Daily Devotional: ಬಾಲಾರಿಷ್ಟದಿಂದ ಮಕ್ಕಳನ್ನು ಪಾರುಮಾಡುವುದು ಹೇಗೆ? ವಿಡಿಯೋ ನೋಡಿ
ಗ್ರಹಗತಿಗಳು ಸರಿಯಾಗಿಲ್ಲದಿದ್ದರೆ ನಾನಾ ಸಮಸ್ಯೆಗಳು ಎದುರಾಗುತ್ತವೆ. ಈ ಗ್ರಹಗತಿಗಳು ಹಿರಿಯರನ್ನು ಮಾತ್ರವಲ್ಲ ಶಿಶುಗಳಿಗೂ ಕಾಡುತ್ತವೆ. ಅದೇ ಬಾಲಗ್ರಹ ಅಥವಾ ಬಾಲಾರಿಷ್ಟ ಎಂದು ಹೇಳಲಾಗುತ್ತದೆ. ಪುಟ್ಟ ಮಗುವಿಗೆ ಇರುವ ಬಾಲಾರಿಷ್ಟ ದೋಷವು ಅದರ ಯೋಗ ಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ. ಹಾಗಿದ್ದರೇ ಬಾಲಾರಿಷ್ಟದಿಂದ ಮಕ್ಕಳನ್ನ ಪಾರುಮಾಡುವುದು ಹೇಗೆ ಈ ವಿಡಿಯೋ ನೋಡಿ.
ಗ್ರಹಗತಿಗಳು ಸರಿಯಾಗಿಲ್ಲದಿದ್ದರೆ ನಾನಾ ಸಮಸ್ಯೆಗಳು ಎದುರಾಗುತ್ತವೆ. ಈ ಗ್ರಹಗತಿಗಳು ಹಿರಿಯರನ್ನು ಮಾತ್ರವಲ್ಲ ಶಿಶುಗಳಿಗೂ ಕಾಡುತ್ತವೆ. ಅದೇ ಬಾಲಗ್ರಹ ಎಂದು ಅನೇಕರು ಹೇಳುವ ಮಾತುಗಳನ್ನು ನಾವು ಕೇಳಿದ್ದೇವೆ. ಬಾಲಗ್ರಹ ಎಂಬ ಯಾವುದೇ ಗ್ರಹ ಇಲ್ಲ. ಆದರೆ ಮಕ್ಕಳಿಗೆ ಕಾಡುವ ಕೆಲವೊಂದು ಸಮಸ್ಯೆಗಳನ್ನು ಬಾಲಗ್ರಹ, ಬಾಲಗ್ರಹ ಚೇಷ್ಟೆ ಎಂದು ಕರೆಯಲಾಗುತ್ತದೆ. ಬಾಲಾರಿಷ್ಟ ದೋಷ ಎಂದರೆ ಶೈಶವಾವವಸ್ಥೆಯಲ್ಲಿ ಉಂಟಾಗುವ ತೊಂದರೆಗಳು. ಪುಟ್ಟ ಮಗುವಿಗೆ ಇರುವ ಬಾಲಾರಿಷ್ಟ ದೋಷವು ಅದರ ಯೋಗ ಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ. ಈ ದೋಷವನ್ನು ಬಾಲ ಗ್ರಹ ದೋಷ ಎಂದೂ ಕರೆಯುತ್ತಾರೆ. ಶಾಸ್ತ್ರ ಪ್ರಕಾರ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಈ ದೋಷದ ಪರಿಣಾಮವನ್ನು ತಪ್ಪಿಸಬಹುದಾಗಿದೆ. ಬಾಲಾರಿಷ್ಟ ದೋಷವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಮೊದಲ ಹಂತ ನಾಲ್ಕನೇ ವರ್ಷದವರೆಗೆ. ಎರಡನೇ ಹಂತ 5ನೇ ವರ್ಷದಿಂದ 9 ವರ್ಷದವರೆಗೆ ಇರುತ್ತದೆ. ಮೂರನೇ ಹಂತ 12ನೇ ವರ್ಷದವರೆಗೆ ಇರುತ್ತದೆ.
Latest Videos