ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ: ಅಮೆರಿಕವನ್ನು ಹಿಂದಿಕ್ಕಿದ ಚೀನಾ

Trading Partners of India in 2023-24: ದ್ವಿಪಕ್ಷೀಯ ವ್ಯಾಪಾರದಲ್ಲಿ, ಅಂದರೆ ಎರಡು ದೇಶಗಳ ನಡುವಿನ ರಫ್ತು ಮತ್ತು ಆಮದು ವ್ಯವಹಾರದಲ್ಲಿ ಭಾರತಕ್ಕೆ ಚೀನಾ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿದೆ. 2021-22 ಮತ್ತು 2022-23ರಲ್ಲಿ ಭಾರತಕ್ಕೆ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿದ್ದುದು ಅಮೆರಿಕ. ಅದಕ್ಕೂ ಮೊದಲು ಚೀನಾ ಇತ್ತು. ಈಗ ಚೀನಾ 2023-24ರಲ್ಲಿ ಮತ್ತೆ ಮುಂದಕ್ಕೆ ಹೋಗಿದೆ. ಚೀನಾ ಮತ್ತು ಭಾರತದ ನಡುವಿನ ಟ್ರೇಡಿಂಗ್ 118.4 ಬಿಲಿಯನ್ ಡಾಲರ್ ಇದ್ದರೆ ಅಮೆರಿಕ ಮತ್ತು ಭಾರತದ ನಡುವಿನ ಟ್ರೇಡಿಂಗ್ 118.3 ಬಿಲಿಯನ್ ಡಾಲರ್ ಇದೆ. ಯುಎಇ, ರಷ್ಯಾ, ಸಿಂಗಾಪುರ ದೇಶಗಳು ಕೂಡ ಭಾರತದ ಜೊತೆ ಹೆಚ್ಚು ವ್ಯಾಪಾರ ವಹಿವಾಟು ಸಂಬಂಧ ಹೊಂದಿವೆ.

ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ: ಅಮೆರಿಕವನ್ನು ಹಿಂದಿಕ್ಕಿದ ಚೀನಾ
ಭಾರತ ಚೀನಾ
Follow us
|

Updated on: May 12, 2024 | 2:37 PM

ನವದೆಹಲಿ, ಮೇ 12: ಭಾರತದ ಜೊತೆ ಅತಿಹೆಚ್ಚು ವ್ಯಾಪಾರ ವಹಿವಾಟು (bilateral trade) ನಡೆಸುವ ದೇಶಗಳ ಪೈಕಿ ಚೀನಾ ಅಗ್ರಸ್ಥಾನಕ್ಕೆ ಹೋಗಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಪ್ರಮಾಣ 118.4 ಬಿಲಿಯನ್ ಡಾಲರ್​ಗೆ ಏರಿದೆ. ಈ ವೇಳೆ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಟ್ರೇಡಿಂಗ್ 118.3 ಬಿಲಿಯನ್ ಡಾಲರ್​ಗೆ ಇಳಿದಿರುವುದು ತಿಳಿದುಬಂದಿದೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ, ಅಂದರೆ 2021-22 ಮತ್ತು 2022-23ರಲ್ಲಿ ಭಾರತಕ್ಕೆ ಅಮೆರಿಕವೇ ಅಗ್ರಮಾನ್ಯ ಟ್ರೇಡಿಂಗ್ ಪಾರ್ಟ್ನರ್ ಆಗಿತ್ತು.

ಚೀನಾದಿಂದ ಭಾರತದ ರಫ್ತು ಗಣನೀಯವಾಗಿ ಹೆಚ್ಚಿದೆ. ದತ್ತಾಂಶದ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಭಾರತದಿಂದ ಚೀನಾದ ಆದ ರಫ್ತು ಶೇ. 8.7ರಷ್ಟು ಹೆಚ್ಚಾಗಿ 16.67 ಬಿಲಿಯನ್ ಡಾಲರ್ ತಲುಪಿದೆ. ಚೀನಾದಿಂದ ಭಾರತ ಮಾಡಿಕೊಂಡ ಆಮದು ಬರೋಬ್ಬರಿ 101.3 ಬಿಲಿಯನ್ ಡಾಲರ್​ನಷ್ಟಿದೆ. ಕಳೆದ ಬಾರಿ ಇದು 100 ಬಿಲಿಯನ್ ಡಾಲರ್​ಗಿಂತ ಕಡಿಮೆ ಇತ್ತು. 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಚೀನಾದಿಂದ ಭಾರತ ಮಾಡಿಕೊಂಡ ಆಮದು ಶೇ. 3.24ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ದೆಹಲಿ, ಮುಂಬೈಗಿಂತ ಬೆಂಗಳೂರಿನ ಕಂಪನಿಗಳಿಂದ ಹೆಚ್ಚು ಮ್ಯಾಟರ್ನಿಟಿ ಸೌಲಭ್ಯ

ಅಮೆರಿಕ ಮತ್ತು ಭಾರತದ ಮಧ್ಯೆ ಕಡಿಮೆ ಆಯ್ತು ವ್ಯಾಪಾರ ವಹಿವಾಟು

ಬೇರೆ ಬೇರೆ ಕಾರಣಗಳಿಗೆ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ವಹಿವಾಟು 2023-24ರಲ್ಲಿ ಕಡಿಮೆ ಆಗಿದೆ. ಅದರಲ್ಲೂ ಅಮೆರಿಕದಿಂದ ಭಾರತ ಮಾಡಿಕೊಂಡ ಆಮದು ಶೇ. 20ರಷ್ಟು ಕಡಿಮೆ ಆಗಿದೆ. ಅಮೆರಿಕಕ್ಕೆ ಭಾರತ ಮಾಡಿದ ರಫ್ತು ಶೇ. 1.32ರಷ್ಟು ಮಾತ್ರವೇ ಕಡಿಮೆ ಆಗಿರುವುದು.

ದತ್ತಾಂಶದ ಪ್ರಕಾರ 2022-23ರಲ್ಲಿ ಅಮೆರಿಕಕ್ಕೆ ಭಾರತ ಮಾಡಿದ ರಫ್ತು 78.54 ಬಿಲಿಯನ್ ಇತ್ತು. 2023-24ರಲ್ಲಿ ಅದು 77.5 ಬಿಲಿಯನ್ ಡಾಲರ್​ಗೆ ಇಳಿದಿದೆ. ಇನ್ನು, ಭಾರತ ಮಾಡಿಕೊಂಡ ಆಮದು 40.8 ಬಿಲಿಯನ್ ಡಾಲರ್​ಗೆ ಇಳಿದಿರುವುದು ಗೊತ್ತಾಗಿದೆ.

2023-24ರಲ್ಲಿ ವಿವಿಧ ದೇಶಗಳ ಜೊತೆ ಭಾರತದ ದ್ವಿಪಕ್ಷೀಯ ವ್ಯಾಪಾರ

  1. ಚೀನಾ: 118.4 ಬಿಲಿಯನ್ ಡಾಲರ್
  2. ಅಮೆರಿಕ: 118.3 ಬಿಲಿಯನ್ ಡಾಲರ್
  3. ಯುಎಇ: 83.6 ಬಿಲಿಯನ್ ಡಾಲರ್
  4. ರಷ್ಯಾ: 65.7 ಬಿಲಿಯನ್ ಡಾಲರ್
  5. ಸೌದಿ ಅರೇಬಿಯಾ: 43.4 ಬಿಲಿಯನ್ ಡಾಲರ್
  6. ಸಿಂಗಾಪುರ್: 35.6 ಬಿಲಿಯನ್ ಡಾಲರ್

ಇದನ್ನೂ ಓದಿ: ಸತತ ಮೂರು ವಾರ ಕುಸಿತ ಕಂಡಿದ್ದ ಫಾರೆಕ್ಸ್ ಮೀಸಲು ನಿಧಿ 641.59 ಬಿಲಿಯನ್ ಡಾಲರ್​​ಗೆ ಹೆಚ್ಚಳ

ಭಾರತ ಈ ಹಿಂದೆ ಯುಎಇ ಜೊತೆ ಹೆಚ್ಚಿನ ವ್ಯಾಪಾರ ವಹಿವಾಟು ಹೊಂದಿತ್ತು. 2013-14ರಿಂದ 2020-21ರವರೆಗೂ ಹೆಚ್ಚು ವರ್ಷ ಚೀನಾ ಭಾರತದ ಜೊತೆ ಅತಿಹೆಚ್ಚು ವ್ಯಾಪಾರ ಹೊಂದಿತ್ತು. ಗಾಲ್ವನ್ ಕಣಿವೆ ಸಂಘರ್ಷದ ಬಳಿಕ ಚೀನಾದೊಂದಿಗಿನ ವ್ಯಾಪಾರ ವಹಿವಾಟು ಸಂಬಂಧವನ್ನು ಭಾರತ ಕಡಿಮೆಗೊಳಿಸಿತ್ತು. ಪರಿಣಾಮವಾಗಿ ಅಮೆರಿಕದ ಜೊತೆ ಟ್ರೇಡಿಂಗ್ ಹೆಚ್ಚಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ