Mothers Day Special 2024: ಅಮ್ಮಂದಿರ ದಿನಕ್ಕೆ ನಿಮ್ಮ ಪ್ರೀತಿಯ ಅಮ್ಮನಿಗೆ ಹೀಗೆ ಶುಭಾಶಯ ಕೋರಿ!
ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುವ ಮಾತಿದೆ. ಕಣ್ಣಿಗೆ ಕಾಣುವ ದೇವರೆಂದರೆ ಅದುವೇ ತಾಯಿ. ತಾಯಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದ್ದು, ಅದುವೇ ವಿಶ್ವ ತಾಯಂದಿರ ದಿನ. ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 12 ರಂದು ಆಚರಿಸಲಾಗುತ್ತಿದ್ದು, ಈ ದಿನದಂದು ನಿಮ್ಮ ಅಮ್ಮನಿಗೆ ವಿಶೇಷವಾಗಿ ಶುಭಾಶಯ ತಿಳಿಸಲು ಬಯಸುವಿರಾದ್ರೆ ಈ ರೀತಿಯಾಗಿ ಶುಭ ಕೋರಬಹುದು.
ಅಮ್ಮ, ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ ? ಅಳುವ ಕಂದನ ಮುದ್ದು ಮುದ್ದಾದ ತೊದಲ ನುಡಿಯಿಂದ. ಈ “ಅಮ್ಮ” ಎನ್ನುವ ಎರಡಕ್ಷರವು ಎಲ್ಲಾ ನೋವನ್ನು ಮರೆಸುತ್ತದೆ. ಅಮ್ಮ ಜೊತೆಗಿದ್ದರೆ ಇದ್ದು ಬಿಟ್ಟರೆ ಜಗತ್ತನ್ನೇ ಜಯಿಸುವಷ್ಟು ಆನೆ ಬಲ ಬರುತ್ತದೆ. ಜೀವ ಕೊಟ್ಟ ದೇವತೆಯನ್ನು ಎಷ್ಟು ಹೊಗಳಿದರೂ ಕೂಡ ಕಡಿಮೆಯೇ. ಆದರೆ ವಿಶ್ವ ತಾಯಂದಿರ ದಿನದಂದು ಆಕೆಯ ತ್ಯಾಗ, ಪ್ರೀತಿ, ಕಾಳಜಿಯನ್ನು ನೆನಪಿಸಿ ಆಕೆಗೆ ಗೌರವವನ್ನು ಸೂಚಿಸುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ಪ್ರೀತಿಯ ಅಮ್ಮನಿಗೆ ಶುಭಾಶಯಗಳನ್ನು ಕೋರಿ ಅಮ್ಮನ ಮನಸ್ಸನ್ನು ಗೆಲ್ಲಿ.
ಅಮ್ಮಂದಿರ ದಿನಕ್ಕೆ ಶುಭಾಶಯಗಳು ಇಲ್ಲಿದೆ:
- ಅಮ್ಮ… ನೀವೇ ನನ್ನ ಜಗತ್ತು. ನಿಮ್ಮ ವಾತ್ಸಲ್ಯವೇ ನನ್ನ ಬದುಕಿನ ಶಕ್ತಿ… ನಿನ್ನ ಪ್ರೀತಿ ಕಾಳಜಿಗೆ ಸರಿಸಾಟಿ ಯಾರಿಲ್ಲ, ಅಮ್ಮಂದಿರ ದಿನದ ಶುಭಾಶಯಗಳು
- ಜೀವನದ ಆರಂಭದಲ್ಲಿ ಬದುಕಿಗೆ ಯಾವುದೇ ಮಾರ್ಗಸೂಚಿಯಿರುವುದಿಲ್ಲ, ಬದುಕಿಗೆ ದಾರಿ ತೋರುವವಳು ತಾಯಿಯೊಬ್ಬಳೇ. ನನ್ನ ಬದುಕಿನ ಮಾರ್ಗದರ್ಶಿಗೆ ತಾಯಂದಿರ ದಿನದ ಶುಭಾಶಯಗಳು
- ಉಸಿರು ನೀಡಿದ ದೇವತೆ ನೀನು … ನನ್ನ ಬದುಕಿನ ಮಾರ್ಗದರ್ಶಿ ನೀನು… ನೀನಿಲ್ಲದೆ ಜಗವೇ ಇಲ್ಲ… ನನ್ನ ಪ್ರೀತಿಯ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು
- ದೇವರು ನನಗೆ ನೀಡಿದ ಶ್ರೇಷ್ಠ ಸಂಪತ್ತು ನೀವು… ಅಮ್ಮ ಐ ಲವ್ ಯು…
- ಅಮ್ಮ…. ಸದಾ ಕಾಲ ನನಗೆ ಮಾರ್ಗದರ್ಶನ ನೀಡಿದಿರಿ, ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿದ್ದಿರಿ… ಅಮ್ಮ… ನಾನು ನಿಮಗೆ ಸದಾ ಋಣಿ… ನನ್ನ ಪ್ರೀತಿಯ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು
- ಮಮತೆಯೇ ಮೂರ್ತಿ ಬದುಕಿಗೆ ಸ್ಫೂರ್ತಿ. ಕಣ್ಣಿಗೆ ಕಾಣುವ ದೇವರಿಗೆ ತಾಯಂದಿರ ದಿನದ ಶುಭಾಶಯಗಳು
- ಅಮ್ಮ ನಿಮ್ಮ ಪ್ರೀತಿ ನೋವನ್ನು ಮರೆಸುತ್ತದೆ. ನಿಮ್ಮ ಮಾತುಗಳು ಬದುಕಿಗೆ ಚೈತನ್ಯ ತುಂಬುತ್ತದೆ. ಅಮ್ಮ ತಾಯಂದಿರ ದಿನದ ಶುಭಾಶಯಗಳು.
- ಮನೆಯೇ ಮೊದಲ ಪಾಠ ಶಾಲೆ, ಅಮ್ಮ ತಾನೇ ಮೊದಲ ಗುರು… ಅಮ್ಮಂದಿರ ದಿನದ ಶುಭಾಶಯಗಳು ಅಮ್ಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ