World Migratory Bird Day 2024 : ಆವಾಸ ಸ್ಥಾನಗಳ ನಾಶ, ಕಣ್ಮರೆಯತ್ತ ವಲಸೆ ಹಕ್ಕಿಗಳು
ಹಕ್ಕಿಗಳ ಪ್ರಪಂಚವೇ ಹಾಗೆ, ಆಹಾರ ಹುಡುಕುತ್ತ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವ ಹಕ್ಕಿಗಳ ಜಗತ್ತು ಬಹಳ ವಿಸ್ತಾರವಾಗಿದೆ. ಈ ವಲಸೆ ಹಕ್ಕಿಗಳು ಹಾಗೂ ಅವುಗಳ ಆವಾಸ ಸ್ಥಾನಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ವಲಸೆ ಹಕ್ಕಿಗಳ ದಿನವನ್ನು ಮೇ ತಿಂಗಳ ಎರಡನೇ ಶನಿವಾರದಂದು ಆಚರಿಸಲಾಗುತ್ತಿದೆ.
ವಲಸೆ ಹಕ್ಕಿಗಳ ಜಗತ್ತಂತೂ ಊಹೆ ಮಾಡುವುದು ಕಷ್ಟ. ಎಲ್ಲೋ ಸಾವಿರಾರು ಕಿಮೀ ದೂರದಿಂದ ಆಹಾರ ಹುಡುಕುತ್ತಾ ಆಕಾಶದಲ್ಲಿ ಕ್ರಮಿಸಿರುತ್ತವೆ. ಆದರೆ ಹೀಗೆ ವಲಸೆ ಬಂದ ಪಕ್ಷಿಗಳು ಸ್ವಲ್ಪ ಸಮಯದವರೆಗೂ ಅಲ್ಲೇ ಇದ್ದು ಮತ್ತೆ ತನ್ನ ಹಳೆಯ ಗೂಡನ್ನು ಸೇರುತ್ತವೆ. ಕರ್ನಾಟಕಕ್ಕೂ ದೂರದ ವಿದೇಶದಿಂದ ವಲಸೆ ಬರುವ ಪಕ್ಷಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪರಿಸರದಲ್ಲಾಗುವ ಬದಲಾವಣೆ, ಹವಾಮಾನ ವೈಪರೀತ್ಯ, ನೀರು ಹಾಗೂ ಆಹಾರದ ಕೊರತೆಯಿಂದ ವಲಸೆ ಹಕ್ಕಿಗಳನ್ನು ಕಾಣುವುದೇ ಅಪರೂಪ ಎನ್ನುವಂತಾಗಿದೆ. ಈ ವಲಸೆ ಹಕ್ಕಿಗಳು ಮತ್ತು ಅವುಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ವಾರ್ಷಿಕವಾಗಿ ಎರಡು ವಿಶ್ವ ವಲಸೆ ಹಕ್ಕಿಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವ ವಲಸೆ ಹಕ್ಕಿಗಳ ದಿನವನ್ನು ಮೇ ಹಾಗೂ ಅಕ್ಟೋಬರ್ ತಿಂಗಳ ಎರಡನೇ ಶನಿವಾರದಂದು ಆಚರಿಸಲಾಗುತ್ತದೆ. ಈ ಬಾರೀ ವಿಶ್ವ ವಲಸೆ ಹಕ್ಕಿಗಳ ದಿನವನ್ನು ಮೇ 11 ರಂದು ಆಚರಿಸಲಾಗುತ್ತಿದೆ.
ವಿಶ್ವ ವಲಸೆ ಹಕ್ಕಿ ದಿನದ ಇತಿಹಾಸ
ವಿಶ್ವ ವಲಸೆ ಹಕ್ಕಿ ದಿನವನ್ನು 2006 ರಲ್ಲಿ ಆಫ್ರಿಕನ್-ಯುರೇಷಿಯನ್ ವಲಸೆ ಜಲಪಕ್ಷಿಗಳ ಸಂರಕ್ಷಣಾ ಒಪ್ಪಂದದ ಸಚಿವಾಲಯದ ಜೊತೆಗೆ ಕಾಡು ಪ್ರಾಣಿಗಳ (CMS) ಸಂರಕ್ಷಣಾ ಸಮಾವೇಶದ ಕಾರ್ಯದರ್ಶಿಯ ಸಹಯೋಗದೊಂದಿಗೆ ಪ್ರಾರಂಭಿಸಿತು. 1993 ರಲ್ಲಿ, ಯುಎಸ್ ಮೀನು ಮತ್ತು ವನ್ಯಜೀವಿ ಸೇವೆ, ಸ್ಮಿತ್ಸೋನಿಯನ್ ವಲಸೆ ಹಕ್ಕಿ ಕೇಂದ್ರ ಮತ್ತು ಕಾರ್ನೆಲ್ ಲ್ಯಾಬೊರೇಟರಿ ಆಫ್ ಆರ್ನಿಥಾಲಜಿ ‘ಅಂತರಾಷ್ಟ್ರೀಯ ವಲಸೆ ಹಕ್ಕಿ ದಿನ’ ಆಚರಿಸಲು ಮುಂದಾಯಿತು. ಈ ಮೂಲಕ ಯುಎಸ್ ನಾದ್ಯಂತ ಪಕ್ಷಿ ಹಬ್ಬಗಳು ಮತ್ತು ಸಂಬಂಧಿತ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಆದಾದ ಕೆಲವು ವರ್ಷಗಳ ಬಳಿಕ 2005 ರಲ್ಲಿ, AEWA ಸೆಕ್ರೆಟರಿಯೇಟ್ ವಲಸೆ ವಾಟರ್ ಬರ್ಡ್ ಡೇಸ್ ಅನ್ನು ಪ್ರಾರಂಭಿಸಿತು. ಇದು ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ನ ಕೆಲವು ಭಾಗಗಳಲ್ಲಿ ನಡೆಯಿತು. ಆಫ್ರಿಕನ್-ಯುರೇಷಿಯನ್ ಪ್ರದೇಶದಲ್ಲಿ ಯಶಸ್ಸು ಕಂಡ ಕಾರಣ, ಜಗತ್ತಿನಾದ್ಯಂತ ಎಲ್ಲರೂ ವಲಸೆ ಹಕ್ಕಿಗಳ ದಿನವನ್ನು ಆಚರಿಸಲು ಮುಂದಾಯಿತು.
ಇದನ್ನೂ ಓದಿ: ತಂತ್ರಜ್ಞಾನದ ಅಭಿವೃದ್ಧಿ, ದೇಶ ಸುಭದ್ರ ಸಂಪದ್ಭರಿತ!
ವಿಶ್ವ ವಲಸೆ ಹಕ್ಕಿ ದಿನದ ಮಹತ್ವ ಹಾಗೂ ಆಚರಣೆ ಹೇಗೆ?
ವಿಶ್ವ ವಲಸೆ ಹಕ್ಕಿಗಳ ದಿನದ ಮುಖ್ಯ ಉದ್ದೇಶವೇ, ವಲಸೆ ಹಕ್ಕಿಗಳು ಮತ್ತು ಅವುಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ಈ ದಿನವು ಪ್ರಪಂಚದಾದ್ಯಂತ ವಲಸೆ ಹಕ್ಕಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಾಗುತ್ತದೆ. ಈ ದಿನದಂದು ಸಂಸ್ಥೆಗಳು ಪಕ್ಷಿ ಹಬ್ಬಗಳು, ಶಿಕ್ಷಣ ಕಾರ್ಯಕ್ರಮಗಳು, ಪ್ರದರ್ಶನಗಳು ಮತ್ತು ಪಕ್ಷಿ-ವೀಕ್ಷಣೆಯ ವಿಹಾರಗಳಂತಹ ಚಟುವಟಿಕೆಗಳನ್ನು ಆಯೋಜಿಸುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ