ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್

AbhiBus Offer for Dasara Season: ದಸರಾದಿಂದ ದೀಪಾವಳಿಯವರೆಗೂ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಹಬ್ಬದ ಸೀಸನ್ ಇದೆ. ಬಹಳಷ್ಟು ಮಂದಿ ರಜೆ ಪಡೆದು ಊರುಗಳಿಗೆ ಮತ್ತು ಪ್ರವಾಸಗಳಿಗೆ ಹೋಗುತ್ತಾರೆ. ಈ ವೇಳೆ ಪ್ರಯಾಣಿಕರ ಸಂಖ್ಯೆ ಅಧಿಕ. ಬಸ್ಸು, ರೈಲು ಮತ್ತು ವಿಮಾನಗಳಿಗೆ ಬೇಡಿಕೆ ಹೆಚ್ಚು. ಈ ಸೀಸನ್​ನಲ್ಲಿ ಕೆಎಸ್ಸಾರ್ಟಿಸಿ ಸೇರಿದಂತೆ ವಿವಿಧ ಸಂಸ್ಥೆಗಳು ಭರ್ಜರಿ ಆಫರ್​ಗಳನ್ನು ಪ್ರಯಾಣಿಕರಿಗೆ ನೀಡುತ್ತಿವೆ. ಈ ಬಗ್ಗೆ ಒಂದು ವರದಿ.

ಅಭಿಬಸ್ 1 ರೂ ಟಿಕೆಟ್; ಕೆಎಸ್ಸಾರ್ಟಿಸಿ ದಸರಾ ಕೊಡುಗೆ; ಆಂಧ್ರ ಬಸ್ ಡಿಸ್ಕೌಂಟ್; ಏರ್ ಇಂಡಿಯಾ ಫ್ಲೈಟ್ ಆಫರ್
ಬಸ್ ಪ್ರಯಾಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 17, 2023 | 1:02 PM

ಹಬ್ಬದ ಸೀಸನ್ ನಡೆಯುತ್ತಿದೆ. ದಸರಾ ಹಬ್ಬ ಚಾಲನೆಯಲ್ಲಿದೆ. ದೀಪಾವಳಿ ಮುಗಿಯುವವರೆಗೂ ಭಾರತೀಯರಿಗೆ ಹಬ್ಬದ ಸಡಗರ, ಗಡಿಬಿಡಿ, ಓಡಾಟ ಇದ್ದೇ ಇರುತ್ತದೆ. ಊರಿಗೆ ಹೋಗಿ ಬರುವವರ ಸಂಖ್ಯೆ ಈ ಅವಧಿಯಲ್ಲಿ ಹೆಚ್ಚು. ಹಬ್ಬದ ಸೀಸನ್​ನಲ್ಲಿ (festival season) ಶಾಪಿಂಗ್ ಜೊತೆಗೆ ಊರಿಗೆ ಹೋಗಿಬರುವವರ ಸಂಖ್ಯೆ ಹೆಚ್ಚು. ಅಂತೆಯೇ, ಬಸ್ಸು, ರೈಲು ಮತ್ತು ವಿಮಾನಗಳಿಗೆ ಈ ಅವಧಿಯಲ್ಲಿ ಬೇಡಿಕೆ ಹೆಚ್ಚು. ಶಾಪಿಂಗ್​ನಲ್ಲಿ ವ್ಯಾಪಾರ ಹೆಚ್ಚಿದಂತೆ ಡಿಸ್ಕೌಂಟ್ ಸಿಗುತ್ತದೆ. ಆದರೆ, ಸಾರಿಗೆ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ. ಇಲ್ಲಿ ಟಿಕೆಟ್ ಬೆಲೆ ದುಬಾರಿ ಆಗುತ್ತದೆ. ಇಂಥ ಸಂದರ್ಭದಲ್ಲಿ ಕೆಲ ಸಂಸ್ಥೆಗಳು ಗ್ರಾಹಕರಿಗಾಗಿ ಕೆಲ ಕೊಡುಗೆ ನೀಡುತ್ತವೆ. ಆನ್​ಲೈನ್ ಬಸ್ ಟಿಕೆಟ್ ಪ್ಲಾಟ್​ಫಾರ್ಮ್ ಎನಿಸಿರುವ ಅಭಿಬಸ್ (AbhiBus) ಭರ್ಜರಿ ಘೋಷಣೆ ಮಾಡಿ ಗಮನ ಸೆಳೆದಿದೆ.

ಅಭಿಬಸ್; ಎಲ್ಲೇ ಹೋಗಿ 1 ರೂ ಟಿಕೆಟ್

ಬಸ್ ಟಿಕೆಟ್ ಬುಕಿಂಗ್ ಆ್ಯಪ್ ಅಭಿಬಸ್ ಈ ಬಾರಿ ಹಬ್ಬದ ಸೀಸನ್​ಗಾಗಿ ಸಖತ್ ಗಿಫ್ಟ್ ಪ್ರಕಟಿಸಿದೆ. ಯಾವುದೇ ಸ್ಥಳಕ್ಕೆ ಟಿಕೆಟ್ ಬುಕ್ ಮಾಡಿ, ಬೆಲೆ ಕೇವಲ 1 ರೂ ಮಾತ್ರ. ಅಕ್ಟೋಬರ್ 19ರಿಂದ ಅಕ್ಟೋಬರ್ 25ರವರೆಗೆ ಏಳು ದಿನಗಳವರೆಗೆ ಮಾತ್ರ ಅವಕಾಶ.

ಇದನ್ನೂ ಓದಿ: ಕೇವಲ 699 ರುಪಾಯಿಗೆ 10 ಸಿನಿಮಾ ನೋಡಿ; ಪಿವಿಆರ್ ಐನಾಕ್ಸ್​ನಿಂದ ಆಕರ್ಷಕ ಸಬ್​ಸ್ಕ್ರಿಪ್ಷನ್ ಆಫರ್

ಕೆಎಸ್ಸಾರ್ಟಿಸಿ ದಸರಾ ಆಫರ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಸರಾ ಪ್ರಯುಕ್ತ ವಿಶೇಷ ದರ್ಶನ ಪ್ಯಾಕೇಜ್ ನಡೆಸುತ್ತಿದೆ. ಧಾರ್ಮಿಕ ಸ್ಥಳಗಳ ದರ್ಶನ ಮಾಡಿಸಲಾಗುತ್ತಿದೆ. ಪಂಚದುರ್ಗೆಯರ ದರ್ಶನ, ಮಂಗಳೂರು, ಕೊಲ್ಲೂರು, ಮಡಿಕೇರಿ ಇತ್ಯಾದಿ ವಿವಿಧೆಡೆ ಇರುವ ಧಾರ್ಮಿಕ ಸ್ಥಳಗಳ ದರ್ಶನಕ್ಕೆ ವಿವಿಧ ಪ್ಯಾಕೇಜ್​ಗಳಿದ್ದು, ವೋಲ್ವೋ ಇತ್ಯಾದಿ ಬಸ್ಸುಗಳನ್ನು ಬಳಸಲಾಗುತ್ತಿದೆ. ಅಕ್ಟೋಬರ್ 15ರಂದು ಆರಂಭವಾದ ಈ ವಿಶೇಷ ಸೇವೆ ಅಕ್ಟೋಬರ್ 25ರವರೆಗೂ ಇರುತ್ತದೆ.

ಆಂಧ್ರ ಬಸ್ಸಿನಲ್ಲಿ ಡಿಸ್ಕೌಂಟ್

ಆಂಧ್ರ ರಸ್ತೆ ಸಾರಿಗೆ ಸಂಸ್ಥೆ ಎಪಿಎಸ್ಸಾರ್ಟಿಸಿಯ 5,500 ಬಸ್ಸುಗಳನ್ನು ಹಬ್ಬದ ಸೀಸನ್​ಗಾಗಿ ಅಣಿಗೊಳಿಸಲಾಗಿದೆ. ಅಕ್ಟೋಬರ್ 13ರಿಂದ 26ರವರೆಗೂ ಆಂಧ್ರದ ವಿವಿಧ ಸ್ಥಳಗಳಲ್ಲಿ ಬಸ್ಸುಗಳು ಸಂಚರಿಸಲಿವೆ. ಬೆಂಗಳೂರು ಮತ್ತು ಚೆನ್ನೈ ಇತ್ಯಾದಿ ನಗರಗಳಿಗೂ ಆಂಧ್ರ ಬಸ್ಸುಗಳು ಓಡಾಡುತ್ತವೆ. ವಿಶೇವೆಂದರೆ ರಿಟರ್ನ್ ಟಿಕೆಟ್ ಬುಕ್ ಮಾಡಿದರೆ ಎರಡೂ ಟಿಕೆಟ್ ಮೇಲೆ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

30 ವಿಶೇಷ ರೈಲುಗಳು

ರೈಲುಗಳಿಗೆ ವಿಶೇಷ ಬೇಡಿಕೆ ಇರುವುದರಿಂದ ಸೆಂಟ್​ರಲ್ ರೈಲ್ವೆ 30 ವಿಶೇಷ ರೈಲುಗಳನ್ನು ನವೆಂಬರ್​ವರೆಗೂ ನಿಯೋಜಿಸಿದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್​ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?

ಏರ್ ಇಂಡಿಯಾ ಆಫರ್

ಹಬ್ಬದ ಸೀಸನ್​ಗೆ ರಜೆ ಪಡೆದುಕೊಂಡು ವಿದೇಶಗಳಿಗೆ ಪ್ರವಾಸ ಹೋಗುವವರಿಗೆ ಖುಷಿ ಸುದ್ದಿ ಇದೆ. ಏರ್ ಇಂಡಿಯಾ ಸಂಸ್ಥೆ ಯೂರೋಪ್​ಗೆ ರೌಂಡ್ ಟ್ರಿಪ್ ಫ್ಲೈಟ್ ಸೇವೆಗಳನ್ನು ನೀಡುತ್ತಿದ್ದು, ಕೇವಲ 40,000 ರೂನಿಂದ ಇದು ಶುರುವಾಗುತ್ತದೆ. ಪ್ಯಾರಿಸ್, ಮಿಲಾನ್, ಲಂಡನ್, ಕೋಪನ್​ಹೇಗನ್ ಇತ್ಯಾದಿ ಯೂರೋಪ್​ನ ಪ್ರಮುಖ ಸ್ಥಳಗಳಿಗೆ ಟಿಕೆಟ್ ಬೆಲೆ ಕೇವಲ 25,000 ರೂ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ