Basava Jayanti 2024: ಕಾಯಕ ತತ್ವವನ್ನು ಸಾರಿದ ವಿಶ್ವಗುರು ಬಸವಣ್ಣ

ಕಾಯಕವೇ ಕೈಲಾಸ ಎಂದು ಮಾನವ ಕುಲಕ್ಕೆ ಸಂದೇಶವನ್ನು ನೀಡಿದ ಬಸವಣ್ಣನವರ ಹುಟ್ಟಿದ ದಿನ ಇಂದು. ಸಮಾಜಕ್ಕೆ ತನ್ನದೇ ಆದ ತತ್ವಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ ಮಹಾ ಸಂತನ ಜನ್ಮದಿನವಾದ ಇಂದು (ಮೇ 10) ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಕವಿ-ತತ್ವಜ್ಞಾನಿಯಾಗಿ ಸಮಾಜದ ಉದ್ದಾರಕ್ಕೆ ಜನ್ಮತೆತ್ತ ಈ ಬಸವಣ್ಣ ಸಮಾಜಕ್ಕೆ ನೀಡಿದ ಕೊಡುಗೆಗಳೇನು ಎನ್ನುವ ಮಾಹಿತಿಯು ಇಲ್ಲಿದೆ.

Basava Jayanti 2024: ಕಾಯಕ ತತ್ವವನ್ನು ಸಾರಿದ ವಿಶ್ವಗುರು ಬಸವಣ್ಣ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 10, 2024 | 10:46 AM

ಬಸವಣ್ಣ ಅವರು ಶೈವ ಧರ್ಮದ ಭಕ್ತಿ ಚಳವಳಿಯಲ್ಲಿ ಪ್ರಸಿದ್ಧ ಸಂತರಾಗಿ ಗುರುತಿಸಿಕೊಂಡಿದ್ದವರು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮೇಲು ಕೀಳು, ಜಾತಿ ಧರ್ಮ ಹೀಗೆ ನೊಂದವರ ಪರವಾಗಿ ನಿಂತ ಮಹಾನುಭಾವ. ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಬಸವಣ್ಣನವರು ಕ್ರಾಂತಿಯ ಬೀಜವನ್ನು ಬಿತ್ತಿದ ಹರಿಕಾರ. ‘ಕಾಯಕವೇ ಕೈಲಾಸ’, ‘ವಸುದೈವ ಕುಟುಂಬಕಂ’ ಹೀಗೆ ಹಲವಾರು ತತ್ವಗಳನ್ನು ಸಾರಿದ ಮಹಾನ್ ಭಾವನನ್ನು ಇಂದು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಸವ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಸಮಾಜಕ್ಕೆ ಸಂದೇಶವನ್ನು ಸಾರಿದ ಬಸವೇಶ್ವರರ ಜನ್ಮ ವಾರ್ಷಿಕೋತ್ಸವವಾಗಿದೆ.

ಸಾರ್ವಜನಿಕ ಬಸವ ಜಯಂತಿ ಆಚರಣೆ ಶುರುವಾದದ್ದು ಯಾವಾಗ?

ಕರ್ನಾಟಕದ ಗಾಂಧಿಯಂದು ಪ್ರಸಿದ್ಧರಾದ ಹರ್ಡೇಕರ ಮಂಜಪ್ಪನವರು 1913ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿಯನ್ನು ಆಚರಿಸಲು ಮುಂದಾದರು. ವೀರಶೈವ, ಲಿಂಗಾಯತ ಸಮಾಜದ ಸಂಘಟನೆಗಾಗಿ ಬಸವ ಜಯಂತಿ ಆಚರಿಸಲು ಹೊರಟ ಅವರಿಗೆ ಬಸವಣ್ಣ ಜನಿಸಿದ ದಿನಾಂಕದ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಆ ಸಮಯದಲ್ಲಿ ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಕ್ಷಯ ತದಿಗೆಯಂದು ಬಸವ ಜಯಂತಿ ಆಚರಿಸಲು ಸೂಚಿಸಿದರು. ಅಂದಿನಿಂದ ಪ್ರತಿ ವರ್ಷ ಅಕ್ಷಯ ತೃತೀಯದಂದು ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ; ಅಮ್ಮಂದಿರ ದಿನಕ್ಕೆ ನಿಮ್ಮ ಪ್ರೀತಿಯ ಅಮ್ಮನಿಗೆ ಹೀಗೆ ಶುಭಾಶಯ ಕೋರಿ!

ಬಸವ ಜಯಂತಿ ಆಚರಣೆ ಹೇಗೆ?

ಕರ್ನಾಟಕದಲ್ಲಿ ಬಸವ ಜಯಂತಿಯಂದು ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ. ಅದಲ್ಲದೇ, ನಾವಿಂದು ಮಹಾಸಂತ ಬಸವಣ್ಣನವರ ತತ್ವಗಳನ್ನು ಸ್ಮರಿಸುವ ದಿನವಾಗಿದೆ. ಹೀಗಾಗಿ ವಿವಿದೆಡೆಗಳಲ್ಲಿ ಲಿಂಗಾಯತ ಸಮಿತಿಗಳು ವಿವಿಧ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ