Mothers Day 2024 : ಸಂಬಳ ಇಲ್ಲ, ರಜೆ ಇಲ್ಲ, ನಮಗಾಗಿ ದುಡಿಯುವ ಅಮ್ಮನ ಆರೋಗ್ಯದ ಕಾಳಜಿ ಬೇಕಲ್ವ, ಹೀಗೆ ಮಾಡಿ
ಒಂಬತ್ತು ತಿಂಗಳು ತನ್ನ ಗರ್ಭದಲ್ಲಿಟ್ಟುಕೊಂಡು ತನ್ನ ಕಂದನ ಆಗಮನಕ್ಕಾಗಿ ಕಾಯುವ ತಾಯಿ ಜೀವನ ಪರ್ಯಂತ ತನ್ನ ಮಕ್ಕಳ ಹಿತಕ್ಕಾಗಿ ಶ್ರಮಿಸುತ್ತಾಳೆ. ತನ್ನ ಆರೋಗ್ಯದ ಬಗ್ಗೆಯು ಕಾಳಜಿ ವಹಿಸದೇ ಸಂಬಳವಿಲ್ಲದೇ ದುಡಿಯುವ ಆಕೆಯ ಆರೋಗ್ಯದ ಬಗ್ಗೆಯು ಕಾಳಜಿ ವಹಿಸುವುದು ಅಗತ್ಯ. ಹೀಗಾಗಿ ನಲವತ್ತು, ಐವತ್ತು ಸಮೀಪಿಸುತ್ತಿದ್ದಂತೆ ಆಕೆಗೆ ನೂರಾರು ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಮಕ್ಕಳಾದ ನಾವುಗಳು ಆಕೆಯ ಆರೋಗ್ಯದ ಕಾಳಜಿಯ ಕುರಿತಾದ ಕೆಲವು ಟಿಪ್ಸ್ ಗಳು ಇಲ್ಲಿವೆ.
ತಾಯಿಯೆಂದರೆ ಕಣ್ಣಿಗೆ ಕಾಣುವ ದೇವರು ನಿಜ. ಆದರೆ ಆಕೆಯು ನಮ್ಮಂತೆ ಮನುಷ್ಯಳು ಎಂಬುದನ್ನು ಮರೆಯುವಂತಿಲ್ಲ. ವರ್ಷಪೂರ್ತಿ ಸಂಬಳವಿಲ್ಲದೇ, ರಜೆಯಿಲ್ಲದೇ ದುಡಿಯುವ ಆಕೆಗೂ ಆಯಾಸ ಸುಸ್ತು ಆಗುತ್ತದೆ. ಹೀಗಾಗಿ ಮಕ್ಕಳಾದವರು ಇದನ್ನು ಅರಿತು ಆಕೆಗೆ ದೈಹಿಕ ಹಾಗೂ ಮಾನಸಿಕವಾಗಿ ಜೊತೆಗೆ ನಿಂತರೆ ಮತ್ತೇನನ್ನು ಬಯಸುವುದಿಲ್ಲ ಆ ತಾಯಿ ಜೀವ. ಹೀಗಾಗಿ ಅಮ್ಮನನ್ನು ಕಾಳಜಿಯಿಂದ ನೋಡುತ್ತಾ ಆರೈಕೆ ಮಾಡುವುದು ಮಕ್ಕಳ ಕರ್ತವ್ಯವಾಗಿದೆ.
ತಾಯಿಯ ಆರೋಗ್ಯ ಕಾಳಜಿಯ ಕುರಿತಾದ ಸಲಹೆಗಳು ಇಲ್ಲಿದೆ:
* ತಾಯಿಯ ಆರೋಗ್ಯದ ಬಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ : ದಿನವಿಡೀ ಮನೆಕೆಲಸ, ಜವಾಬ್ದಾರಿಯೊಂದಿಗೆ ಜೀವನವನ್ನು ಸಾಗಿಸುವ ತಾಯಿಯ ಆರೋಗ್ಯವು ಹಾಳಾಗುತ್ತವೆ. ಅದರಲ್ಲಿವಯಸ್ಸು 40 ಸಮೀಪಿಸುತ್ತಿದ್ದಂತೆ ಆಕೆಯ ಆರೋಗ್ಯವನ್ನು ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿ ಆರೋಗ್ಯ ಕಾಳಜಿಯನ್ನು ವಹಿಸಿ.
* ತಾಯಿಯ ಆಹಾರದ ಬಗ್ಗೆ ಕಾಳಜಿ ವಹಿಸಿ : ಮುಂಜಾನೆಯಿಂದ ರಾತ್ರಿ ಮಲಗುವವರೆಗೂ ಅಮ್ಮ ದಿನವಿಡೀ ಮನೆಕೆಲಸ ಮಾಡುತ್ತಾ ತನ್ನ ಜವಾಬ್ದಾರಿ ಪೂರೈಸುತ್ತ ನಿರತಳಾಗುತ್ತಾಳೆ. ಆಗ ಅವರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲೇ ಅರ್ಧ ದಿನ ಕಳೆದು ಬಿಡುತ್ತಾರೆ. ಹಾಗಾಗಿ ಇದು ಮಾಡುವುದು ತೀರಾ ತಪ್ಪು. ಅವರ ಆಹಾರದಲ್ಲಿ ಫೈಬರ್, ಪ್ರೋಟೀನ್ ಆಹಾರ, ಹಣ್ಣು, ಹಸಿರು ತರಕಾರಿ ಸೇರಿಸಲು ಹೇಳಿ.
* ವಿಶ್ರಾಂತಿ ತೆಗೆದುಕೊಳ್ಳುವಂತೆ ನೋಡಿಕೊಳ್ಳಿ : ವಯಸ್ಸು ಆದಂತೆ ದೇಹಕ್ಕೆ ವಿಶ್ರಾಂತಿ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ನಿಮ್ಮ ತಾಯಿಯು ಕೆಲಸದ ನಡುವೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ಗಮನಿಸಿ. ಕನಿಷ್ಠ ಎಂಟರಿಂದ ಒಂಬತ್ತು ಗಂಟೆಗಳ ಕಾಲ ನಿದ್ದೆ ಮಾಡುವಂತೆ ನೋಡಿಕೊಳ್ಳಿ. ನಿಮಗೆ ಬಿಡುವಿದ್ದರೆ ಮನೆಯ ಕೆಲಸಗಳಲ್ಲಿ ನೀವು ಕೈ ಜೋಡಿಸುವುದು ಉತ್ತಮ.
ಇದನ್ನೂ ಓದಿ: ಅಮ್ಮಂದಿರ ದಿನಕ್ಕೆ ನಿಮ್ಮ ಪ್ರೀತಿಯ ಅಮ್ಮನಿಗೆ ಹೀಗೆ ಶುಭಾಶಯ ಕೋರಿ!
* ದೈನಂದಿನ ವ್ಯಾಯಾಮ ಮಾಡುವಂತೆ ಪ್ರೇರೆಪಿಸಿ : ಕೆಲಸದ ನಡುವೆ ಉತ್ತಮ ನಿದ್ದೆ, ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ದೈನಂದಿನ ವ್ಯಾಯಾಮವು ಕೂಡ ಅಷ್ಟೇ ಮುಖ್ಯವಾಗಿದೆ. ಆರೋಗ್ಯವಂತರಾಗಿರಬೇಕಾದರೆ ಬೆಳಗ್ಗೆ ವೇಳೆ ವ್ಯಾಯಾಮ, ಸಂಜೆಯ ವೇಳೆ ವಾಕಿಂಗ್ ಮಾಡುವಂತೆ ಪ್ರೇರೆಪಿಸುವುದರಿಂದ ತಾಯಿಯ ಆರೋಗ್ಯವನ್ನು ಉತ್ತಮವಾಗಿಡುವಂತೆ ನೋಡಿಕೊಳ್ಳಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ