ಮೋದಿ ಪ್ರತಿದಿನ 16 ಗಂಟೆ ಕೆಲಸ ಮಾಡುತ್ತಾರೆ, ನಾರಾಯಣ ಮೂರ್ತಿ ಹೇಳಿಕೆ ಬೆಂಬಲಸಿದ ಸಜ್ಜನ್ ಜಿಂದಾಲ್
ಭಾರತದಲ್ಲಿ ಯುವಕರು 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಅವರು ಬೆಂಬಲಿಸಿದ್ದಾರೆ. ಜೆಎಸ್‌ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ನಾರಾಯಣ ಮೂರ್ತಿ ಅವರು ಈ ಹೇಳಿಯನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುವೇ ಎಂದು ಹೇಳಿದ್ದಾರೆ.
ಭಾರತದಲ್ಲಿ ಯುವಕರು 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayan Murthy) ಅವರ ಹೇಳಿಕೆಯನ್ನು ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಅವರು ಬೆಂಬಲಿಸಿದ್ದಾರೆ. ಜೆಎಸ್‌ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ನಾರಾಯಣ ಮೂರ್ತಿ ಅವರು ಈ ಹೇಳಿಯನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುವೇ ಎಂದು ಹೇಳಿದ್ದಾರೆ. ಭಾರತದಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಇಂದಿನ ದಿನ ಕಾಲಘಟ್ಟದಲ್ಲಿ ವಾರದಲ್ಲಿ ಐದು ದಿನ ದುಡಿಯುವ ಯುವಕರ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದಿನದ 14-16 ಕೆಲಸ ಮಾಡುತ್ತಾರೆ. ಇನ್ನು ನನ್ನ ತಂದೆ ವಾರದ ಏಳು ದಿನವು 12-14 ದಿನ ದುಡಿಯುತ್ತಾರೆ, ನಾನು ದಿನದ 10-12 ಗಂಟೆಗಳ ದಿನ ಕಾಲ ಕೆಲಸ ಮಾಡುತ್ತೇನೆ ಎಂದು ಸಜ್ಜನ್ ಜಿಂದಾಲ್ ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಬರೆದುಕೊಂಡಿದ್ದಾರೆ.
ನಾವು ನಮ್ಮ ಕೆಲಸದಲ್ಲಿ ಹಾಗೂ ದೇಶದ ನಿರ್ಮಾಣದಲ್ಲಿ ಉತ್ಸಾಹಕವಾದ ಗುರಿಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. ಇದು ಮಾತ್ರವಲ್ಲದೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಭಾರತ ಪರಿಸ್ಥಿತಿ ಮತ್ತು ಸವಾಲುಗಳು ಅನನ್ಯವಾಗಿದೆ ಎಂದು ಸಜ್ಜನ್ ಜಿಂದಾಲ್ ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವಾರದಲ್ಲಿ 4 ಅಥವಾ 5 ದಿನಗಳು ಕೆಲಸ ಮಾಡುತ್ತಾರೆ, ಏಕೆಂದರೆ ಅವರು ತಲೆಮಾರುಗಳು ಭವಿಷ್ಯಕ್ಕೆ ಹೆಚ್ಚಿನ ಸಮಯವನ್ನು ನೀಡಿ, ತಮ್ಮ ದೇಶವನ್ನು ಅಭಿವೃದ್ದಿ ಮಾಡಿದ್ದಾರೆ. ಅದಕ್ಕೆ ಈಗಿನ ತಲೆಮಾರು 4 ಅಥವಾ 5 ದಿನ ಮಾತ್ರ ಕೆಲಸ ಮಾಡುತ್ತಾರೆ ಎಂದು ಸಜ್ಜನ್ ಜಿಂದಾಲ್ ಹೇಳಿದ್ದಾರೆ.
ಇತರ ದೇಶಗಳಿಗೆ ಒಲಿಸಿದರೆ ಭಾರತದಲ್ಲಿ ಯುವ ಶಕ್ತಿ ಹೆಚ್ಚಿದೆ. ನಮ್ಮ ದೇಶದ ಯುವ ಪೀಳಿಗೆ ಭಾರತವನ್ನು ಸೂಪರ್ ಪವಾರ್ ಮಾಡಲು ವಿರಾಮಕ್ಕಿಂತ ಕೆಲಸ ಮಾಡವುದು ಅಗತ್ಯ ಇದೆ ಎಂದು ಹೇಳಿದರು. ದೇಶದ ಅಭಿವೃದ್ಧಿಯಾಗುತ್ತಿದ್ದಂತೆ ನಮ್ಮ ಸೌಕರ್ಯಗಳು ಹೆಚ್ಚಾಗುತ್ತದೆ. ಒಂದು ವೇಳೆ ಯುವಕ ತಮ್ಮ ತ್ಯಾಗ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ ಖಂಡಿತ ಭಾರತ 2042ರ ವೇಳೆಗೆ ಸೂಪರ್ ಪವಾರ್ ರಾಷ್ಟ್ರವಾಗುವುದು ಖಂಡಿತ ಎಂದು ಸಜ್ಜನ್ ಜಿಂದಾಲ್ ಹೇಳಿದ್ದಾರೆ.
ಇದನ್ನೂ ಓದಿ:ನಾರಾಯಣ ಮೂರ್ತಿ ದಂಪತಿ ಜೊತೆ ಉದ್ಯಮ, ಜೀವನ ಪಯಣ ಕುರಿತು ಮುಕ್ತ ಮಾತು
ಇನ್ನು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗೆ ಸಂವಾದ ನಡೆಸುವ ಸಂದರ್ಭದಲ್ಲಿ ಭಾರತ ಚೀನಾ ಮತ್ತು ಜಪಾನ್ ಜತೆಗೆ ಸ್ಪರ್ಧೆ ಮಾಡಬೇಕಂದರೆ ಭಾರತ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಜಪಾನ್ ಮತ್ತು ಜರ್ಮನಿ ಜನರು ಎರಡನೇ ಮಹಾಯುದ್ಧದ ನಂತರ ದೇಶಕ್ಕಾಗಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಭಾರತವು ಯುವಶಕ್ತಿಯನ್ನು ಹೊಂದಿದೆ. ನಮ್ಮ ಯುವಕರು ಕೂಡ ನಮ್ಮ ಆರ್ಥಿಕತೆಯ ಸಲುವಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಇನ್ನು ನಾರಾಯಣ ಮೂರ್ತಿ ಅವರ ಈ ಮಾತನ್ನು ಓಲಾ ಸಿಇಒ ಭವಿಶ್ ಅಗರ್ವಾಲ್ ಕೂಡ ಒಪ್ಪಿಕೊಂಡಿದ್ದಾರೆ. ಯುವಕರು ಕಡಿಮೆ ಕೆಲಸ ಮಾಡುವ ಮತ್ತು ಮೋಜು ಮಸ್ತಿ ಮಾಡುವ ಸಮಯವಲ್ಲ. ಮುಂದಿನ ತಲೆಮಾರಿ ಒಳ್ಳೆಯ ಭವಿಷ್ಯವನ್ನು ನಿರ್ಮಾಣ ಮಾಡುವುದು ನಮ್ಮ ಯುವಕರ ಕೆಲಸವಾಗಿದೆ ಎಂದು ಹೇಳಿದ್ದಾರೆ. ಇನ್ನು ಎಕ್ಸ್ನಲ್ಲಿ ನಾರಾಯಣ ಮೂರ್ತಿ ಅವರು ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ