AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mother’s Day 2024 : ಅಮ್ಮನ ಮುಖದಲ್ಲಿ ನಗು ಮೂಡಿಸಬೇಕೇ? ಹೀಗೆ ಮಾಡಿದ್ರೆ ನಿಮ್ಮಮ್ಮ ಫುಲ್ ಖುಷ್

ಕಣ್ಣಿಗೆ ಕಾಣುವ ದೇವತೆಯಾದ ಅಮ್ಮನನ್ನು ವರ್ಣಿಸಲು ಪದಗಳೇ ಸಾಲದು. ಅಮ್ಮ ಎನ್ನುವ ಅಕ್ಷರಕ್ಕೆಕ್ಕೆ ಎಲ್ಲಾ ನೋವನ್ನು ಮರೆಸುವ ಶಕ್ತಿಯಿದೆ. ಅಮ್ಮನಿಗಾಗಿಯೇ ಮೀಸಲಾಗಿರುವ ಅಮ್ಮಂದಿರ ದಿನವನ್ನು ವಿಭಿನ್ನವಾಗಿ ಆಚರಿಸಲು ಈಗಾಗಲೇ ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ದೂರದಲ್ಲಿರುವ ಮಕ್ಕಳಿಗೆ ಸೆಲೆಬ್ರೇಟ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾದರೆ ಈ ರೀತಿಯಾಗಿ ಅಮ್ಮಂದಿರ ದಿನವನ್ನು ಆಚರಿಸಬಹುದಾಗಿದೆ.

Mother’s Day 2024 : ಅಮ್ಮನ ಮುಖದಲ್ಲಿ ನಗು ಮೂಡಿಸಬೇಕೇ? ಹೀಗೆ ಮಾಡಿದ್ರೆ ನಿಮ್ಮಮ್ಮ ಫುಲ್ ಖುಷ್
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 11, 2024 | 4:57 PM

Share

ಅಮ್ಮ ಎಂದರೆ ಏನೋ ಹರುಷವೋ ನನ್ನ ಪಾಲಿಗೆ ಅವಳೇ ದೈವವು, ಅಮ್ಮ ಅಂದರೇನೇ ಹಾಗೆ ನೋವನ್ನು ಮರೆಸುತ ಸದಾ ಕಾಳಜಿಯನ್ನು ಬಯಸುವ ಜೀವ. ವಿಶ್ವದಾದ್ಯಂತ ತಾಯಂದಿರ ದಿನವನ್ನು ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ಈ ಬಾರಿ ಮೇ 12 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಒಂದು ವೇಳೆ ದೂರವಿದ್ದರೆ ಅಮ್ಮಂದಿರ ದಿನವನ್ನು ಈ ರೀತಿಯಾಗಿ ಸೆಲೆಬ್ರೇಟ್ ಮಾಡಿ ಅಮ್ಮನ ಮೊಗದಲ್ಲಿ ನಗು ಮೂಡಿಸಬಹುದು.

* ಪತ್ರ ಬರೆಯಿರಿ : ಅಮ್ಮನ ಜೊತೆಯಲ್ಲಿ ದಿನವನ್ನು ಆಚರಿಸಲು ಸಾಧ್ಯವಿಲ್ಲ ಎಂದಾದರೆ ಅಮ್ಮನಿಗಾಗಿ ಒಂದು ಪತ್ರ ಬರೆಯಿರಿ. ಈ ಪತ್ರದಲ್ಲಿ ಅಮ್ಮನಿಗೆ ಹೇಳಬೇಕಾದ ವಿಚಾರವನ್ನು ತಿಳಿಸಿ ಬಿಡಿ. ಅದಲ್ಲದೇ ಕ್ಷಮೆ ಕೇಳಬೇಕೆಂದಿದ್ದರೆ ಅದನ್ನು ಕೂಡ ಉಲ್ಲೇಖಿಸಬಹುದು. ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ಒಳ್ಳೆಯ ಮಾರ್ಗವಾಗಿದ್ದು, ಈ ಪತ್ರವನ್ನು ಓದಿದ ಬಳಿಕ ನಿಮ್ಮ ತಾಯಿಯು ಖಂಡಿತವಾಗಿ ಖುಷಿ ಪಡುತ್ತಾರೆ.

* ಉಡುಗೊರೆಯನ್ನು ಕಳುಹಿಸಿಕೊಡಿ : ನಿಮ್ಮ ಅಮ್ಮನಿಗೆ ಏನು ಇಷ್ಟ ಎನ್ನುವುದು ಮಕ್ಕಳಾದ ನಿಮಗೆ ಗೊತ್ತಿರುತ್ತದೆ. ಈ ದಿನದಂದು ನಿಮಗೆ ಬರಲು ಸಾಧ್ಯವಾಗದೇ ಹೋದರೆ ಉಡುಗೊರೆಯನ್ನು ಕಳುಹಿಸಿ ಕೊಡಬಹುದು. ಇಲ್ಲವಾದರೆ ನಿಮ್ಮ ಅಪ್ಪನ ಬಳಿ ಸೆಲೆಬ್ರೇಶನ್ ಹೇಗೆ ಮಾಡಬೇಕು ಎನ್ನುವ ಐಡಿಯಾವನ್ನು ಕೊಡಿ. ಈ ಮೂಲಕ ಅಮ್ಮಂದಿರ ದಿನವನ್ನು ಅಮ್ಮನನ್ನು ಖುಷಿಯಾಗಿರಿಸಿಕೊಳ್ಳಬಹುದು.

ಇದನ್ನೂ ಓದಿ: ಆವಾಸ ಸ್ಥಾನಗಳ ನಾಶ, ಕಣ್ಮರೆಯತ್ತ ವಲಸೆ ಹಕ್ಕಿಗಳು

* ವಿಡಿಯೋ ಕಾಲ್‌ ನಲ್ಲಿ ಮಾತನಾಡಿ : ಅಮ್ಮನಿಂದ ದೂರವಿರುವವರು ಈ ತಾಯಂದಿರ ದಿನದಂದು ಅವಳ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಬಹುದು. ಈ ಮೂಲಕ ಪ್ರೀತಿಯ ಅಮ್ಮನಿಗೆ ಶುಭಾಶಯಗಳನ್ನು ಕೋರಬಹುದು. * ಸರ್ಪ್ರೈಸ್ ಆಗಿ ಮನೆಗೆ ಬನ್ನಿ : ನೀವು ಸರ್ಪ್ರೈಸ್ ಆಗಿ ಮನೆಗೆ ಬಂದರೆ ಅಮ್ಮ ಖಂಡಿತವಾಗಿಯೂ ಖುಷಿಯಾಗುತ್ತಾಳೆ. ಹೀಗಾಗಿ ನೀವು ಹೇಳದೇನೇ ಈ ದಿನದಂದು ಮನೆಗೆ ಬಂದರೆ ಆಕೆಯ ಖುಷಿಗೆ ಪಾರವೇ ಇರುವುದಿಲ್ಲ. ನಿಮ್ಮ ಈ ಸರ್ಪ್ರೈಸ್ ಭೇಟಿಯು ಆಕೆಗೆ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ