Mother’s Day 2024: ನಿಮ್ಮ ಅಮ್ಮನಲ್ಲಿ ರಾಮಾಯಣದಲ್ಲಿ ಬರುವ ತಾಯಂದಿರ ಈ ಗುಣ ಇದ್ದೆ ಇರುತ್ತೆ ಒಮ್ಮೆ ಗಮನಿಸಿ

ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ದೇವಿಯ ಸ್ಥಾನಮಾನವಿದೆ. ತಾಯಿ ನಮ್ಮ ಜೀವನದಲ್ಲಿ ಬರುವ ಮೊದಲ ಶಿಕ್ಷಕಿ ಜೊತೆಗೆ ಸ್ಫೂರ್ತಿಯ ಮೂಲ. ಅವಳು ನಮಗೆ ಜೀವನದ ಬಗ್ಗೆ ಪ್ರಮುಖ ಪಾಠಗಳನ್ನು ಕಲಿಸುತ್ತಾಳೆ. ಅದರಂತೆ ರಾಮಾಯಣ ಕಾಲದ ಕೆಲವು ಧೈರ್ಯಶಾಲಿ ತಾಯಂದಿರ ಬಗ್ಗೆ ತಿಳಿದುಕೊಳ್ಳಬೇಕಿದೆ. ಅವರ ನಿಷ್ಠೆ, ತಾಳ್ಮೆ ಎಲ್ಲವೂ ನಮಗೆ ಮಾದರಿಯಾಗಲಿದೆ.

Mother’s Day 2024: ನಿಮ್ಮ ಅಮ್ಮನಲ್ಲಿ ರಾಮಾಯಣದಲ್ಲಿ ಬರುವ ತಾಯಂದಿರ ಈ ಗುಣ ಇದ್ದೆ ಇರುತ್ತೆ ಒಮ್ಮೆ ಗಮನಿಸಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 10, 2024 | 5:51 PM

ಜೀವನದಲ್ಲಿ ತಾಯಿಗಿಂತ ಮಿಗಿಲಾದ ದೇವರಿಲ್ಲ. ಆಕೆ ಪ್ರೀತಿ, ಭರವಸೆ, ಸ್ಫೂರ್ತಿ, ಸಹಾನುಭೂತಿ, ತ್ಯಾಗ, ಧೈರ್ಯ, ಜ್ಞಾನ ಮತ್ತು ಶಿಕ್ಷಣದ ಸಂಕೇತ. ಹಾಗಾಗಿಯೇ ತಾಯಿ ತನ್ನ ಮಕ್ಕಳನ್ನು ಯಾವುದೇ ತಾರತಮ್ಯವಿಲ್ಲದೆ ಪ್ರೀತಿಸುತ್ತಾಳೆ. ಒಂಬತ್ತು ತಿಂಗಳು ಕಾಲ ಗರ್ಭದಲ್ಲಿ ಪೋಷಿಸುತ್ತಾಳೆ ಜೀವನದುದ್ದಕ್ಕೂ ಅವರನ್ನು ರಕ್ಷಿಸುತ್ತಾಳೆ. ಇನ್ನು ತಾಯಿಯ ಮಹತ್ವವನ್ನು ಧಾರ್ಮಿಕ ಗ್ರಂಥಗಳಲ್ಲಿಯೂ ವಿವರಿಸಿರುವುದನ್ನು ನೀವು ಕಾಣಬಹುದು. ತಾಯಂದಿರ ದಿನಾಚರಣೆಯ ಹೊಸ್ತಿಲಲ್ಲಿರುವಾಗ, ರಾಮಾಯಣ ಕಾಲದಲ್ಲಿ ಇದ್ದಂತಹ ಅತ್ಯಂತ ಧೈರ್ಯಶಾಲಿ ಮತ್ತು ಶಕ್ತಿಶಾಲಿ ತಾಯಂದಿರ ಬಗ್ಗೆ ತಿಳಿದುಕೊಳ್ಳೋಣ. ಅವರ ಗುಣಗಳು ನಮಗೆ ದಾರಿದೀಪವಾಗಬಹುದು.

ರಾಮಾಯಣ ಕಾಲದಲ್ಲಿದ್ದ ತಾಯಂದಿರು

ರಾಮಾಯಣ ಕಾಲದಲ್ಲಿ ಅನೇಕ ಮಹಾನ್ ತಾಯಂದಿರು ಇದ್ದರು ಎಂಬುದು ನಿಮಗೂ ತಿಳಿದಿರಬಹುದು. ಅವರು ತಮ್ಮ ಧೈರ್ಯ, ಶಕ್ತಿ ಮತ್ತು ಮಾತೃ ಪ್ರೇಮದ ಜೊತೆಯಲ್ಲಿ ಅನೇಕ ಅದ್ಭುತ ಕೆಲಸಗಳನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ತಾಯಿ ಕೌಸಲ್ಯ

ತಾಯಿ ಕೌಸಲ್ಯ ಭಗವಾನ್ ಶ್ರೀ ರಾಮನ ತಾಯಿ. ಮರ್ಯಾದಾ ಪುರುಷೋತ್ತಮ ಶ್ರೀ ರಾಮನಿಗೆ ಜನ್ಮ ನೀಡಿದ್ದು ಮಾತ್ರವಲ್ಲ ಅವನು ರಾಜ್ಯವನ್ನು ತೊರೆದು ಕಾಡಿಗೆ ಹೊರಟಾಗ ಆಕೆ ಅದಕ್ಕೆ ಸಮ್ಮತಿಸಿ ತ್ಯಾಗ ಮತ್ತು ನಿಷ್ಠೆಗೆ ಹೆಸರುವಾಸಿಯಾದವಳು. ತನ್ನ ಮಗನ ಮೇಲೆ ಅಪಾರವಾದ ಪ್ರೀತಿ ಇದ್ದರೂ ಕೂಡ ಅವನ ನಡೆಯನ್ನು ಗೌರವಿಸಿದ್ದಳು. ತನ್ನ ಮಗನಿಗಿಲ್ಲದ ರಾಜ ಸೌಕರ್ಯ ತನಗೂ ಬೇಡ ಎಂದು ತ್ಯಜಿಸಿದ್ದಳು.

ತಾಯಿ ಸೀತಾ

ರಾಮಾಯಣದ ಪ್ರಮುಖ ಪಾತ್ರಗಳಲ್ಲಿ ಒಂದಾದ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಪತ್ನಿ ಸೀತಾ, ತಾಯಿ ಪ್ರೀತಿಗೆ ಅತ್ಯಂತ ಸುಂದರ ಉದಾಹರಣೆ. ಸೀತೆ ಲವ ಮತ್ತು ಕುಶ ಎಂಬ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ ಬಳಿಕ ಗಂಡ ಮತ್ತು ಕುಟುಂಬದವರು ಇಲ್ಲದೆಯೇ ಅವರನ್ನು ಬೆಳೆಸಿದಳು. ಆಕೆಯ ಬಗ್ಗೆ ಯಾರೇ ಏನೇ ಹೇಳಿದರೂ ಅದಕ್ಕೆ ಕಿವಿಗೊಡದೆ ಜೀವನ ನಡೆಸಿದಳು.

ಇದನ್ನೂ ಓದಿ: ಸಂಬಳ ಇಲ್ಲ, ರಜೆ ಇಲ್ಲ, ನಮಗಾಗಿ ದುಡಿಯುವ ಅಮ್ಮನ ಆರೋಗ್ಯದ ಕಾಳಜಿ​​ ಬೇಕಲ್ವ, ಹೀಗೆ ಮಾಡಿ

ತಾಯಿ ಸುಮಿತ್ರಾ

ತಾಯಿ ಸುಮಿತ್ರಾಳ ಪ್ರೀತಿ, ತ್ಯಾಗ ಮತ್ತು ತಾಳ್ಮೆ ಪ್ರತಿಯೊಬ್ಬ ಮಹಿಳೆಯೂ ರೂಢಿಸಿಕೊಳ್ಳುವಂತದ್ದು. ಆಕೆಯ ಮಗ ಲಕ್ಷ್ಮಣ ತನ್ನ ಸಹೋದರನ ಮೇಲಿರುವ ಅಚಲವಾದ ಪ್ರೀತಿ ಮತ್ತು ಭಕ್ತಿಯಿಂದಾಗಿ, ರಾಮನ ಜೊತೆ ವನವಾಸಕ್ಕೆ ಹೋದ. ಆದರೆ ಮಗನ ನಿರ್ಧಾರವನ್ನು ಆಕೆ ಸ್ವೀಕರಿಸಿದಳು. ಅಷ್ಟು ಕಷ್ಟವಿದ್ದರೂ ತನ್ನ ಮಗನನ್ನು ಆಕೆ ತಡೆಯಲಿಲ್ಲ.

ಮಾತಾ ಮಂಡೋದರಿ

ತಾಯಿ ಮಂಡೋದರಿ ಯಾವಾಗಲೂ ಸತ್ಯ ಮತ್ತು ನೀತಿಯ ಮಾರ್ಗದಲ್ಲಿ ನಡೆದವಳು. ಅವಳು ಯಾವಾಗಲೂ ಸೀತಾ ಮಾತೆಯ ಒಳಿತನ್ನು ಬಯಸಿದಳು, ಈ ಕಾರಣದಿಂದಾಗಿ ಸೀತಾ ದೇವಿಯ ತಾಯಿ ಮಂಡೋದರಿಯನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗುತ್ತದೆ.

ಇವರೆಲ್ಲರೂ ನಮಗೆ ಕಥೆಯ ಪಾತ್ರಗಳಾಗಿ ಕಂಡುಬಂದಿರಬಹುದು ಆದರೆ ಅವರು ತಮ್ಮ ಕರ್ತವ್ಯಗಳನ್ನು ನಿಭಾಯಿಸಿದ ರೀತಿ ನಮಗೆಲ್ಲಾ ಮಾದರಿಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ