ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ; ಜಪಾನೀ ಕಂಪನಿಗಳ ಸಹಯೋಗಕ್ಕೆ ವೇದಾಂತ ಲಿ ಯತ್ನ

Vedanta and Japanese firms: ಸರ್ಕಾರದಿಂದ ಕೈಗೊಳ್ಳಲಾಗಿರುವ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, 100 ಸ್ಮಾರ್ಟ್ ಸಿಟಿ ಮಿಷನ್ ಇತ್ಯಾದಿ ಯೋಜನೆಗಳಿಂದ ಭಾರತದ ವಿವಿಧ ಕ್ಷೇತ್ರಗಳಲ್ಲಿ ಸ್ಥಳೀಯ ತಯಾರಿಕೆ, ಡಿಜಿಟಲೈಸೇಶನ್, ತಂತ್ರಜ್ಞಾನ ಸುಧಾರಣೆ ಇತ್ಯಾದಿಗಳಿಗೆ ಪುಷ್ಟಿ ಸಿಗುತ್ತದೆ. ಪರಿಣಾಮವಾಗಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ ಎಂದು ಹೇಳಿರುವ ವೇದಾಂತ ಸಂಸ್ಥೆ, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ತನ್ನ ಜೊತೆ ಕೈಜೋಡಿಸುವಂತೆ ಜಪಾನೀ ಕಂಪನಿಗಳಿಗೆ ಕರೆ ನೀಡಿದೆ.

ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ; ಜಪಾನೀ ಕಂಪನಿಗಳ ಸಹಯೋಗಕ್ಕೆ ವೇದಾಂತ ಲಿ ಯತ್ನ
ವೇದಾಂತ ಸಂಸ್ಥೆ

Updated on: Oct 17, 2023 | 5:19 PM

ನವದೆಹಲಿ, ಅಕ್ಟೋಬರ್ 17: ವೇದಾಂತ ಲಿ ಸಂಸ್ಥೆ (Vedanta ltd) ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕೆಗೆ ಜಪಾನೀ ಕಂಪನಿಗಳೊಂದಿಗೆ ಸಹಭಾಗಿತ್ವ ಪಡೆಯಲು ಯತ್ನಿಸುತ್ತಿದೆ. ತನ್ನೊಂದಿಗೆ ಕೈ ಜೋಡಿಸುವ ಮೂಲಕ ಭಾರತದ ಎಲೆಕ್ಟ್ರಾನಿಕ್ಸ್ ತಯಾರಿಕಾ ಕ್ಷೇತ್ರದ ಕ್ರಾಂತಿಯಲ್ಲಿ ತೊಡಗಿಸಿಕೊಳ್ಳುವಂತೆ ಜಪಾನ್ ಕಂಪನಿಗಳಿಗೆ ವೇದಾಂತ ಸಂಸ್ಥೆ ಕರೆ ನೀಡಿದೆ. ಜಪಾನ್​ನ ರಾಜಧಾನಿ ಟೋಕಿಯೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಜಪಾನೀ ಉದ್ಯಮ ನಾಯಕರ ಸಭೆಯಲ್ಲಿ ವೇದಾಂತ ಸಂಸ್ಥೆಯ ಗ್ಲೋಬಲ್ ಮ್ಯಾನೇಜಿಂಗ್ ಡೈರೆಕ್ಟರ್ ಆಕರ್ಷ್ ಕೆ ಹೆಬ್ಬಾರ್ ಮಾತನಾಡುತ್ತಾ, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳಿಗಿರುವ ಬೇಡಿಕೆಯನ್ನು ಉಲ್ಲೇಖಿಸಿದ್ದಾರೆ.

‘ಸರ್ಕಾರದಿಂದ ಕೈಗೊಳ್ಳಲಾಗಿರುವ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, 100 ಸ್ಮಾರ್ಟ್ ಸಿಟಿ ಮಿಷನ್ ಇತ್ಯಾದಿ ಯೋಜನೆಗಳಿಂದ ಭಾರತದ ವಿವಿಧ ಕ್ಷೇತ್ರಗಳಲ್ಲಿ ಸ್ಥಳೀಯ ತಯಾರಿಕೆ, ಡಿಜಿಟಲೈಸೇಶನ್, ತಂತ್ರಜ್ಞಾನ ಸುಧಾರಣೆ ಇತ್ಯಾದಿಗಳಿಗೆ ಪುಷ್ಟಿ ಸಿಗುತ್ತದೆ. ಪರಿಣಾಮವಾಗಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ,’ ಎಂದು ಆಕರ್ಷ್ ಹೆಬ್ಬಾರ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸಮೀಪ NSure ಗಿಗಾಫ್ಯಾಕ್ಟರಿ ನಿರ್ಮಾಣ; ಬ್ಯಾಟರಿ ಉತ್ಪಾದನಾ ಹಬ್ ಆಗುತ್ತಿದೆ ಕರ್ನಾಟಕ

ವೇದಾಂತ ಸಂಸ್ಥೆ ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಘಟಕ ನಿರ್ಮಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಜಪಾನೀ ಕಂಪನಿಗಳ ಸಹಯೋಗ ಪಡೆಯುವ ಉದ್ದೇಶ ಇರಿಸಲಾಗಿದೆ. ಈ ಘಟಕವೇನಾದರೂ ಆದಲ್ಲಿ ಗುಜರಾತ್ ರಾಜ್ಯದಲ್ಲಿ ಭಾರತದ ಮೊದಲ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಹಬ್ ಶುರುವಾಗಲಿದೆ. ಇದರಿಂದ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಸೃಷ್ಟಿಯ ನಿರೀಕ್ಷೆಯೂ ಇದೆ.

‘ಗುಜರಾತ್​ನ ಈ ಎಲೆಕ್ಟ್ರಾನಿಕ್ಸ್ ತಯಾರಿಕೆಯ ಹಬ್​ನಲ್ಲಿ 80 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡುವ ಅವಕಾಶ ಇದೆ. ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುವ ಜಪಾನೀ ಕಂಪನಿಗಳಿಗೆ ವೇದಾಂತವು ಆಧಾರವಾಗಿರುತ್ತದೆ,’ ಎಂದು ವೇದಾಂತದ ಸೆಮಿಕಂಡಕ್ಟರ್ ಮತ್ತು ಡಿಸ್​ಪ್ಲೇ ವಿಭಾಗದ ಗ್ಲೋಬಲ್ ಎಂಡಿ ಆಗಿರುವ ಆಕರ್ಷ್ ಹೆಬ್ಬಾರ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್

ಜಪಾನ್ ದೇಶದ ಬಗ್ಗೆ ವೇದಾಂತ ಸಂಸ್ಥೆಯ ಆಸಕ್ತಿ ಈಚಿನದ್ದಲ್ಲ. ಭಾರತದಲ್ಲಿ ಸೆಮಿಕಂಡ್ಟರ್ ಮತ್ತು ಗ್ಲಾಸ್ ಡಿಸ್​ಪ್ಲೇ ಉತ್ಪನ್ನಗಳನ್ನು ತಯಾರಿಸುವ ಇಕೋಸಿಸ್ಟಂ ಅನ್ನು ಅಭಿವೃದ್ದಿಪಡಿಸಲು ವೇದಾಂತ ಹಾಗೂ 30 ಜಪಾನೀ ಕಂಪನಿಗಳ ಮಧ್ಯೆ ಕಳೆದ ವರ್ಷ ಒಪ್ಪಂದಗಳಾಗಿದ್ದವು. ವೇದಾಂತ ಗ್ರೂಪ್​ಗೆ ಸೇರಿದ ಏವನ್​ಸ್ಟ್ರಾಟ್​ನ (AvanStrate Inc) ಮುಖ್ಯ ಕಚೇರಿ ಜಪಾನ್​ನಲ್ಲಿಯೇ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ