AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ, ಮುಂಬೈಗಿಂತ ಬೆಂಗಳೂರಿನ ಕಂಪನಿಗಳಿಂದ ಹೆಚ್ಚು ಮ್ಯಾಟರ್ನಿಟಿ ಸೌಲಭ್ಯ

World Mother's Day: Bengaluru companies giving maternity benefits to employees: ಪ್ಲಮ್​ನ ವರದಿಯೊಂದರ ಪ್ರಕಾರ ಉದ್ಯೋಗಿಗಳಿಗೆ ಹೆಚ್ಚಿನ ಮೊತ್ತದ ಇನ್ಷೂರೆನ್ಸ್ ಮತ್ತು ಮ್ಯಾಟರ್ನಿಟಿ ಸೌಲಭ್ಯ ಕೊಡುವುದರಲ್ಲಿ ಬೆಂಗಳೂರಿನ ಕಂಪನಿಗಳು ಮುಂದಿವೆ. ಮುಂಬೈ, ದೆಹಲಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚಿನ ಕಂಪನಿಗಳು ಉದ್ಯೋಗಿಗಳಿಗೆ ಹೆಚ್ಚಿನ ಬೆನಿಫಿಟ್ಸ್ ನೀಡುತ್ತವೆ. ಶೇ. 70ರಷ್ಟು ಬೆಂಗಳೂರಿನ ಕಂಪನಿಗಳು ಮ್ಯಾಟರ್ನಿಟಿ ಸೌಲಭ್ಯ ಕೊಡುತ್ತವೆ. ದೆಹಲಿ ಶೇ. 63, ಮುಂಬೈ ಶೇ. 62ರಷ್ಟು ಕಂಪನಿಗಳು ಮಾತ್ರ ಈ ಸೌಲಭ್ಯ ಒದಗಿಸುತ್ತವೆ ಎಂದು ಈ ವರದಿ ಹೇಳುತ್ತದೆ.

ದೆಹಲಿ, ಮುಂಬೈಗಿಂತ ಬೆಂಗಳೂರಿನ ಕಂಪನಿಗಳಿಂದ ಹೆಚ್ಚು ಮ್ಯಾಟರ್ನಿಟಿ ಸೌಲಭ್ಯ
ಮಹಿಳೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2024 | 10:51 AM

ಬೆಂಗಳೂರು, ಮೇ 12: ಇವತ್ತು ವಿಶ್ವ ತಾಯಂದಿರ ದಿನ (World Mother’s Day). ತಾಯ್ತನ ಎನ್ನುವುದು ಹೆಣ್ಣಿಗೆ ಸಿಗುವ ಬಹಳ ಅಮೂಲ್ಯವಾದ ಪ್ರಕೃತಿದತ್ತ ಶಕ್ತಿ. ಮನುಷ್ಯನ ಸಂತತಿ ಉಳಿವಿಗೆ ಬಹಳ ಮುಖ್ಯವಾದುದು. ಮಕ್ಕಳಿರಲವ್ವ ಮನೆ ತುಂಬ ಎಂದು ಹಿಂದೆಲ್ಲಾ ಹೇಳುತ್ತಿದ್ದರು. ಸಾಕಲು ಕಷ್ಟವೆಂದರೋ, ವೃತ್ತಿಜೀವನ ಕೈಬಿಟ್ಟುಹೋಗುತ್ತದೆಂದೋ ಬೇರೆ ಬೇರೆ ಕಾರಣಗಳಿಗೆ ಈಗ ಮಗು ಮನೆಗೊಂದಾದರೆ ಸಾಕು ಎನ್ನುವಂತಾಗಿದೆ. ಭಾರತದ ಭವಿಷ್ಯ ಉಜ್ವಲವಾಗಿ ಮುಂದುವರಿಯಬೇಕಾದರೆ ಈಗ ಒಂದು ಹೆಣ್ಣಿಗೆ ಎರಡು ಮಕ್ಕಳಾದರೂ ಬೇಕಾಗುತ್ತದೆ. ಅನೇಕ ಕಂಪನಿಗಳು ಮ್ಯಾಟರ್ನಿಟಿಗೆ ರಜೆ (Maternity leave) ಹೋಗುತ್ತಾರೆಂಬ ಕಾರಣಕ್ಕೆ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತವೆ. ಇವತ್ತಿನ ಕಾಲದಲ್ಲಿ ಒಬ್ಬ ಮಹಿಳೆ ಹೆಚ್ಚೆಂದರೆ ಒಂದು ಅಥವಾ ಎರಡು, ಅಥವಾ ಇನ್ನೂ ಹೆಚ್ಚೆಂದರೆ ಮೂರು ಬಾರಿ ತಾಯ್ತನ ಅನುಭವಿಸಬಹುದು. ಎಷ್ಟು ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಮ್ಯಾಟರ್ನಿಟಿ ಸೌಲಭ್ಯ ಕೊಡುತ್ತವೆ? ಒಂದು ವರದಿ ಪ್ರಕಾರ ದೆಹಲಿ, ಮುಂಬೈನಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಧಿಕ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಮ್ಯಾಟರ್ನಿಟಿ ಬೆನಿಫಿಟ್ಸ್ ನೀಡುತ್ತವೆ ಎಂದು ಹೇಳಲಾಗುತ್ತಿದೆ.

ಪ್ಲಮ್ ಕಂಪನಿಯ ‘ದಿ ಸ್ಟೇಟ್ ಆಫ್ ಎಂಪ್ಲಾಯೀ ಬೆನಿಫಿಟ್ಸ್ 2024’ ವರದಿಯಲ್ಲಿ ಈ ಬಗ್ಗೆ ದತ್ತಾಂಶ ಇದೆ. ಮುಂಬೈನಲ್ಲಿ ಶೇ. 62ರಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮ್ಯಾಟರ್ನಿಟಿ ಸೌಲಭ್ಯ ಕೊಡುತ್ತವೆ. ಅಂದರೆ ನಿರ್ದಿಷ್ಟ ಅವಧಿ ಕಾಲ ರಜೆ ಇತ್ಯಾದಿ ಸೌಲಭ್ಯಗಳನ್ನು ಕೊಡುತ್ತವೆ. ದೆಹಲಿಯಲ್ಲಿ ಶೇ. 63ರಷ್ಟು ಕಂಪನಿಗಳು ಈ ಸೌಲಭ್ಯ ಕೊಡುತ್ತವೆ. ಆದರೆ, ಬೆಂಗಳೂರಿನ ಶೇ. 70ರಷ್ಟು ಕಂಪನಿಗಳು ಮ್ಯಾಟರ್ನಿಟಿ ಬೆನಿಫಿಟ್ಸ್ ಆಫರ್ ಮಾಡುತ್ತವೆ ಎಂದು ಈ ವರದಿ ಹೇಳುತ್ತದೆ.

ಇದನ್ನೂ ಓದಿ: Mother’s Day 2024 : ಅಮ್ಮನ ಮುಖದಲ್ಲಿ ನಗು ಮೂಡಿಸಬೇಕೇ? ಹೀಗೆ ಮಾಡಿದ್ರೆ ನಿಮ್ಮಮ್ಮ ಫುಲ್ ಖುಷ್

ಉದ್ಯೋಗಿಗಳಿಗೆ 5 ಲಕ್ಷ ರೂ ಹಾಗೂ ಅಧಿಕ ಮೊತ್ತದ ಸೌಲಭ್ಯ ಒದಗಿಸುವುದರಲ್ಲೂ ಬೆಂಗಳೂರಿನ ಕಂಪನಿಗಳು ಮುಂದಿವೆ. ಸಿಲಿಕಾನ್ ಸಿಟಿಯ ಶೇ. 70ರಷ್ಟು ಕಂಪನಿಗಳು ಕನಿಷ್ಠ 5 ಲಕ್ಷ ರೂನಷ್ಟು ಮ್ಯಾಟರ್ನಿಟಿ ಸೌಲಭ್ಯ ಕೊಡುತ್ತವೆ. ದೆಹಲಿಯಲ್ಲಿ ಶೇ. 68, ಮುಂಬೈನಲ್ಲಿ ಶೇ. 60ರಷ್ಟು ಕಂಪನಿಗಳು ಮಾತ್ರ ಈ ಪ್ರಮಾಣದ ಸೌಲಭ್ಯ ಕೊಡುವುದು.

ಆದರೆ, ಅಧಿಕ ಕ್ಲೇಮ್ ಮೊತ್ತ ಮುಂಬೈನದ್ದಾಗಿದೆ. ಇಲ್ಲಿ ಇನ್ಷೂರೆನ್ಸ್ ಸೌಲಭ್ಯವನ್ನು ಪಡೆಯುವವರಲ್ಲಿ ಸರಾಸರಿಯಾಗಿ ಕ್ಲೇಮ್ ಆಗುವ ಹಣ 92,796 ರೂ ಎನ್ನಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚಿನ ಕಂಪನಿಗಳು ಹೆಚ್ಚು ಬೆನಿಫಿಟ್ಸ್ ನೀಡುತ್ತವೆಯಾದರೂ ಇಲ್ಲಿನ ಸರಾಸರಿ ಮೊತ್ತ 73,000 ರೂ ಆಗಿದೆ. ದೆಹಲಿಯಲ್ಲಿ ಸರಾಸರಿ 62,375 ರೂ ಇದೆ.

ಇದನ್ನೂ ಓದಿ: ಮೈದಾನದಲ್ಲೇ ಕೆಎಲ್ ರಾಹುಲ್ ನಿಂದಿಸಿ ಟ್ರೋಲ್ ಆದ ಲಕ್ನೋ ಮಾಲೀಕ ಸಂಜೀವ್ ಗೋಯಂಕಾ ಅಂತಿಂಥವರಲ್ಲ; ಹೀಗಿದೆ ಅವರ ಬಿಸಿನೆಸ್ ಸಾಮ್ರಾಜ್ಯ

ಹೃದಯ ಸಂಬಂಧಿ ರೋಗಗಳಿಗೆ ಹೆಚ್ಚಿನ ಕ್ಲೇಮ್ ಆಗುತ್ತದೆ. ನಂತರ ಸ್ಥಾನ ಕ್ಯಾನ್ಸರ್, ಗಾಯ ಮತ್ತು ಮ್ಯಾಟರ್ನಿಟಿ ಹಾಗೂ ಸಂಬಂಧಿತ ಸಮಸ್ಯೆಗಳದ್ದು. ಬೆಂಗಳೂರು ಮತ್ತು ಮುಂಬೈನಲ್ಲಿ ಹೃದಯ ಸಂಬಂಧಿ ತೊಂದರೆಗಳಿಗೆ ಕಾರ್ಪೊರೇಟ್ ಇನ್ಷೂರೆನ್ಸ್ ಹಣ ಕ್ಲೇಮ್ ಆಗುತ್ತದೆ. ದೆಹಲಿಯಲ್ಲಿ ಉಸಿರಾಟ ತೊಂದರೆಗೆ ಹಣ ವ್ಯಯವಾಗುವುದು ಅಧಿಕ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ