ರಷ್ಯಾದಿಂದ ಭಾರತ ಕಡಿಮೆ ಬೆಲೆಗೆ ತೈಲ ಖರೀದಿಸಲು ಅಮೆರಿಕ ಯಾಕೆ ಆಕ್ಷೇಪಿಸಲಿಲ್ಲ? ಇಲ್ಲಿದೆ ಅದರ ರಾಯಭಾರಿ ಕೊಟ್ಟ ಉತ್ತರ

|

Updated on: May 12, 2024 | 5:53 PM

US Role in Russian oil supply to India: ಕಳೆದ ಎರಡು ವರ್ಷದಿಂದ ರಷ್ಯಾದಿಂದ ಕಡಿಮೆ ಬೆಲೆಗೆ ತೈಲವನ್ನು ಭಾರತ ಪಡೆಯುತ್ತಿದೆ. ಹಲವು ದೇಶಗಳನ್ನು ನಿರ್ಬಂಧಿಸಿದರೂ ಭಾರತಕ್ಕೆ ಅಮೆರಿಕ ಯಾವ ಕ್ರಮ ಕೈಗೊಂಡಿಲ್ಲ. ಇದು ಉದ್ದೇಶಪೂರ್ವಕವಾಗಿ ಅಮೆರಿಕ ಇಟ್ಟ ನಡೆಯಂತೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಿತಾ ಅಮೆರಿಕ. ಯಾಕೆಂದರೆ ರಷ್ಯಾದ ತೈಲವನ್ನು ಭಾರತ ಖರೀದಿಸಿದ್ದರಿಂದ ಜಾಗತಿಕವಾಗಿ ತೈಲ ಬೆಲೆ ಹೆಚ್ಚಳವಾಗಿಲ್ಲ. ಹಾಗೆಯೇ, ರಷ್ಯಾಗೆ ನಿರೀಕ್ಷಿತ ಆದಾಯವೂ ಸಿಗಲಿಲ್ಲ.

ರಷ್ಯಾದಿಂದ ಭಾರತ ಕಡಿಮೆ ಬೆಲೆಗೆ ತೈಲ ಖರೀದಿಸಲು ಅಮೆರಿಕ ಯಾಕೆ ಆಕ್ಷೇಪಿಸಲಿಲ್ಲ? ಇಲ್ಲಿದೆ ಅದರ ರಾಯಭಾರಿ ಕೊಟ್ಟ ಉತ್ತರ
ಎರಿಕ್ ಗಾರ್ಕೆಟ್ಟಿ
Follow us on

ನವದೆಹಲಿ, ಮೇ 12: ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ರಷ್ಯಾ ಮೇಲೆ ಅಮೆರಿಕ ಹಾಗೂ ಯೂರೋಪಿಯನ್ ದೇಶಗಳು ಅನೇಕ ನಿರ್ಬಂಧಗಳನ್ನು ವಿಧಿಸಿದ್ದವು. ರಷ್ಯಾದ ತೈಲ (Russian oil) ಖರೀದಿಸದಂತೆ ಹಲವು ದೇಶಗಳಿಗೆ ಅಮೆರಿಕ ಅಪ್ಪಣೆ ಮಾಡಿತ್ತು. ಅದೇ ವೇಳೆ ತೈಲ ಖರೀದಿಸುವವರು ಕಡಿಮೆ ಆದ್ದರಿಂದ ರಷ್ಯಾ ಕಡಿಮೆ ಬೆಲೆಗೆ ಮಾರುವ ಪರಿಸ್ಥಿತಿಯಲ್ಲಿತ್ತು. ಅಮೆರಿಕದಿಂದ ನಿಷೇಧದ ಭೀತಿ ಇದ್ದರೂ ಭಾರತವು ರಷ್ಯಾದಿಂದ ಯಥೇಚ್ಛವಾಗಿ ತೈಲ ಖರೀದಿ ಮಾಡತೊಡಗಿತು. ಅದೂ ಕಡಿಮೆ ಬೆಲೆಗೆ. ಚೀನಾ ಮತ್ತು ಭಾರತ ದೇಶಗಳು ರಷ್ಯಾದಿಂದ ತೈಲ ಸೂರೆ ಮಾಡಿದವು. ಭಾರತದ ಈ ನಡೆಗೆ ಅಮೆರಿಕ ತಡೆ ಒಡ್ಡಲಿಲ್ಲ. ಬದಲಾಗಿ ಒಪ್ಪಿಗೆ ಸೂಚಿಸಿತು. ಅಮೆರಿಕದ ಈ ಅಚ್ಚರಿಯ ನಡೆಗೆ ಏನು ಕಾರಣ ಎಂದು ನಾನಾ ಊಹಾಪೋಹಗಳಿವೆ. ಈ ಬಗ್ಗೆ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಗೆಟ್ಟಿ ಮಾತನಾಡಿದ್ದಾರೆ. ಅವರ ಪ್ರಕಾರ ಅಮೆರಿಕ ಉದ್ದೇಶಪೂರ್ವಕವಾಗಿ ರಷ್ಯಾ ತೈಲವನ್ನು ಖರೀದಿಸಲು ಭಾರತಕ್ಕೆ ಅನುಮತಿ ನೀಡಿತಂತೆ.

ಕೆಲ ದಿನಗಳ ಹಿಂದೆ ಅಮೆರಿಕದ ವಾಷಿಂಗ್ಟನ್​ನಲ್ಲಿ ಕೌನ್ಸಿಲ್ ಆನ್ ಫಾರೀನ್ ರಿಲೇಶನ್ಸ್ ಆಯೋಜಿಸಿದ ಡೈವರ್ಸಿಟಿ ಇನ್ ಇಂಟರ್ನ್ಯಾಷನಲ್ ಅಫೇರ್ಸ್​ನ ಸಮಾವೇಶದಲ್ಲಿ ಮಾತನಾಡುತ್ತಿದ್ದಾಗ ಗಾರ್ಗೆಟ್ಟಿ ಈ ಅಚ್ಚರಿಯ ವಿಚಾರವನ್ನು ಹೊರಗೆಡವಿದ್ದಾರೆ.

ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ತುತ್ತು ಅನ್ನಕ್ಕೂ ಪರದಾಟ: ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ಜಾಗತಿಕ ತೈಲ ಬೆಲೆ ಹೆಚ್ಚಳವಾಗದಿರಲು ಈ ನಡೆ

ಎರಿಕ್ ಗಾರ್ಕೆಟ್ಟಿ ಪ್ರಕಾರ ರಷ್ಯಾ ತೈಲ ಖರೀದಿಸಲು ಭಾರತಕ್ಕೆ ಅನುಮತಿಸಿದ್ದರಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ. ರಷ್ಯಾ ತೈಲವನ್ನು ಯಾರೂ ಖರೀದಿಸದೇ ಹೋದರೆ ಜಾಗತಿಕವಾಗಿ ತೈಲ ಬೆಲೆ ಹೆಚ್ಚಾಗುತ್ತಿತ್ತು. ಅದಕ್ಕಾಗಿ ಭಾರತ ಆ ತೈಲ ಖರೀದಿಸಲು ಅಮೆರಿಕ ಅನುಮತಿಸಿತು. ಇದರಿಂದ ಜಾಗತಿಕ ತೈಲ ಬೆಲೆ ಏರಿಕೆ ಆಗಲಿಲ್ಲ.

ಇನ್ನೊಂದೆಡೆ ರಷ್ಯಾ ಕಡಿಮೆ ಬೆಲೆಗೆ ತನ್ನ ತೈಲವನ್ನು ಬಿಕರಿ ಮಾಡುವ ಅನಿವಾರ್ಯತೆಗೆ ಸಿಲುಕಿತು. ಇದರಿಂದ ರಷ್ಯಾಗೆ ಬರುತ್ತಿದ್ದ ಆದಾಯ ಸಂಕುಚಿತಗೊಂಡಿತು.

‘ಮಾರುಕಟ್ಟೆಯಲ್ಲಿ ತೈಲ ಸರಬರಾಜು ಮುಂದುವರಿಯುವುದು ನಮಗೆ ಮುಖ್ಯವಾಗಿತ್ತು. ಅದೇ ವೇಳೆ ತೈಲ ಮಾರಾಟದಿಂದ ರಷ್ಯಾ ಹೆಚ್ಚು ಲಾಭ ಮಾಡಬಾರದು ಎಂದೂ ಬಯಸಿದ್ದೆವು,’ ಎಂದು ಅಮೆರಿಕದ ಹಣಕಾಸು ಸಚಿವಾಲಯದ ಸಹಾಯಕರಅದ ಎರಿಕ್ ವಾನ್ ನಾಸ್​ಟ್ರಾಂಡ್ ಹೆಳಿದ್ದಾರೆ.

ಇದನ್ನೂ ಓದಿ: Bilateral Trade- ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ: ಅಮೆರಿಕವನ್ನು ಹಿಂದಿಕ್ಕಿದ ಚೀನಾ

ವಿಶ್ವದ ಏಳು ಅತಿ ಶ್ರೀಮಂತ ದೇಶಗಳಿರುವ ಜಿ7 ಗ್ರೂಪ್ ರಷ್ಯಾ ತೈಲ ಬೆಲೆ ಮಾರಾಟ ಬ್ಯಾರಲ್​ಗೆ 60 ಡಾಲರ್ ಮೀರಬಾರದು ಎಂದು ಅಂಕೆ ಹಾಕಿತು. ಯೂರೋಪಿಯನ್ ಯೂನಿಯನ್ ಮತ್ತು ಆಸ್ಟ್ರೇಲಿಯಾ ದೇಶಗಳೂ ಜಿ7 ಕ್ರಮವನ್ನು ಬೆಂಬಲಿಸಿದವು. ಬ್ಯಾರಲ್​ಗೆ 60 ಡಾಲರ್​ಗಿಂತ ಹೆಚ್ಚಿನ ಬೆಲೆಗೆ ರಷ್ಯಾ ತೈಲವನ್ನು ಖರೀದಿಸಿ ಸಾಗಿಸಲಾಗುತ್ತಿದ್ದರೆ ಅಂಥ ಟ್ಯಾಂಕರ್​​ಗಳನ್ನು ನಿಷೇಧಿಸಲಾಗಿತ್ತು. ಯಾವ ದೇಶಗಳೂ ಕೂಡ ಆ ಧೈರ್ಯ ಮಾಡಲಿಲ್ಲ. ರಷ್ಯಾ ಅನಿವಾರ್ಯವಾಗಿ 60 ಡಾಲರ್ ದರದಲ್ಲಿ ತೈಲ ಮಾರಬೇಕಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ