ಗಮನಿಸಿ; ಕ್ಯಾಷ್ ರೂಪದಲ್ಲಿ ಹಣಕಾಸು ಸಂಸ್ಥೆಗಳು 20,000 ರೂಗಿಂತ ಹೆಚ್ಚಿನ ಮೊತ್ತದ ಸಾಲ ಕೊಡುವಂತಿಲ್ಲ; ಸೆಕ್ಷನ್ 269ಎಸ್​ಎಸ್ ನಿಯಮ ತಿಳಿದಿರಿ

IT act section 269SS on loan payout: ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು 20,000 ರೂಗಿಂತ ಹೆಚ್ಚಿ ಮೊತ್ತದ ಸಾಲವನ್ನು ಕ್ಯಾಷ್ ರೂಪದಲ್ಲಿ ವಿತರಿಸುವಂತಿಲ್ಲ ಎಂದು ಆರ್​ಬಿಐ ಅಪ್ಪಣೆ ಮಾಡಿದೆ. ತಿರುವನಂತಪುರಂ ವಿಭಾಗದ ಆರ್​ಬಿಐ ಕೇರಳ ಮೂಲದ ಮುತ್ತೂಟ್ ಫೈನಾನ್ಸ್ ಮತ್ತು ಮಣಪ್ಪುರಂ ಫೈನಾನ್ಸ್ ಕಂಪನಿಗಳಿಗೆ ಈ ನಿರ್ದೇಶನ ನೀಡಿದೆ. ಈ ಸಂಸ್ಥೆಗಳು ಚಿನ್ನದ ಮೇಲಿನ ಸಾಲವನ್ನು ಕ್ಯಾಷ್​ನಲ್ಲಿ ವಿತರಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ನೋಟೀಸ್ ಜಾರಿ ಮಾಡಲಾಗಿದೆ. ಕೆಲ ವಾರಗಳ ಹಿಂದೆ ಐಐಎಫ್​ಎಲ್ ಫೈನಾನ್ಸ್ ಸಂಸ್ಥೆಯನ್ನು ಇದೇ ಕಾರಣಕ್ಕೆ ಆರ್​ಬಿಐ ನಿರ್ಬಂಧಿಸಿತ್ತು.

ಗಮನಿಸಿ; ಕ್ಯಾಷ್ ರೂಪದಲ್ಲಿ ಹಣಕಾಸು ಸಂಸ್ಥೆಗಳು 20,000 ರೂಗಿಂತ ಹೆಚ್ಚಿನ ಮೊತ್ತದ ಸಾಲ ಕೊಡುವಂತಿಲ್ಲ; ಸೆಕ್ಷನ್ 269ಎಸ್​ಎಸ್ ನಿಯಮ ತಿಳಿದಿರಿ
ಕ್ಯಾಷ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2024 | 11:59 AM

ನವದೆಹಲಿ, ಮೇ 12: ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್​ಬಿಎಫ್​ಸಿ) ಸಾಲ ವಿತರಣೆ ವೇಳೆ ಆದಾಯ ತೆರಿಗೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ. ಐಐಎಫ್​ಎಲ್ ಫೈನಾನ್ಸ್ ಸಂಸ್ಥೆಯ ಗೋಲ್ಡ್ ಲೋನ್ ವಿತರಣೆಯಲ್ಲಿ ನಿಯಮ ಮೀರಿಲಾಗಿರುವುದು ಕಂಡು ಬಂದಿದ್ದು, ಆರ್​ಬಿಐ ಕೆಲ ವಾರಗಳ ಹಿಂದೆ ನಿರ್ಬಂಧ ಹೇರಿತ್ತು. ಅದರ ಬೆನ್ನಲ್ಲೇ ಗೋಲ್ಡ್ ಲೋನ್​ಗಳನ್ನು ಹೆಚ್ಚಾಗಿ ವಿತರಿಸುವ ಕೆಲ ಎನ್​ಬಿಎಫ್​​ಸಿಗಳಿಗೆ ಮೇ 8ರಂದು ಆರ್​ಬಿಐ ಪತ್ರ ಬರೆದು ಎಚ್ಚರಿಸಿದೆ. ಅದರಲ್ಲೂ ಕೇರಳ ಮೂಲದ ಮಣಪ್ಪುರಂ ಫೈನಾನ್ಸ್, ಮುತ್ತೂಟ್ ಫೈನಾನ್ಸ್ ಕಂಪನಿಗಳಿಗೆ ಈ ಪತ್ರ ಬರೆದಿರುವುದು ತಿಳಿದುಬಂದಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ಟಿ ಮತ್ತು 269 ಎಸ್​ಎಸ್​ನ ನಿಯಮಗಳನ್ನು (IT act sections) ಪಾಲಿಸುವಂತೆ ಈ ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ. ಈ ನಿಯಮದ ಪ್ರಕಾರ ಸಾಲ ನೀಡುವಾಗ 20,000 ರೂಗಿಂತ ಹೆಚ್ಚು ನಗದು (cash payouts) ಇರಬಾರದು. ಅಂದರೆ, ಖಾತೆಗೆ ಹಣ ವರ್ಗಾವಣೆ ಮಾಡಬೇಕಾಗುತ್ತದೆ.

ಐಟಿ ಕಾಯ್ದೆ 269ಎಸ್ಎಸ್ ಸೆಕ್ಷನ್ ಏನು ಹೇಳುತ್ತೆ?

ಒಬ್ಬ ವ್ಯಕ್ತಿ ಇನೊಬ್ಬ ವ್ಯಕ್ತಿಯಿಂದ 20,000 ರೂಗಿಂತ ಹೆಚ್ಚಿನ ಹಣದ ಸಾಲ ನೀಡುತ್ತಿದ್ದರೆ ಕ್ಯಾಷ್ ರೂಪದಲ್ಲಿ ಅದನ್ನು ಕೊಡುವಂತಿಲ್ಲ. ಅಕೌಂಟ್ ಪೇಯೀ ಚೆಕ್, ಬ್ಯಾಂಕ್ ಡ್ರಾಫ್ಟ್, ಯುಪಿಐ ಇತ್ಯಾದಿ ಮೂಲಕ ಹಣದ ವಿತರಣೆ ಮಾಡಬೇಕು.

ಟಾಪ್ ಅಪ್ ಲೋನ್ ನೀಡುವಾಗ, ಒಟ್ಟು ಸಾಲದ ಮೊತ್ತ 20,000 ರೂಗಿಂತ ಹೆಚ್ಚಿದ್ದರೆ ಆಗಲೂ ಕೂಡ ಕ್ಯಾಷ್​ನಲ್ಲಿ ಹಣ ಕೊಡುವಂತಿಲ್ಲ.

ಇದನ್ನೂ ಓದಿ: ಪರ್ಸನಲ್ ಲೋನ್​ನಿಂದ ಲಾಭ ಏನು, ನಷ್ಟ ಏನು? ಇಲ್ಲಿದೆ ನೀವು ತಿಳಿದಿರಬೇಕಾದ ಅಂಶಗಳು

ಉದಾಹರಣೆಗೆ, ಹಣಕಾಸು ಸಂಸ್ಥೆಯೊಂದು ಆಕಾಶ್ ಎಂಬ ವ್ಯಕ್ತಿಗೆ 50,000 ರೂ ಸಾಲ ನೀಡಿರುತ್ತದೆ ಎಂದಿಟ್ಟುಕೊಳ್ಳಿ. ಆಕಾಶ್ 40,000 ರೂ ಸಾಲ ಮರುಪಾವತಿಸಿರುತ್ತಾನೆ. ಇನ್ನೂ 10,000 ರೂ ಮಾತ್ರವೇ ಸಾಲ ಬಾಕಿ ಇರುತ್ತದೆ. ಈ ವೇಳೆ ಮತ್ತೆ ತುರ್ತಾಗಿ ಹಣದ ಅಗತ್ಯ ಬಿದ್ದು 15,000 ರೂ ಟಾಪ್ ಅಪ್ ಲೋನ್ ಬೇಕಾಗುತ್ತದೆ. ಇದು 20,000 ರೂನ ಮಿತಿಯೊಳಗೆ ಬರುತ್ತದೆ ಎಂದು ಹೇಳಿ ಹಣಕಾಸು ಸಂಸ್ಥೆ ಕ್ಯಾಷ್​ನಲ್ಲಿ ಹಣ ನೀಡುವಂತಿಲ್ಲ. ಯಾಕೆಂದರೆ ಸಾಲ ಬಾಕಿ 10,000 ರೂ ಸೇರಿದರೆ ಒಟ್ಟು ಸಾಲದ ಮೊತ್ತ 25,000 ರೂ ಆಗುತ್ತದೆ.

ಸೆಕ್ಷನ್ 269ಎಸ್​ಎಸ್ ಪ್ರಕಾರ ಯಾವ ರೂಪದಲ್ಲಿ ಸಾಲ, ಠೇವಣಿಗಳನ್ನು ನೀಡಬೇಕು?

  • ಅಕೌಂಟ್ ಪೇಯೀ ಚೆಕ್
  • ಅಕೌಂಟ್ ಪೇಯೀ ಬ್ಯಾಂಕ್ ಡ್ರಾಫ್ಟ್
  • ಬ್ಯಾಂಕ್ ಇಸಿಎಸ್
  • ನೆಟ್ ಬ್ಯಾಂಕಿಂಗ್
  • ಕ್ರೆಡಿಟ್ ಕಾರ್ಡ್
  • ಡೆಬಿಟ್ ಕಾರ್ಡ್
  • ಆರ್​ಟಿಜಿಎಸ್
  • ಎನ್​ಇಎಫ್​ಟಿ
  • ಭೀಮ್, ಯುಪಿಐ
  • ಐಎಂಪಿಎಸ್

ಇದನ್ನೂ ಓದಿ: ನಿಶ್ಚಿತ ಠೇವಣಿಯೋ, ಆವರ್ತಿತ ಠೇವಣಿಯೋ? ಯಾವುದು ನಿಮಗೆ ಸೂಕ್ತ? ಇಲ್ಲಿದೆ ವಿವರ

ಬ್ಯಾಂಕ್​ನಲ್ಲಿ ಕ್ಯಾಷ್ ಡೆಪಾಸಿಟ್ ಇಡಬಾರದಾ?

ಸೆಕ್ಷನ್ 269ಎಸ್​ಎಸ್​ನಲ್ಲಿ ಕೆಲ ವಿನಾಯಿತಿಗಳಿವೆ. ಬ್ಯಾಂಕ್​ಗಳಿಗೆ ನೀವು ಮಾಡುವ ಪಾವತಿಗಳನ್ನು ಕ್ಯಾಷ್​ನಲ್ಲಿ ಮಾಡಲಡ್ಡಿ ಇಲ್ಲ. ಪೋಸ್ಟ್ ಆಫೀಸ್, ಸಹಕಾರಿ ಬ್ಯಾಂಕ್​ಗಳಲ್ಲೂ 20,000 ರೂಗಿಂತ ಹೆಚ್ಚಿನ ಮೊತ್ತದ ಕ್ಯಾಷ್ ನೀಡಬಹುದು. ಸರ್ಕಾರದಿಂದ ಸ್ಥಾಪಿತವಾದ ಯಾವುದೇ ನಿಗಮಕ್ಕೂ ಈ ವಿನಾಯಿತಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್