AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shankaracharya Jayanti 2024: ಆದಿ ಶಂಕರಾಚಾರ್ಯರ ಕೊಡುಗೆಗಳೇನು? ಅವರ ಸ್ಥಾಪಿಸಿದ ನಾಲ್ಕು ಮಠಗಳು ಎಲ್ಲಿವೆ?

ಹಿಂದೂ ಧರ್ಮದಲ್ಲಿ ಆದಿ ಗುರು ಶಂಕರಾಚಾರ್ಯರಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಅನೇಕ ನಂಬಿಕೆಗಳ ಪ್ರಕಾರ, ಶ್ರೀ ಆದಿ ಶಂಕರಾಚಾರ್ಯರನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಅವರ ಜೀವನವು ಮಾನವಕುಲಕ್ಕೆ ಸ್ಫೂರ್ತಿಯಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಆದಿ ಶಂಕರಾಚಾರ್ಯರು ವೈಶಾಖ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಜನಿಸಿದರು. ಈ ಬಾರಿ, 2024 ರ ಮೇ 12ರ ಭಾನುವಾರದಂದು ಶಂಕರಾಚಾರ್ಯ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ.

Shankaracharya Jayanti 2024: ಆದಿ ಶಂಕರಾಚಾರ್ಯರ ಕೊಡುಗೆಗಳೇನು? ಅವರ ಸ್ಥಾಪಿಸಿದ ನಾಲ್ಕು ಮಠಗಳು ಎಲ್ಲಿವೆ?
Shankaracharya Jayanti 2024
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: May 11, 2024 | 6:42 PM

Share

ಆದಿ ಶಂಕರಾಚಾರ್ಯರು ಸನಾತನ ಧರ್ಮದ ನಿಜವಾದ ಅರ್ಥವನ್ನು ಜನರಿಗೆ ವಿವರಿಸಿದ ಮಹಾನ್ ಭಾರತೀಯ ಗುರು ಮತ್ತು ತತ್ವಜ್ಞಾನಿ. ಹಿಂದೂ ಧರ್ಮದಲ್ಲಿ ಆದಿ ಗುರು ಶಂಕರಾಚಾರ್ಯರಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಅನೇಕ ನಂಬಿಕೆಗಳ ಪ್ರಕಾರ, ಶ್ರೀ ಆದಿ ಶಂಕರಾಚಾರ್ಯರನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಅವರ ಜೀವನವು ಮಾನವಕುಲಕ್ಕೆ ಸ್ಫೂರ್ತಿಯಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಆದಿ ಶಂಕರಾಚಾರ್ಯರು ವೈಶಾಖ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಜನಿಸಿದರು. ಈ ಬಾರಿ, 2024 ರ ಮೇ 12ರ ಭಾನುವಾರದಂದು ಶಂಕರಾಚಾರ್ಯ ಜಯಂತಿಯನ್ನು ಅವರು ಕೊಡುಗೆಗೆಳನ್ನು ನೆನಪಿಸಿಕೊಳ್ಳಲು ಮತ್ತು ಅದನ್ನು ಅನುಸರಿಸುವ ಉದ್ದೇಶವನ್ನಿಟ್ಟುಕೊಂಡು ಆಚರಿಸಲಾಗುತ್ತದೆ. ಅವರ ಜನ್ಮ ದಿನದ ಪ್ರಯುಕ್ತ ಅವರಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ಆದಿ ಶಂಕರಾಚಾರ್ಯರು ಯಾರು?

ಆದಿ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಕೇರಳದ ಕಾಲಡಿ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶಿವಗುರು ಮತ್ತು ತಾಯಿಯ ಹೆಸರು ಆರ್ಯಾಂಬ. ಶಿವಗುರುಗಳು ಧರ್ಮಗ್ರಂಥಗಳಲ್ಲಿ ಪರಿಣಿತರಾಗಿದ್ದು ಶಿವನ ಭಕ್ತರಾಗಿದ್ದರು ಹಾಗಾಗಿ ತಮ್ಮ ಮಗನಿಗೆ ಶಂಕರ ಎಂದು ಹೆಸರಿಟ್ಟರು, ನಂತರ ಅವರೇ ಆದಿ ಗುರು ಶಂಕರಾಚಾರ್ಯ ಎಂದು ಕರೆಯಲ್ಪಟ್ಟರು. ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಬಗ್ಗೆ ಜ್ಞಾನವನ್ನು ಪಡೆದ ಶಂಕರಾಚಾರ್ಯರು ಅದರ ಪ್ರೇರಣೆಯಿಂದ ಸನ್ಯಾಸಿಯಾದರು. ಅವರು ತಮ್ಮ 32 ನೇ ವಯಸ್ಸಿಗೆ ದೇಹವನ್ನು ತೊರೆದು ಶಿವನಲ್ಲಿ ಐಕ್ಯರಾದರು.

ಇದನ್ನೂ ಓದಿ: ನಿಮ್ಮ ಅಮ್ಮನಲ್ಲಿ ರಾಮಾಯಣದಲ್ಲಿ ಬರುವ ತಾಯಂದಿರ ಈ ಗುಣ ಇದ್ದೆ ಇರುತ್ತೆ ಒಮ್ಮೆ ಗಮನಿಸಿ

ಆದಿ ಶಂಕರಾಚಾರ್ಯರ ಕೊಡುಗೆಗಳೇನು?

ಶ್ರೀ ಆದಿ ಶಂಕರಾಚಾರ್ಯರು ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ಮಾಡಿದರು. ಇದಲ್ಲದೆ, ಅವರು ಅದ್ವೈತ ಸಿದ್ದಾಂತವನ್ನು ಮನುಕುಲಕ್ಕೆ ಸಾರಿದರು. ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ನಿವಾರಣೆ ಮಾಡಲು ಪ್ರಯತ್ನ ಪಟ್ಟರು.

ಮಠಗಳ ಸ್ಥಾಪನೆ:

ಶ್ರೀ ಆದಿ ಗುರು ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪ್ರಚಾರ ಮಾಡಲು ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಉತ್ತರದಲ್ಲಿ ಬದ್ರಿಕಾಶ್ರಮದ ಜ್ಯೋತಿರ್ಮಠ ಅಥವಾ ಜೋಶಿಮಠ, ಪಶ್ಚಿಮದಲ್ಲಿ ದ್ವಾರಕಾ ಪೀಠ ಅಥವಾ ದ್ವಾರಕಾ ಮಠ/ಶಾರದಾ ಮಠ, ಪೂರ್ವದಲ್ಲಿ ಜಗನ್ನಾಥ ಪುರಿಯಲ್ಲಿರುವ ಗೋವರ್ಧನ ಮಠ ಮತ್ತು ದಕ್ಷಿಣದಲ್ಲಿ ಶೃಂಗೇರಿ ಮಠಗಳು ಆದಿ ಶಂಕರಾಚಾರ್ಯರ ಕೊಡುಗೆಗಳಾಗಿವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ