅಮೆರಿಕದ ಬಾಂಡ್ಗಳಲ್ಲಿ ಹೆಚ್ಚಿನ ರಿಟರ್ನ್ ಸಿಗುವ ನಿರೀಕ್ಷೆಯಲ್ಲಿ ಬಹಳಷ್ಟು ಎಫ್ಪಿಐಗಳು ಷೇರುಪೇಟೆಯಿಂದ ತಮ್ಮ ಹೂಡಿಕೆ ಹಿಂಪಡೆದು ಬಾಂಡ್ಗಳಲ್ಲಿ ಇನ್ವೆಸ್ಟ್ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ