ಇ ರುಪಾಯಿ ವಹಿವಾಟು ನಡೆಸಿದರೆ ಸಿಗುತ್ತವೆ ಕ್ಯಾಷ್​ಬ್ಯಾಕ್, ರಿವಾರ್ಡ್​ಗಳು..! ಬ್ಯಾಂಕುಗಳಿಂದ ಭರ್ಜರಿ ಆಫರ್

Cashback for using erupee: ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್​ಗಳನ್ನು ಬಳಸಿದರೆ ಕ್ಯಾಷ್​ಬ್ಯಾಕ್, ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಪ್ರೋತ್ಸಾಹಕಗಳು ಸಿಗುವ ರೀತಿಯಲ್ಲಿ ಡಿಜಿಟಲ್ ಕರೆನ್ಸಿ ಬಳಕೆಗೂ ನೀಡುತ್ತಿವೆಯಂತೆ. ಇದು ಸರ್ಕಾರದಿಂದ ಕೊಡಲಾಗುತ್ತಿರುವ ಉಡುಗೊರೆಗಳಲ್ಲ, ಬ್ಯಾಂಕುಗಳೇ ಸ್ವಪ್ರೇರಣೆಯಿಂದ ತಮ್ಮ ಗ್ರಾಹಕರಿಗೆ ಇನ್ಸೆಂಟಿವ್ ನೀಡುತ್ತಿವೆಯಂತೆ. ಈ ರೀತಿ ಗ್ರಾಹಕರನ್ನು ಇರುಪಾಯಿ ಬಳಕೆಗೆ ಉತ್ತೇಜಿಸುತ್ತಿರುವ ಬ್ಯಾಂಕುಗಳಲ್ಲಿ ಎಚ್​ಡಿಎಫ್​ಸಿ ಮುಂಚೂಣಿಯಲ್ಲಿದೆ. ಯೆಸ್ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕುಗಳೂ ಕೂಡ ರಿವಾರ್ಡ್ ಪಾಯಿಂಟ್ ಇತ್ಯಾದಿ ಉತ್ತೇಜಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿವೆ. ಐಸಿಐಸಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮೊದಲಾದ ಇನ್ನೂ ಕೆಲ ಬ್ಯಾಂಕುಗಳು ಇನ್ಸೆಂಟಿವ್​ಗಳನ್ನು ನೀಡುತ್ತಿವೆ.

ಇ ರುಪಾಯಿ ವಹಿವಾಟು ನಡೆಸಿದರೆ ಸಿಗುತ್ತವೆ ಕ್ಯಾಷ್​ಬ್ಯಾಕ್, ರಿವಾರ್ಡ್​ಗಳು..! ಬ್ಯಾಂಕುಗಳಿಂದ ಭರ್ಜರಿ ಆಫರ್
ಇ ರುಪಾಯಿ
Follow us
|

Updated on: Oct 29, 2023 | 3:50 PM

ಆರ್​ಬಿಐ ರೂಪಿಸಿರುವ ಡಿಜಿಟಲ್ ರುಪಾಯಿ ಅಥವಾ ಇ ರುಪಾಯಿ ಅಥವಾ ಸಿಬಿಡಿಸಿಯನ್ನು (central bank digital currency) ಇನ್ನಷ್ಟು ವ್ಯಾಪಕವಾಗಿ ಬಳಕೆಯಾಗುವಂತೆ ಮಾಡಲು ಬ್ಯಾಂಕುಗಳು ಕಸರತ್ತು ನಡೆಸುತ್ತಿವೆ. ಕೆಲ ಬ್ಯಾಂಕುಗಳು ಡಿಜಿಟಲ್ ಕರೆನ್ಸಿ ಬಳಸುವವರಿಗೆ ವಿವಿಧ ಪ್ರೋತ್ಸಾಹಕಗಳನ್ನು ನೀಡುತ್ತಿರುವುದು ಕಂಡುಬಂದಿದೆ. ರಾಯ್ಟರ್ಸ್ ವರದಿ ಪ್ರಕಾರ, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್​ಗಳನ್ನು ಬಳಸಿದರೆ ಕ್ಯಾಷ್​ಬ್ಯಾಕ್, ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಪ್ರೋತ್ಸಾಹಕಗಳು ಸಿಗುವ ರೀತಿಯಲ್ಲಿ ಡಿಜಿಟಲ್ ಕರೆನ್ಸಿ ಬಳಕೆಗೂ ನೀಡುತ್ತಿವೆಯಂತೆ. ಇದು ಸರ್ಕಾರದಿಂದ ಕೊಡಲಾಗುತ್ತಿರುವ ಉಡುಗೊರೆಗಳಲ್ಲ, ಬ್ಯಾಂಕುಗಳೇ ಸ್ವಪ್ರೇರಣೆಯಿಂದ ತಮ್ಮ ಗ್ರಾಹಕರಿಗೆ ಇನ್ಸೆಂಟಿವ್ ನೀಡುತ್ತಿವೆಯಂತೆ.

ಈ ರೀತಿ ಗ್ರಾಹಕರನ್ನು ಇರುಪಾಯಿ ಬಳಕೆಗೆ ಉತ್ತೇಜಿಸುತ್ತಿರುವ ಬ್ಯಾಂಕುಗಳಲ್ಲಿ ಎಚ್​ಡಿಎಫ್​ಸಿ ಮುಂಚೂಣಿಯಲ್ಲಿದೆ. ಯೆಸ್ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕುಗಳೂ ಕೂಡ ರಿವಾರ್ಡ್ ಪಾಯಿಂಟ್ ಇತ್ಯಾದಿ ಉತ್ತೇಜಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿವೆ. ಐಸಿಐಸಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮೊದಲಾದ ಇನ್ನೂ ಕೆಲ ಬ್ಯಾಂಕುಗಳು ಇನ್ಸೆಂಟಿವ್​ಗಳನ್ನು ನೀಡುತ್ತಿವೆ.

ಆರ್​ಬಿಐ ತನ್ನ ಡಿಜಿಟಲ್ ಕರೆನ್ಸಿಯ ಬಳಕೆ ಹೆಚ್ಚಿಸಲು ಮತ್ತು ಜನಪ್ರಿಯವಾಗಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ತಿಂಗಳು (ಸೆಪ್ಟೆಂಬರ್) ಇ ರುಪಾಯಿಯನ್ನು ಯುಪಿಐ ಲಿಂಕ್ ಮಾಡುವುದು ಸೇರಿದಂತೆ ಹೊಸ ಫೀಚರ್​ಗಳನ್ನು ಆರ್​ಬಿಐ ಪರಿಚಯಿಸಿತ್ತು. ಅದರ ಜೊತೆಗೆ ಈಗ ಬ್ಯಾಂಕುಗಳಿಂದ ಪ್ರತ್ಯೇಕವಾಗಿ ಮತ್ತು ಸ್ವಯಂಪ್ರೇರಿತವಾಗಿ ಕ್ಯಾಷ್​ಬ್ಯಾಕ್, ಇನ್ಸೆಂಟಿವ್ ಇತ್ಯಾದಿಗಳು ಸಿಗುತ್ತಿರುವುದು ಗಮನಾರ್ಹ.

ಇದನ್ನೂ ಓದಿ: ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ

ಏನಿದು ಇ ರುಪಾಯಿ?

ಇ ರುಪಾಯಿ ಎಂಬುದು ನಗದು ಹಣದ ಎಲೆಕ್ಟ್ರಾನಿಕ್ ರೂಪ. ನಗದು ಹಣ ಮತ್ತು ಡಿಜಿಟಲ್ ಕರೆನ್ಸಿ ಎರಡರ ಮೌಲ್ಯವೂ ಸಮಾನವಾದುದು. 2022ರ ಡಿಸೆಂಬರ್ 1ರಂದು ಆರ್​ಬಿಐನ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಥವಾ ಇ ರುಪಾಯಿ ಚಾಲನೆಗೊಂಡಿತ್ತು. ಕೆಲ ಆಯ್ದ ನಗರಗಳಲ್ಲಿ ಮತ್ತು ಆಯ್ದ ಬ್ಯಾಂಕುಗಳಲ್ಲಿ ಆಯ್ದ ಗ್ರಾಹರಿಗೆ ಇದರ ಪ್ರಾಯೋಗಿಕ ಬಳಕೆಯ ಅವಕಾಶ ಕೊಡಲಾಗಿದೆ. ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಕೋಟಕ್ ಮಹೀಂದ್ರ ಬ್ಯಾಂಕುಗಳನ್ನು ಇ ರುಪಾಯಿ ವಿತರಣೆಗೆ ಆರ್​ಬಿಐ ಆಯ್ದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ